Thursday, Nov 21 2019 | Time 22:01 Hrs(IST)
 • ವಿಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ
 • ಕರ್ನಾಟಕಕ್ಕೆೆ 159 ರನ್ ಗುರಿ ನೀಡಿದ ತಮಿಳುನಾಡು
 • ಉಪ ಚುನಾವಣೆಗೆ ಅಖಾಡ ಸಜ್ಜು: 53 ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್, 165 ಅಭ್ಯರ್ಥಿಗಳು ಕಣದಲ್ಲಿ: ಸಂಜೀವ್ ಕುಮಾರ್
 • ಟಿ-20 ಮಹಿಳಾ ಶ್ರೇಯಾಂಕ: ರೊಡ್ರಿಗಸ್, ರಾಧ ಯಾದವ್‌ಗೆ ಬಂಪರ್
 • ದಾದಾ ದಾಖಲೆ ಸನಿಹದಲ್ಲಿ ವಿರಾಟ್ ಕೊಹ್ಲಿ
 • ಬಿಜೆಪಿ ಒತ್ತಡದಿಂದ ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ:ಹೆಚ್ ಡಿ ದೇವೇಗೌಡ
 • ಎಲ್ಲ ಬ್ಯಾಟ್ಸ್‌‌ಮನ್‌ಗಳು ಶೂನ್ಯಕ್ಕೆೆ ಔಟ್ ! : ಶಾಲಾ ಟೂರ್ನಿಯಲ್ಲಿ ಅನಗತ್ಯ ದಾಖಲೆ
 • ನಗರಗಳ ಕಾಡುಗಳೇ ನಗರಗಳ ಶ್ವಾಸಕೋಶ: ಜಾವಡೇಕರ್
 • ಮೀನುಗಾರಿಕೆ ನಿಯಂತ್ರಣ ನೀತಿ ತಿದ್ದುಪಡಿಗೆ ಪ್ರಸ್ತಾವನೆ ; ಸಚಿವ ಶ್ರೀನಿವಾಸ ಪೂಜಾರಿ
 • ಕೊರಿಯಾ ಓಪನ್: ಎರಡನೇ ಸುತ್ತಿನಲ್ಲಿ ಶ್ರೀಕಾಂತ್, ಸಮೀರ್‌ಗೆ ಸೋಲು
 • ರೋಗಿ, ಬಸುರಿ, ಬಾಣಂತಿಯರಿಗಿಲ್ಲಿ ಜೋಲಿಯೇ ಜೀವ, ಸೌರ ವಿದ್ಯುತ್ ಜೀವ ರಕ್ಷಕ: ಮಲೆಮಹದೇಶ್ವರ ಬೆಟ್ಟದ ಗ್ರಾಮಗಳ ಬದುಕು ಬೆಳಗಿಸಿದ ಸೆಲ್ಕೋ
 • ಅರಣ್ಯ ಕಾಯ್ದೆ ಕುರಿತು ಜಾವಡೇಕರ್ ಹೇಳಿಕೆ ಚುನಾವಣಾ ಆಯೋಗದಿಂದ ಪರಿಶೀಲನೆ
 • ಆಯೋಧ್ಯೆ ತೀರ್ಪು; ಪುರಿಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅತೃಪ್ತಿ
 • ಕ್ರಿಕೆಟ್ ಆಡುವ ವಿಚಾರದಲ್ಲಿ ಜಗಳ: ಬಿಬಿಎಂ ವಿದ್ಯಾರ್ಥಿ ಕೊಲೆ
 • ನಾಳೆ ಕಲಬುರಗಿ ವಿಮಾನ ನಿಲ್ದಾಣ ಲೋಕಾರ್ಪಣೆ
Entertainment Share

