Monday, Sep 23 2019 | Time 02:23 Hrs(IST)
  • ಇಂಡೋ-ಆಫ್ರಿಕಾ ಚುಟುಕು ಸರಣಿ ಸಮಬಲ
Entertainment Share

ಸಲ್ಮಾನ್ ಖಾನ್, ಕಿಚ್ಚ ಸುದೀಪ್ ಅಭಿನಯದ 'ದಬಾಂಗ್ 3' ಮೋಷನ್ ಪೋಸ್ಟರ್ ಬಿಡುಗಡೆ

ನವದೆಹಲಿ, ಸೆಪ್ಟೆಂಬರ್ 11: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ತಮ್ಮ ಬಹುನಿರೀಕ್ಷಿತ ಆಕ್ಷನ್ ಚಿತ್ರ 'ದಬಾಂಗ್ 3' ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದ್ದು, ಅಭಿಮಾನಿಗಳ ಹರ್ಷಕ್ಕೆ ಕಾರಣರಾಗಿದ್ದಾರೆ
ಚಿತ್ರದಲ್ಲಿ ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ, ಅರ್ಬಾಜ್ ಖಾನ್ ಮತ್ತು ಮಹೀ ಗಿಲ್ ಹಿಂದಿನ ಚಿತ್ರದಿಂದ ತಮ್ಮ ಪಾತ್ರಗಳನ್ನು ಪುನರಾವರ್ತಿಸುತ್ತಿದ್ದರೆ, ಸ್ಯಾಂಡಲ್ ವುಡ್ ನ ಕಿಚ್ಚ ಸುದೀಪ್ ಖಳನಾಯಕನಾಗಿ ಸಿಕಂದರ್ ಭಾರದ್ವಾಜ್ ಪಾತ್ರದಲ್ಲಿದ್ದಾರೆ.
ಚುಲ್ ಬುಲ್ ಪಾಂಡೆ ಪಾತ್ರದಲ್ಲಿ ನಟ ಸಲ್ಮಾನ್ ಖಾನ್ ಮಿಂಚಿದ್ರೆ, ಸಿಕಂದರ್ ಭಾರದ್ವಜ್ ಪಾತ್ರದ ಮೂಲಕ ಖಳ ನಟನಾಗಿ ಕಿಚ್ಚ ಅಬ್ಬರಿಸಲಿದ್ದಾರೆ. ಮೊದಲ ಬಾರಿಗೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಜೊತೆ ತೆರೆ ಹಂಚಿ ಕೊಳ್ಳುತ್ತಿರುವುದು ಕಿಚ್ಚನ ಅಭಿಮಾನಿಗಳಿಗೆ ಸಂತಸ ತಂದಿದೆ.

ಈ ಕುರಿತು ಟ್ವೀಟ್ ಮಾಡಿರುವ ಸಲ್ಮಾನ್, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಹಂಚಿಕೊಂಡಿದ್ದಾರೆ, " ಸರಿಯಾಗಿ 100 ದಿನಗಳ ನಂತರ ಚುಲ್ಬುಲ್ ರಾಬಿನ್ಹುಡ್ ಪಾಂಡೆ ಬರುತ್ತಿದ್ದಾನೆ ನಮ್ಮನ್ನು ಸ್ವಾಗತಿಸಿ' ಎಂದಿದ್ದಾರೆ
ಮತ್ತೆರಡು ಸರಣಿ ಟ್ವೀಟ್ ಗಳಲ್ಲಿ, '' ಚುಲ್ಬುಲ್ ಪಾಂಡೆಯ ಜತೆ ಮಜಾ ತೆಗೆದುಕೊಳ್ಳಿ, ದಬಾಂಗ್ 3 ಇನ್ನಷ್ಟು ಭಯಂಕರವಾಗಿರಲಿದೆ, ತಮಿಳು, ತೆಲುಗಿನಲ್ಲಿಯೂ ನಮ್ಮನ್ನು ಸ್ವಾಗತಿಸಿ.!, '' ಎಂದು ಹೇಳಿದ್ದಾರೆ
ನಟಿ ಸೋನಾಕ್ಷಿ ಸಿನ್ಹಾ "ರಾಬಿನ್ ಹುಡ್ ಪಾಂಡೆ ಹಿಂತಿರುಗಿದ್ದಾರೆ ಮತ್ತು ಹೇಗೆ!" ಎಂದು ಟ್ವೀಟ್ ಮಾಡಿದ್ದು, ದಬಾಂಗ್ 3 ರ ಅಧಿಕೃತ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ ಚುಲ್ಬುಲ್ ಪಾಂಡೆಯನ್ನು ಸ್ವಾಗತಿಸಿ” ಎಂದಿದ್ದಾರೆ
'ದಬಾಂಗ್ 3' ಅನ್ನು ಪ್ರಭುದೇವ ನಿರ್ದೇಶಿಸಿದ್ದು, ಸಲ್ಮಾನ್ ಖಾನ್ ಮತ್ತು ಅರ್ಬಾಜ್ ಖಾನ್ ಅವರು ಸಲ್ಮಾನ್ ಖಾನ್ ಫಿಲ್ಮ್ಸ್ ಮತ್ತು ಅರ್ಬಾಜ್ ಖಾನ್ ಪ್ರೊಡಕ್ಷನ್ಸ್ ನ ಬ್ಯಾನರ್‌ಗಳಲ್ಲಿ ನಿರ್ಮಿಸಿದ್ದಾರೆ.
ಈ ಚಿತ್ರವು 2012 ರ ಚಲನಚಿತ್ರ 'ದಬಾಂಗ್ 2' ಮತ್ತು ಮೂರನೇ ಕಂತಿನ 'ದಬಾಂಗ್' ಚಲನಚಿತ್ರ ಸರಣಿಯ ಉತ್ತರಭಾಗವಾಗಿದೆ.
'ದಬಾಂಗ್ 3' ಡಿಸೆಂಬರ್ 20 ರಂದು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಯುಎನ್ಐ ಎಸ್ಎ ವಿಎನ್ 1445