Saturday, Jul 11 2020 | Time 11:30 Hrs(IST)
  • ಪುಲ್ವಾಮದಲ್ಲಿ ಭದ್ರತಾ ಪಡೆಯಿಂದ ಶೋಧ ಕಾರ್ಯಾಚರಣೆ
  • ಬಾರಮುಲ್ಲಾ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರ ಹತ್ಯೆ
Sports Share

ಶೂಮಾಕರ್ ದಾಖಲೆ ಸರಿಗಟ್ಟುವ ವಿಶ್ವಾಸದಲ್ಲಿ ಹ್ಯಾಮಿಲ್ಟನ್

ಸ್ಪೇಲ್ ಬರ್ಗ್, ಜೂನ್ 29 (ಯುಎನ್ಐ)
ಕೋವಿಡ್-19 ಪಿಡುಗನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಗಿತಗೊಳಿಸಲಾಗಿದ್ದ ಈ ಋತುವಿನ ಫಾರ್ಮಾಲಾ 1 ರೇಸ್ ಈ ವಾರ ಪುನರಾರಂಭವಾಗಲಿದ್ದು, ಹಾಲಿ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಅವರು ಮೈಕಲ್ ಶೂಮಾಕರ್ ಅವರ ದಾಖಲೆ ಸರಿಗಟ್ಟಲು ಎದುರು ನೋಡುತ್ತಿದ್ದಾರೆ.
ಸ್ಪೇಲ್ ಬರ್ಗ್ ನ ಆಸ್ಟ್ರೀಯಾ ರೆಡ್ ಬುಲ್ ರಿಂಗ್ ನಲ್ಲಿ ಈ ಋತುವಿನ ಮೊದಲ ರೇಸ್ ನಡೆಯುತ್ತಿದ್ದು, ಎಲ್ಲ ಫಾರ್ಮುಲಾ 1 ರೇಸ್ ನ ಅಭಿಮಾನಿಗಳ ಕಣ್ಣು ಇದರ ಮೇಲೆ ನೆಟ್ಟಿದೆ. ಸಾರ್ವಕಾಲಿಕ ದಾಖಲೆ (ಏಳು ಬಾರಿ ಚಾಂಪಿಯನ್) ಹೊಂದಿರುವ ಶೂಮಾಕರ್ ದಾಖಲೆ ಸರಿಗಟ್ಟಲು ಹಾತೊರೆಯುತ್ತಿರುವ ಆರು ಬಾರಿಯ ಚಾಂಪಿಯನ್ ಹ್ಯಾಮಿಲ್ಟನ್, ಕೊರೊನಾದಂತಹ ಸಾಂಕ್ರಮಿಕ ರೋಗದ ಮಧ್ಯೆಯು, ಕ್ರೀಡೆಯ ಯಶಸ್ವಿ ನಿರ್ವಹಣೆಗಾಗಿ ಅಧಿಕಾರಿಗಳು ಜಾರಿಗೆ ತಂದ ಎಲ್ಲ ಬದಲಾವಣೆಗಳನ್ನು ನಾವೆಲ್ಲರೂ ಅನುಸರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಫಾರ್ಮುಲಾ 1 ಮತ್ತು ನಾವೆಲ್ಲರೂ ಅನುಭವಿಸಿರುವ ಅತ್ಯಂತ ಕಠಿಣ ಋತುವಿಗಾಗಿ ನಾವು ಸಾಧ್ಯವಾದಷ್ಟು ಉತ್ತಮ ಮಾರ್ಗವನ್ನು ಸಿದ್ಧಪಡಿಸುತ್ತಿದ್ದೇವೆ," ಎಂದು ಹ್ಯಾಮಿಲ್ಟನ್ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.
ಯುಎನ್ಐಆರ್ ಕೆ 1912