ಶಿವಣ್ಣ ಅಭಿಮಾನಿಗಳ ದಿಲ್‌ಖುಷ್: 'ಆಯುಷ್ಮಾನ್‌ಭವ' ನ. ೧೫ರಂದು ರಾಜ್ಯಾದ್ಯಂತ ತೆರೆಗೆ

ಬೆಂಗಳೂರು, ನ ೦೮ (ಯುಎನ್‌ಐ) ಅಂತೂ ಇಂತೂ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ಪಿ ವಾಸು ನಿರ್ದೇಶನದ 'ಆಯುಷ್ಮಾನ್‌ಭವ’ ಚಿತ್ರ ಮುಂದಿನ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ
ನವೆಂಬರ್ ೧ರಂದೇ ಚಿತ್ರ ಬಿಡುಗಡೆಗೊಳಿಸಲು ನಿರ್ಮಾಪಕ ದ್ವಾರಕೀಶ್ ಪ್ರಯತ್ನಿಸಿದ್ದರು. ಖಂಡಿತಾ ಅಂದೇ ಬಿಡುಗಡೆಗೆ ಅವಕಾಶ ಸಿಗುತ್ತದೆ ಎಂಬ ಆತ್ಮವಿಶ್ವಾಸದಲ್ಲಿ ದಿನಾಂಕವನ್ನೂ ಘೋಷಿಸಿದ್ದರು. ಆದರೆ ಸೆನ್ಸಾರ್ ಅರ್ಹತಾ ಪತ್ರ ಕೈ ಸೇರದ ಕಾರಣ ಚಿತ್ರ ಬಿಡುಗಡೆ ವಿಳಂಬವಾಗಿತ್ತು.
ನವೆಂಬರ್ ೧ ರಂದು ಬೆಳ್ಳಿಪರದೆಯ ಮೇಲೆ ಶಿವಣ್ಣನನ್ನು ನೋಡಬೇಕೆಂದು ಕಾದುಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು ಸುಳ್ಳಲ್ಲ. ಅಂತೂ ಇಂತೂ ಸೆನ್ಸಾರ್ ಯು/ಎ ಅರ್ಹತಾ ಪತ್ರ ನೀಡಿದ್ದು, ನ. ೧೫ರಂದು ಬೆಂಗಳೂರಿನ ಸಂತೋಷ್, ಪ್ರಸನ್ನ ಸೇರಿದಂತೆ ರಾಜ್ಯಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ’ಆಯುಷ್ಮಾನ್‌ಭವ’ ಬಿಡುಗಡೆಯಾಗಲಿದೆ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ದ್ವಾರಕೀಶ್ ಚಿತ್ರ ಲಾಂಛನದಲ್ಲಿ ಬಿ ಎಸ್ ದ್ವಾರಕೀಶ್ ಹಾಗೂ ಯೋಗೀಶ್ ದ್ವಾರಕೀಶ್ ಅವರು ಈ ಚಿತ್ರ ನಿರ್ಮಿಸಿದ್ದಾರೆ
ದ್ವಾರಕೀಶ್ ಚಿತ್ರ ಸಂಸ್ಥೆಗೆ ೫೦ ವರ್ಷ ತುಂಬಿದ್ದು, ಆ ಸಂಸ್ಥೆಯಿಂದ ನಿರ್ಮಾಣವಾಗಿರುವ ೫೨ನೇ ಚಿತ್ರ ’ಆಯುಷ್ಮಾನ್ ಭವ’.
ಪಿ.ವಾಸು ನಿರ್ದೇಶನದ ಈ ಚಿತ್ರಕ್ಕೆ ಬೆಂಗಳೂರು, ಗೌರಿಬಿದನೂರು, ಅಲೇಪಿ, ಚಾಲ್‌ಕುಡಿ, ಮಂಗಳೂರು, ಮಡಿಕೇರಿ, ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಇದು ಗುರುಕಿರಣ್ ಸಂಗೀತ ನಿರ್ದೇಶನದ ೧೦೦ನೇ ಚಿತ್ರ ಎಂಬುದು ವಿಶೇಷ.
ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ಗೌತಮ್‌ರಾಜು ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಎ. ಹರ್ಷ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಶಿವರಾಜಕುಮಾರ್, ಅನಂತನಾಗ್, ರಚಿತಾರಾಮ್, ನಿಧಿಸುಬ್ಬಯ್ಯ, ಸುಹಾಸಿನಿ, ಶಿವಾಜಿಪ್ರಭು, ಸಾಧುಕೋಕಿಲ, ರಂಗಾಯಣ ರಘು, ಯಶ್ ಶೆಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಯುಎನ್‌ಐ ಎಸ್‌ಎ ವಿಎನ್ ೧೧೧೧
More News

ನವರಸನಾಯಕ ಜಗ್ಗೇಶ್ ಸಿನಿ ಪಯಣಕ್ಕೆ ೩೮ ವರ್ಷ

21 Nov 2019 | 8:27 AM

 Sharesee more..
ಅಮೆರಿಕಾದಲ್ಲಿ ‘ನ್ಯೂರಾನ್’ ಟ್ರೇಲರ್‌ಗೆ ಮೆಚ್ಚುಗೆ

ಅಮೆರಿಕಾದಲ್ಲಿ ‘ನ್ಯೂರಾನ್’ ಟ್ರೇಲರ್‌ಗೆ ಮೆಚ್ಚುಗೆ

20 Nov 2019 | 7:43 PM

ಬೆಂಗಳೂರು, ನ ೨೦ (ಯುಎನ್ಐ) ಫ್ರೆಂಡ್ಸ್ ಪ್ರೊಡಕ್ಷನ್ ಲಾಂಛನದಲ್ಲಿ ವಿನಯ್‌ಕುಮಾರ್.ವಿ.ಆರ್ ಅವರು ನಿರ್ಮಿಸಿರುವ ‘ನ್ಯೂರಾನ್‘ ಚಿತ್ರ ಶುಕ್ರವಾರ ರಾಜ್ಯಾದ್ಯಂತ ೬೫ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

 Sharesee more..