Tuesday, Jun 25 2019 | Time 12:59 Hrs(IST)
  • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
  • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
  • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
  • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
  • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
  • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
  • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
  • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
  • ಕಂದಕಕ್ಕೆ ಉರುಳಿದ ಬಸ್: ಐವರು ಸಾವು, 40 ಮಂದಿಗೆ ಗಾಯ
  • ಭಾರತದ 1983ರ ಚೊಚ್ಚಲ ವಿಶ್ವಕಪ್‌ಗೆ 36ರ ವರ್ಷಗಳ ಸಂಭ್ರಮ
  • ಬಿಜೆಪಿ ನಾಯಕ ಮದನ್ ಲಾಲ್ ಸೈನಿ ನಿಧನದ ಹಿನ್ನೆಲೆ; ಬಿಜೆಪಿ ಸಂಸದೀಯ ಸಭೆ ರದ್ದು
  • ಉತ್ತಮ ಪ್ರದರ್ಶನ ತೋರಲು ಫಿಟ್ನೆಸ್‌ ಕಾರಣ: ಶಕೀಬ್‌
  • ಸಚಿವ ಡಾ ಜೈಶಂಕರ್ ಗುಜರಾತ್‌ನಿಂದ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ
  • ತುರ್ತುಪರಿಸ್ಥಿತಿ ವಿರೋಧಿಸಿದ ನಾಗರಿಕರು, ನಾಯಕರಿಗೆ ಪ್ರಧಾನಿ, ಅಮಿತ್ ಶಾ ಗೌರವ
  • ಇಂದಿನಿಂದ ಮೈಕ್ ಪೊಂಪಿಯೋ ಮೂರು ದಿನಗಳ ಭಾರತ ಭೇಟಿ
Sports Share

ವಿಶ್ವಕಪ್ ಅಭ್ಯಾಸ ಪಂದ್ಯ; ಆಸ್ಟ್ರೇಲಿಯಾ-ಶ್ರೀಲಂಕಾ ಸೆಣಸಾಣ ನಾಳೆ

ಲಂಡನ್, ಮೇ 26 (ಯುಎನ್‍ಐ)- ಐಸಿಸಿ ವಿಶ್ವಕಪ್ ಪುರುಷರ ಕ್ರಿಕೆಟ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಸೋಮವಾರ ಆಸ್ಟ್ರೇಲಿಯಾ-ಶ್ರೀಲಂಕಾ ತಂಡದ ವಿರುದ್ಧ ಕಾದಾಟ ನಡೆಸಿದರೆ, ಇಂಗ್ಲೆಂಡ್-ಅಪ್ಘಾನಿಸ್ತಾನ್ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ.
ಈ ಬಾರಿಯ ವಿಶ್ವಕಪ್ ನ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಆಸೀಸ್, ಎರಡನೇ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೆಣಸಲಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಲಂಕಾ, ಎರಡನೇ ಅಭ್ಯಾಸ ಪಂದ್ಯದಲ್ಲಿ ಪುಟಿದೇಳುವ ಲೆಕ್ಕಾಚಾರ ಹಾಕಿಕೊಂಡಿದೆ.
ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಸ್ಟಾರ್ ಆಟಗಾರ ಸ್ಟೀವನ್ ಸ್ಮಿತ್ ಶತಕ ಬಾರಿಸಿ ಅಬ್ಬರಿಸಿದ್ದು, ಮತ್ತೊಮ್ಮೆ ರನ್ ಕಲೆ ಹಾಕುವ ಪ್ಲಾನ್ ಮಾಡಿಕೊಂಡಿದ್ದಾರೆ.
ಇನ್ನು ಆಸ್ಟ್ರೇಲಿಯಾ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲಿ ಸೋಲು ಕಂಡಿರುವ ಇಂಗ್ಲೆಂಡ್ ತಂಡ, ಎರಡನೇ ಅಭ್ಯಾಸ ಪಂದ್ಯದಲ್ಲಿ ಪಾಕ್ ತಂಡಕ್ಕೆ ಸೋಲಿನ ರುಚಿಯನ್ನು ತೋರಿಸಿರುವ ಆಪ್ಘಾನಿಸ್ತಾನ್ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. ಉಭಯ ತಂಡಗಳಿಗೂ ಈ ಪಂದ್ಯ ಕೊನೆಯದಾಗಿದ್ದು, ಗೆಲುವಿನ ಲೆಕ್ಕಾಚಾರವನ್ನು ಹಾಕಿಕೊಂಡಿವೆ.
ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ಶುಭಾರಂಭ ಮಾಡುವ ಇರಾದೆ ಹೊಂದಿದ್ದು, ಪ್ರಧಾನ ಸುತ್ತಿಗೂ ಮುನ್ನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ.
ಯುಎನ್‍ಐ ವಿಎನ್‍ಎಲ್ ಡಿವಿ 1738