Tuesday, Jan 21 2020 | Time 00:17 Hrs(IST)
Sports Share

ಶಿಖರ್ ಧವನ್ ಅರ್ಧಶತಕ : ಆಸ್ಟ್ರೇಲಿಯಾ ತಂಡಕ್ಕೆೆ 256 ರನ್ ಗುರಿ

ಮುಂಬೈ, ಜ 14 (ಯುಎನ್‌ಐ) ಮಿಚೆಲ್ ಸ್ಟಾರ್ಕ್(44 ಕ್ಕೆೆ 3) ಅವರ ಮಾರಕ ದಾಳಿಯ ನಡುವೆಯೂ ಶಿಖರ್ ಧವನ್ (74 ರನ್, 91 ಎಸೆತಗಳು) ಅರ್ಧಶತಕದ ಬಲದಿಂದ ಭಾರತ ತಂಡ ಮೊದಲನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆೆ ಸ್ಫರ್ಧಾತ್ಮಕ ಗುರಿ ನೀಡಿದೆ.
ಇಲ್ಲಿನ, ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 49.1 ಓವರ್ ಗಳಿಗೆ 255 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಪ್ರವಾಸಿಗರಿಗೆ 256 ರನ್ ಗುರಿ ನೀಡಿದೆ.
ಆರಂಭಿಕರಾಗಿ ಕಣಕ್ಕೆೆ ಇಳಿದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೋಡಿ ಭಾರತಕ್ಕೆೆ ಉತ್ತಮ ಆರಂಭ ನೀಡುವಲ್ಲಿ ವಿಫಲವಾಯಿತು. ಹಿಟ್‌ಮನ್ ಖ್ಯಾತಿಯ ರೋಹಿತ್ ಶರ್ಮಾ ಅವರು ಕೇವಲ 10 ರನ್ ಗಳಿಸಿ ಮಿಚೆಲ್ ಸ್ಟಾರ್ಕ್ ಗೆ ವಿಕೆಟ್ ಒಪ್ಪಿಸಿದರು.
ಧವನ್-ರಾಹುಲ್ ಜುಗಲ್‌ಬಂದಿ:
ತಂಡದ ಮೊತ್ತ 13 ರನ್ ಗಳಿಗೆ ಒಂದು ವಿಕೆಟ್ ಕಳೆದುಕೊಂಡಾಗ ಜತೆಯಾಟ ಶಿಖರ ಧವನ್ ಹಾಗೂ ಕೆ.ಎಲ್ ರಾಹುಲ್ ಜೋಡಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿತು. ಆಸ್ಟ್ರೇಲಿಯಾ ಮಾರಕ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಯಿತು. ಈ ಜೋಡಿ ಎರಡನೇ ವಿಕೆಟ್‌ಗೆ 121 ರನ್ ಗಳಿಸಿ ತಂಡಕ್ಕೆೆ ಭರ್ಜರಿ ಆರಂಭ ನೀಡಿತು. 61 ಎಸೆತಗಳಿಗೆ 47 ರನ್ ಗಳಿಸಿ ಅದ್ಭುತ ಬ್ಯಾಟಿಂಗ್ ಮುಂದುವರಿಸಿದ್ದ ಕನ್ನಡಿಗ ರಾಹುಲ್ ಕೇವಲ ಮೂರು ರನ್ ಗಳಿಂದ ಅರ್ಧಶತಕ ವಂಚಿತರಾದರು. ಆ್ಯಸ್ಟನ್ ಅಗರ್ ಎಸೆತದಲ್ಲಿ ಸ್ವೀವನ್ ಸ್ಮಿತ್‌ಗೆ ಕ್ಯಾಚಿತ್ತರು.
ಕಳಪೆ ಲಯದಿಂದ ಟೀಕೆಗಳಿಗೆ ಒಳಗಾಗಿದ್ದ ಶಿಖರ್ ಧವನ್ ಅವರು ಮೊದಲನೇ ಏಕದಿನ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದರು. ಅದ್ಭುತ ಬ್ಯಾಾಟಿಂಗ್ ಪ್ರದರ್ಶನ ತೋರಿದ ಧವನ್, ವೃತ್ತಿ ಜೀವನದ 28ನೇ ಅರ್ಧಶತಕ ಪೂರೈಸಿದರು. ಅಲ್ಲದೇ, ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ ಸಾವಿರ ರನ್ ಪೂರೈಸಿದರು. ಆ ಮೂಲಕ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಧೋನಿ ಅವರ ಪಟ್ಟಿಗೆ ಸೇರ್ಪಡೆಯಾದರು. 91 ಎಸೆತಗಳನ್ನು ಎದುರಿಸಿದ ಅವರು, ಒಂದು ಸಿಕ್ಸರ್ ಹಾಗೂ ಒಂಬತ್ತು ಬೌಂಡರಿಯೊಂದಿಗೆ 74 ರನ್ ಗಳಿಸಿದರು. ನಂತರ, ಇವರು ಪ್ಯಾಟ್ ಕಮಿನ್ಸ್‌ ಎಸೆತದಲ್ಲಿ ಅಗರ್‌ಗೆ ಕ್ಯಾಚ್ ನೀಡಿದರು.
ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಾಯಕ ವಿರಾಟ್ ಕೊಹ್ಲಿ (16) ಹಾಗೂ ಶ್ರೇಯಸ್ ಅಯ್ಯರ್ (4) ಬೇಗ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ (28) ಹಾಗೂ ರವೀಂದ್ರ ಜಡೇಜಾ (25) ತಂಡಕ್ಕೆೆ ಅಲ್ಪ ಕಾಣಿಕೆ ನೀಡಿದರು. ಕೊನೆಯ ಹಂತದಲ್ಲಿ ಶಾರ್ದೂಲ್ ಠಾಕೂರ್ (13), ಮೊಹಮ್ಮದ್ ಶಮಿ(10) ಹಾಗೂ ಕುಲ್ದೀಪ್ ಯಾದವ್ (17) ನಿರಾಸೆ ಮಾಡಲಿಲ್ಲ.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮೂರು ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್‌ ಮತ್ತು ಕೇನ್ ವಿಲಿಯಮ್ಸನ್ ತಲಾ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ: 49.1 ಓವರ್ ಗಳಿಗೆ 255/10 (ಶಿಖರ್ ಧವನ್ 74, ಕೆ.ಎಲ್ ರಾಹುಲ್ 47, ರಿಷಭ್ ಪಂತ್ 28, ರವೀಂದ್ರ ಜಡೇಜಾ 25; ಮಿಚೆಲ್ ಸ್ಟಾರ್ಕ್ 56 ಕ್ಕೆೆ 3, ಕೇನ್ ರಿಚರ್ಡ್‌ಸನ್ 43 ಕ್ಕೆೆ 2, ಪ್ಯಾಟ್ ಕಮಿನ್ಸ್‌ 44 ಕ್ಕೆೆ 2)
ಯುಎನ್‌ಐ ಆರ್ ಕೆ 1731