Sunday, Jan 19 2020 | Time 19:59 Hrs(IST)
 • ಗೊಟಬಯಾ ರಾಜಪಕ್ಸೆ ಭೇಟಿಯಾದ ಅಜಿತ್ ದೋವಲ್: 50 ಮಿಲಿಯನ್ ಅಮೆರಿಕನ್ ಡಾಲರ್ ನೆರವಿನ ವಾಗ್ದಾನ
 • ವಿಮಾನ ನಿಲ್ದಾಣದಲ್ಲಿ ಸಿಎಎ ವಿರುದ್ಧ ಘೋಷಣೆ ಕೂಗಿದ ವ್ಯಕ್ತಿ ಬಂಧನ
 • ಪರಿಸರ ಸಂರಕ್ಷಣೆಗೆ ಬಿಹಾರದಲ್ಲಿ ಐತಿಹಾಸಿಕ ಮಾನವ ಸರಪಳಿ- ನಿತೀಶ್ ಕುಮಾರ್
 • ಮಹಾರಾಷ್ಟ್ರದಲ್ಲಿ ಎನ್‌ಆರ್‌ಸಿ ಜಾರಿಗೆ ಅವಕಾಶ ನೀಡುವುದಿಲ್ಲ: ಎನ್‌ಸಿಪಿ ನಾಯಕ ಜಿತೇಂದ್ರ
 • ಕಪ್ಪು ಪಟ್ಟಿ ಕಟ್ಟುವ ಮೂಲಕ ಬಾಪು ನಾಡಕರ್ಣಿಗೆ ಗೌರವ ಸಲ್ಲಿಸಿದ ಭಾರತ
 • ಸ್ಮಿತ್ ಅಬ್ಬರದ ಶತಕ : ಭಾರತಕ್ಕೆ 287 ರನ್ ಗುರಿ ನೀಡಿದ ಆಸ್ಟ್ರೇಲಿಯಾ
 • ಪಂದ್ಯದ ವೇಳೆಯೇ ಎಕ್ಸ್ ರೆಗೆ ತೆರಳಿದ ಶಿಖರ್ ಧವನ್
 • ಚಹಾ ಉತ್ಪಾದನೆ ಕಾರ್ಮಿಕರ ಮೇಲೆ ಅವಲಂಭಿತ: ಐಟಿಎ
 • ಸಿಎಎ ಜಾರಿ ಅಗತ್ಯವಿರಲಿಲ್ಲ : ಶೇಖ್ ಹಸೀನಾ
 • ಪೃಥ್ವಿ ಶಾ ಅಬ್ಬರದ ಶತಕ: ಭಾರತ ಎ ತಂಡಕ್ಕೆ ಎರಡನೇ ಗೆಲುವು
 • ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ಅಗತ್ಯವಿರಲಿಲ್ಲ; ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ
 • ಭದ್ರತಾ ಕಾರಣ ನೀಡಿ ಸಾಹಿತ್ಯ ಉತ್ಸವ ಕಾರ್ಯಕ್ರಮಕ್ಕೆ ಬಾರದ ಕೇರಳ ರಾಜ್ಯಪಾಲ
 • ಪ್ಲಾಸ್ಟಿಕ್, ನಗರ ತ್ಯಾಜ್ಯದಿಂದ ಇಂಧನ ಉತ್ಪಾದನೆಗೆ ಆದ್ಯತೆ: ಡಾ ಎಂ ಎಂ ಕುಟ್ಟಿ
 • ಬಿನೋದಿನಿ ದಾಸಿ ಚಿತ್ರದಲ್ಲಿ ನಟಿಸಲು ದೀಪಿಕಾ ನಕಾರ
 • ಸಿಎಎ ಪೌರತ್ವ ನೀಡುತ್ತದೆಯೇ ಹೊರತು ಕಸಿದುಕೊಳ್ಳುವುದಿಲ್ಲ: ನಿರ್ಮಲಾ ಸೀತಾರಾಮನ್
International Share

