Saturday, Feb 29 2020 | Time 14:41 Hrs(IST)
 • ಕಾಂಗ್ರೆಸ್ ಜತೆ ಜೆಡಿಎಸ್ ವಿಲೀನಗೊಳ್ಳಲು ಸಲಹೆ ನೀಡಿದ್ರಾ ಪ್ರಶಾಂತ್ ಕಿಶೋರ್ ?
 • ಅಕಾಲಿಕವಾಗಿ ಸಾವನ್ನಪ್ಪಿದ ನಾಲ್ವರು ಪತ್ರಕರ್ತರಿಗೆ ಮುಖ್ಯಮಂತ್ರಿಗಳಿಂದ ತಲಾ ೫ ಲಕ್ಷ ಪರಿಹಾರ ಘೋಷಣೆ
 • ದುಬೈ ಟೆನಿಸ್‌ ಚಾಂಪಿಯನ್‌ಶಿಪ್ : ಪ್ರಶಸ್ತಿಗಾಗಿ ಜೊಕೊವಿಚ್, ಸಿಟ್ಸಿಪಸ್ ಕಾದಾಟ
 • ಅಪಾರ್ಟ್‌ಮೆಂಟ್ ಗಳಲ್ಲಿ ಶೌರಶಕ್ತಿ‌ ಫಲಕ ಅಳವಡಿಕೆ ಉತ್ತಮ ಪ್ರಯತ್ನ; ಡಾ ಅಶ್ವತ್ಥನಾರಾಯಣ
 • 10ನೇ ಬಾರಿ ವಿರಾಟ್ ಕೊಹ್ಲಿಯನ್ನು ಕೆಡವಿದ ಟಿಮ್ ಸೌಥಿ
 • ಕೊರೊನಾವೈರಸ್ ಆತಂಕ: ಅಮೆರಿಕದಿಂದ ಆಸಿಯಾನ್ ಶೃಂಗಸಭೆ ಮುಂದೂಡಿಕೆ
 • ಕಾಶ್ಮೀರ ಕಣಿವೆಯಲ್ಲಿ ಕರ್ತವ್ಯಕ್ಕೆ ಗೈರುಹಾಜರಾದ 40 ಜನರ ಅಮಾನತ್ತು
 • ರಜನೀಕಾಂತ್ ಜೊತೆ ಭಾರತೀಯ ಹಜ್ ಅಸೋಸಿಯೇಷನ್ ಅಧ್ಯಕ್ಷ ಮಾತುಕತೆ
 • ಪುಲ್ವಾಮಾ ಪ್ರಕರಣ: ಕಾಶ್ಮೀರದಲ್ಲಿ ಎನ್‌ಐಎ ದಾಳಿ ಮುಂದುವರಿಕೆ
 • ಮಹಿಳಾ ಟಿ20 ವಿಶ್ವಕಪ್: ಕೊನೆಯ ಪಂದ್ಯದಲ್ಲೂ ಭಾರತ ವನಿತೆಯರಿಗೆ ಭರ್ಜರಿ ಜಯ
 • ಮೈಸೂರಿನಲ್ಲಿ ಇಬ್ಬರು ಬಾಂಗ್ಲಾ ದೇಶ ಅಕ್ರಮ ವಲಸಿಗರ ಬಂಧನ
 • ಎರಡನೇ ಟೆಸ್ಟ್: ಭಾರತ 242ಕ್ಕೆ ಆಲೌಟ್ ; ನ್ಯೂಜಿಲೆಂಡ್‌ಗೆ ಮೊದಲ ದಿನದ ಗೌರವ
 • ಪ್ರಧಾನಿ ಆಗಮನಕ್ಕೂ ಮುನ್ನ ಪ್ರಯಾಗ್ ರಾಜ್ ನಲ್ಲಿ ಮೂರು ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣ
 • ಉತ್ತರ ಕಾಶ್ಮೀರದಲ್ಲಿ ಭಾರೀ ಹಿಮಪಾತ: ಹಲವು ಪ್ರದೇಶಗಳಿಗೆ ಸಂಪರ್ಕ ಕಡಿತ
 • ಮಾಜಿ ಸಚಿವರ ಸಹೋದರನ ಕೊಚ್ಚಿ ಕೊಲೆ
Parliament Share

