Wednesday, Feb 26 2020 | Time 12:40 Hrs(IST)
 • ದೆಹಲಿ ಹಿಂಸಾಚಾರ; ಮೃತರ ಸಂಖ್ಯೆ 20ಕ್ಕೇರಿಕೆ, ಸೇನೆ ನಿಯೋಜನೆಗೆ ಕೇಜ್ರೀವಾಲ್ ಮನವಿ
 • ಗಲಭೆ ಕೋರರನ್ನು ಮಟ್ಟ ಹಾಕಿ ಪೊಲೀಸರಿಗೆ ದೆಹಲಿ ಹೈಕೋರ್ಟ್ ಖಡಕ್ ಎಚ್ಚರಿಕೆ
 • ದೆಹಲಿ ಹಿಂಸಾಚಾರ: ಸಾವಿನ ಸಂಖ್ಯೆ 20ಕ್ಕೆ ಏರಿದೆ
 • ಕಾಶ್ಮೀರದ ಬುದ್ಗಾಮ್‌ನಲ್ಲಿ ಎನ್‌ಐಎ ದಾಳಿ
 • ದೆಹಲಿ ಹಿಂಸಾಚಾರ: ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
 • ಕಾರ್ಮಿಕನ ಬರ್ಬರ ಹತ್ಯೆ
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
Sports Share

ವಾರ್ನರ್‌ ಪರ ಬ್ಯಾಟ್‌ ಬೀಸಿದ ಜಸ್ಟಿನ್‌ ಲ್ಯಾಂಗರ್‌

ಲಂಡನ್‌, ಸೆ 11 (ಯುಎನ್‌ಐ) ಸತತ ವೈಫಲ್ಯ ಅನುಭವಿಸಿರುವ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಅವರ ಪರ ಬ್ಯಾಟ್‌ ಬೀಸಿರುವ ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಇನ್ನುಳಿದ ಅಂತಿಮ ಪಂದ್ಯದ ಗೆಲುವಿಗೆ ಎಡಗೈ ಬ್ಯಾಟ್ಸ್‌ಮನ್‌ ನೆರವಾಗಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡೇವಿಡ್‌ ವಾರ್ನರ್‌ ಅವರು ಇದುವರೆಗೂ ಆಡಿರುವ ಒಟ್ಟು ನಾಲ್ಕು ಪಂದ್ಯಗಳಿಂದ ಗಳಿಸಿರುವುದು ಕೇವಲ 79 ರನ್‌ ಮಾತ್ರ. ಎಂಟು ಬಾರಿ ಔಟ್‌ ಆಗಿರುವ ಅವರು ಆರು ಬಾರಿ ಸ್ಟುವರ್ಟ್‌ ಬ್ರಾಡ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ.
"ಡೇವಿಡ್‌ ವಾರ್ನರ್‌ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌. ಅವರ ಪಾಲಿಗೆ ಪ್ರಸ್ತುತ ಆ್ಯಶಸ್‌ ಸರಣಿ ಅಷ್ಟೊಂದು ಉತ್ತಮವಾಗಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಒಂದೇ ಒಂದು ಇನಿಂಗ್ಸ್‌ನಲ್ಲಿ ಅವರ ಬ್ಯಾಟಿಂಗ್‌ ಲಯಕ್ಕೆ ಬಂದರೆ ನಾವು ಆ್ಯಶಸ್‌ ಸರಣಿ ಗೆಲ್ಲುವುದು ಖಂಡಿತ ಎಂದರು.
ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದ ದೂರ ಉಳಿದಿದ್ದ ಡೇವಿಡ್‌ ವಾರ್ನರ್‌ ಪಾಲಿಗೆ ಇದೇ ಮೊದಲ ಟೆಸ್ಟ್ ಸರಣಿ ಆಗಿದೆ. ಇದಕ್ಕೂ ಮೊದಲು ಅವರ ಐಸಿಸಿ ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್‌ ಮಾಡಿ 647ರನ್‌ ಗಳಿಸಿದ್ದರು. ಆದರೆ, ಆ್ಯಶಸ್‌ ಟೆಸ್ಟ್‌ ಸರಣಿಯ ನಾಲ್ಕು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ.
ಒಂದು ವರ್ಷ ಶಿಕ್ಷೆ ಅನುಭವಿಸಿ ತಂಡದ ಮರಳಿದ್ದ ಡೇವಿಡ್‌ ವಾರ್ನರ್‌ ಸೀಮಿತ ಓವರ್‌ಗಳಲ್ಲಿ ಅಸಾಧರಣ ಪ್ರದರ್ಶನ ತೋರಿದ್ದರು. ಆದರೆ, ಟೆಸ್ಟ್‌ನಲ್ಲಿ ಅವರು ಇನ್ನೂ ಲಯಕ್ಕೆ ಮರಳಿಲ್ಲ. ಮುಂದಿನ ಪಂದ್ಯದಲ್ಲಿ ಅವರು ಖಂಡಿತ ಆಡಲಿದ್ದಾರೆ. ಅವರ ಬ್ಯಾಟಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ತಂಡ ಆ್ಯಶಸ್‌ ಗೆಲ್ಲಲಿದೆ ಎಂದು ಭರವಸೆಯನ್ನು ಲ್ಯಾಂಗರ್‌ ನೀಡಿದ್ದಾರೆ.
ಯುಎನ್‌ಐ ಆರ್‌ಕೆ ಎಎಚ್‌ 1133
More News

ಮಾರ್ಚ 2ರಿಂದ ಚೆನ್ನೈ ಅಭ್ಯಾಸ

25 Feb 2020 | 7:24 PM

 Sharesee more..

ಏಷ್ಯಾ, ವಿಶ್ವ ಇಲೆವೆನ್ ತಂಡ ಪ್ರಕಟ

25 Feb 2020 | 7:23 PM

 Sharesee more..
ರನ್ ಹೊಳೆ ಹರಿಸಿದರೂ ಟೆಸ್ಟ್‌ನಲ್ಲಿ ರಾಹುಲ್‌ಗೆ ಅವಕಾಶವಿಲ್ಲ ಏಕೆ ? : ಕಪಿಲ್ ದೇವ್

ರನ್ ಹೊಳೆ ಹರಿಸಿದರೂ ಟೆಸ್ಟ್‌ನಲ್ಲಿ ರಾಹುಲ್‌ಗೆ ಅವಕಾಶವಿಲ್ಲ ಏಕೆ ? : ಕಪಿಲ್ ದೇವ್

25 Feb 2020 | 7:03 PM

ನವದೆಹಲಿ, ಫೆ 25 (ಯುಎನ್ಐ) ಸೀಮಿತ ಓವರ್‌ಗಳ ಸ್ವರೂಪದಲ್ಲಿ ಅತ್ಯದ್ಭುತ ಪ್ರದರ್ಶನದ ಹೊರತಾಗಿಯೂ ನ್ಯೂಜಿಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಕೆ.ಎಲ್ ರಾಹುಲ್ ಅವರನ್ನು ಕೈ ಬಿಟ್ಟಿರುವುದನ್ನು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

 Sharesee more..