ಲಿಬಿಯಾದ ಟ್ರಿಪೋಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡಿಸೆಂಬರ್ 12ರಂದು ಪುನಾರಂಭ

ಟ್ರಿಪೋಲಿ, ಡಿ.2 (ಕ್ಸಿನ್ಹುವಾ) ರಾಜಧಾನಿ ಟ್ರಿಪೊಲಿಯ ಮಿಟಿಗಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಡಿಸೆಂಬರ್ 12ರಂದು ವಿಮಾನಯಾನವನ್ನು ಪುನರಾರಂಭಿಸಲಿದೆ ಎಂದು ವಿಶ್ವಸಂಸ್ಥೆ ಬೆಂಬಲಿತ ಲಿಬಿಯಾ ಸರ್ಕಾರದ ಸಾರಿಗೆ ಸಚಿವಾಲಯ ಭಾನುವಾರ ಪ್ರಕಟಿಸಿದೆ.

ಯೋಜನೆಗಳ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚಿಸಲು ಸಭೆ ನಡೆಸಲಾಗಿದ್ದು, ಡಿಸೆಂಬರ್ 12 ರಂದು ವಿಮಾನ ನಿಲ್ದಾಣವನ್ನು ಪುನಃ ಆರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಮಿಟಿಗಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಶೆಲ್‌ ದಾಳಿ ನಂತರ ಸೆಪ್ಟೆಂಬರ್‌ನಲ್ಲಿ ಇದನ್ನು ಮುಚ್ಚಲಾಗಿತ್ತು, ಎಲ್ಲಾ ವಿಮಾನಗಳನ್ನು ಟ್ರಿಪೋಲಿಯಿಂದ ಪೂರ್ವಕ್ಕೆ 200 ಕಿ.ಮೀ ದೂರದಲ್ಲಿರುವ ಮಿಸುರಾಟಾ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗುತ್ತಿತ್ತು.

ಖಲೀಫಾ ಹಫ್ತಾರ್ ನೇತೃತ್ವದ ಪೂರ್ವದ ಸೈನ್ಯವು ಟ್ರಿಪೋಲಿ ಮತ್ತು ಸುತ್ತಮುತ್ತಲಿನ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ನಗರವನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ವಿಶ್ವಸಂಸ್ಥೆ ಬೆಂಬಲಿತ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ.

ಹೋರಾಟದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ, 120,000 ಕ್ಕೂ ಹೆಚ್ಚು ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ.
ವಿಶ್ವಸಂಸ್ಥೆ ಘಟನೆಯನ್ನು ತೀವ್ರವಾಗಿ ಖಂಡಿಸಿದ ಹೊರತಾಗಿಯೂ, ಸಶಸ್ತ್ರ ಸಂಘರ್ಷದ ಆರಂಭದಿಂದಲೂ ಮಿಟಿಗಾ ಮತ್ತು ಮಿಸುರಾಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಪದೇ ಪದೇ ಗುರಿಯಾಗಿಸಲಾಗುತ್ತಿದೆ.
ಯುಎನ್ಐ ಎಎಚ್ 1015
More News
ಸಿಎಎ ಜಾರಿ ಅಗತ್ಯವಿರಲಿಲ್ಲ : ಶೇಖ್ ಹಸೀನಾ

ಸಿಎಎ ಜಾರಿ ಅಗತ್ಯವಿರಲಿಲ್ಲ : ಶೇಖ್ ಹಸೀನಾ

19 Jan 2020 | 6:32 PM

ದುಬೈ, ಜನವರಿ 19 (ಯುಎನ್ ಐ) ಭಾರತ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯವಿರಲಿಲ್ಲ, ಮೇಲಾಗಿ ಇದರ ಉದ್ದೇಶವೂ ಅರ್ಥವಾಗುತ್ತಿಲ್ಲ ಎಂದು ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಪ್ರತಿಕ್ರಿಯೆ ನೀಡಿದ್ದಾರೆ.

 Sharesee more..