ಸದೃಢ ಆರ್ಥಿಕತೆಗಾಗಿ ಸರ್ಕಾರ ಕಾರ್ಯಮಗ್ನ: ನಿರ್ಮಲಾ ಸೀತಾರಾಮನ್ ಭರವಸೆ

ನವದೆಹಲಿ, ಫೆ 11(ಯುಎನ್ಐ)- ಸರ್ಕಾರಿ ಮತ್ತು ಖಾಸಗಿ ಹೂಡಿಕೆ, ಬಳಕೆ ಮತ್ತು ರಫ್ತು ಹೆಚ್ಚಿಸುವ ನಿಟ್ಟಿನಲ್ಲಿ ಸದೃಢ ಆರ್ಥಿಕತೆ ರೂಪಿಸಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಭರವಸೆ ನೀಡಿದ್ದು, ಎಲ್ಲಾ ವಲಯಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಿರುವುದರಿಂದ ಫಲಿತಾಂಶಗಳು ಈಗಾಗಲೇ ಗೋಚರಿಸಲಾರಂಭಿಸಿವೆ ಎಂದು ಹೇಳಿದ್ದಾರೆ.
‘ಸದೃಢ ಆರ್ಥಿಕತೆ ನಿರ್ಮಿಸಲು ಪ್ರತಿಯೊಂದು ಕ್ರಮವೂ ಜನರಲ್ಲಿ ಅನುರಣಿಸುತ್ತಿರುವುದು ಗೋಚರಿಸುತ್ತಿದೆ. ಸರ್ಕಾರಿ ಮತ್ತು ಖಾಸಗಿ ಹೂಡಿಕೆ, ಬಳಕೆ ಮತ್ತು ರಫ್ತು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಆರ್ಥಿಕತೆ ಸುಧಾರಣೆ ಲಕ್ಷಣಗಳು ಗೋಚರಿಸುತ್ತಿವೆ.’ಎಂದು ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಕುರಿತ ಚರ್ಚೆಗೆ ಉತ್ತರಿಸಿ ಹೇಳಿದ್ದಾರೆ.
‘ಆರ್ಥಿಕತೆ ಸುಧಾರಣೆಯ ಚಿಗುರು ಗೋಚರಿಸುತ್ತಿರುವುದನ್ನು ಏಳು ಸೂಚಕಗಳ ಮೂಲಕ ಎಂದು ನೋಡಬಹುದಾಗಿದೆ. ಸರ್ಕಾರ ಎಲ್ಲಾ ವಲಯಗಳೊಂದಿಗೆ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದು ಅವರು ಪ್ರತಿಪಾದಿಸಿದರು. ಬೆಳವಣಿಗೆಯ ನಾಲ್ಕು ಪ್ರೇಕರ ಶಕ್ತಿಗಳಾದ ಖಾಸಗಿ ಬಳಕೆ, ಖಾಸಗಿ ಹೂಡಿಕೆ, ಸಾರ್ವಜನಿಕ ಹೂಡಿಕೆ ಮತ್ತು ರಫ್ತಿನಿಂದ ಆರ್ಥಿಕ ಬೆಳವಣಿಗೆ ಉತ್ತಮ ವೇಗ ಪಡೆಯುತ್ತಿದೆ.’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ನಿರ್ಮಲಾ ಸೀತಾರಾಮನ್ ಅವರು ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಹಾಜರಿದ್ದರು. ನಿರುದ್ಯೋಗ ಸಮಸ್ಯೆ ನಿಭಾಯಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸಚಿವರು ಹೇಳಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ 98 ಸದಸ್ಯರು ಮಾತನಾಡಿದ್ದರು.
ಯುಎನ್ಐ ಎಸ್ಎಲ್ಎಸ್ 1453
More News
ಲೋಕಸಭೆಯ ಬಜೆಟ್‌ ಅಧಿವೇಶನದ ಮೊದಲ ಚರಣ ಮುಕ್ತಾಯ: ಮಾರ್ಚ್‌ ಎರಡರಿಂದ 2ನೆ ಚರಣದ ಅಧಿವೇಶನ

