Sunday, Aug 25 2019 | Time 02:26 Hrs(IST)
National Share

ಸಚಿವರು ಸಂಸದೀಯ ಕರ್ತವ್ಯಗಳನ್ನು ತಪ್ಪಿಸದಂತೆ ಪ್ರಧಾನಿ ಎಚ್ಚರಿಕೆ

ಹೊಸದಿಲ್ಲಿ ಜುಲೈ 16 (ಯುಎನ್‌ಐ) ಸಂಸತ್ತಿನ ಉಭಯ ಸದನಗಳಲ್ಲಿ ಕರ್ತವ್ಯವನ್ನು ತ್ಯಜಿಸುವ ಯಾವುದೇ ಸಚಿವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬಿಜೆಪಿ ಸಂಸದರು ಮತ್ತು ಕೇಂದ್ರ ಸಚಿವರಿಗೆ ತಿಳಿಸಿದ್ದಾರೆ.
ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ, ಅವರು ತಮ್ಮ ಕರ್ತವ್ಯವನ್ನು ತ್ಯಜಿಸಿದರೆ ಅಥವಾ ಅನಾರೋಗ್ಯದ ಆಧಾರದ ಮೇಲೆ ಗೈರುಹಾಜರಾಗಿದ್ದರೆ ತಮಗೆ ತಿಳಿಸಬೇಕು ಎಂದು ಅವರು ಸ್ಪಷ್ಟವಾಗಿ ನಿರ್ದೇಶಿಸಿದರು.
ಹಾಲಿ ಅಧಿವೇಶನದಲ್ಲಿ ವ್ಯವಹಾರ ನಡೆಸಲು ಲೋಕಸಭೆಯು ತಡರಾತ್ರಿ ಸಭೆ ನಡೆಸಿದೆ ಎಂದು ಪ್ರಧಾನಿ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಗತ್ಯವಿದ್ದಲ್ಲಿ ನಡೆಯುತ್ತಿರುವ ಅಧಿವೇಶನವನ್ನು ವಿಸ್ತರಿಸಬಹುದು ಎಂದು ಮೋದಿ ಹೇಳಿದ್ದಾರೆ.
ಪ್ರಮುಖ ಮಸೂದೆಗಳನ್ನು ಅಂಗೀಕರಿಸುವ ಬಗ್ಗೆ ಮತ್ತು ಇತರ ಶಾಸಕಾಂಗ ಕಾರ್ಯಸೂಚಿಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಕುಷ್ಠರೋಗ ಮತ್ತು ಕ್ಷಯರೋಗದ ವಿರುದ್ಧ ಕಾರ್ಯಗಳನ್ನು ಕೈಗೊಳ್ಳುವಂತೆ ಅವರು ಪಕ್ಷದ ಸಂಸದರನ್ನು ಕೇಳಿದರು ಎಂದು ಮೂಲಗಳು ತಿಳಿಸಿವೆ.
ಯುಎನ್‌ಐ ಕೆಎಸ್‌ವಿ ವಿಎನ್‌ಎಲ್ 2238