ಲೋಕಸಭೆಯ ಬಜೆಟ್‌ ಅಧಿವೇಶನದ ಮೊದಲ ಚರಣ ಮುಕ್ತಾಯ: ಮಾರ್ಚ್‌ ಎರಡರಿಂದ 2ನೆ ಚರಣದ ಅಧಿವೇಶನ

11 Feb 2020 | 5:27 PM

ನವದೆಹಲಿ, ಫೆ.11 (ಯುಎನ್‌ಐ) ಜನವರಿ 31 ರಂದು ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಸಾಂಪ್ರದಾಯಿಕ ಭಾಷಣದೊಂದಿಗೆ ಪ್ರಾರಂಭವಾದ ಲೋಕಸಭೆಯ ಬಜೆಟ್ ಅಧಿವೇಶನದ ಮೊದಲ ಚರಣ ಮಂಗಳವಾರ ಮುಕ್ತಾಯಗೊಂಡಿದೆ.

 Sharesee more..
ಎಸ್ ಸಿ/ ಎಸ್ ಟಿ ಉಪ ಯೋಜನೆ ಪುನರಾರಂಭಿಸಿ; ರಾಜ್ಯಸಭೆಯಲ್ಲಿ ಕಾಂಗ್ರೆಸ್ ಒತ್ತಾಯ

ಎಸ್ ಸಿ/ ಎಸ್ ಟಿ ಉಪ ಯೋಜನೆ ಪುನರಾರಂಭಿಸಿ; ರಾಜ್ಯಸಭೆಯಲ್ಲಿ ಕಾಂಗ್ರೆಸ್ ಒತ್ತಾಯ

11 Feb 2020 | 4:52 PM

ನವದೆಹಲಿ, ಫೆ 11(ಯುಎನ್ಐ) ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಸರ್ಕಾರ 2020-21ನೇ ಸಾಲಿನ ಮುಂಗಡಪತ್ರದಲ್ಲಿ ಅನುದಾನವನ್ನು ಕಡಿತಗೊಳಿಸಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಸಮುದಾಯದ ಅಭಿವೃದ್ದಿಗೆ ಎಸ್ ಸಿ/ಎಸ್ ಟಿ ಉಪ ಯೋಜನೆಗಳನ್ನು ಪುನರಾರಂಭಿಸಬೇಕು ಎಂದು ಮಂಗಳವಾರ ರಾಜ್ಯಸಭೆಯಲ್ಲಿ ಒತ್ತಾಯಿಸಿದೆ.

 Sharesee more..
ಸದೃಢ ಆರ್ಥಿಕತೆಗಾಗಿ ಸರ್ಕಾರ ಕಾರ್ಯಮಗ್ನ: ನಿರ್ಮಲಾ ಸೀತಾರಾಮನ್ ಭರವಸೆ

ಸದೃಢ ಆರ್ಥಿಕತೆಗಾಗಿ ಸರ್ಕಾರ ಕಾರ್ಯಮಗ್ನ: ನಿರ್ಮಲಾ ಸೀತಾರಾಮನ್ ಭರವಸೆ

11 Feb 2020 | 4:48 PM

ನವದೆಹಲಿ, ಫೆ 11(ಯುಎನ್ಐ)- ಸರ್ಕಾರಿ ಮತ್ತು ಖಾಸಗಿ ಹೂಡಿಕೆ, ಬಳಕೆ ಮತ್ತು ರಫ್ತು ಹೆಚ್ಚಿಸುವ ನಿಟ್ಟಿನಲ್ಲಿ ಸದೃಢ ಆರ್ಥಿಕತೆ ರೂಪಿಸಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ ಭರವಸೆ ನೀಡಿದ್ದು, ಎಲ್ಲಾ ವಲಯಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಿರುವುದರಿಂದ ಫಲಿತಾಂಶಗಳು ಈಗಾಗಲೇ ಗೋಚರಿಸಲಾರಂಭಿಸಿವೆ ಎಂದು ಹೇಳಿದ್ದಾರೆ.

 Sharesee more..