Monday, Sep 16 2019 | Time 20:39 Hrs(IST)
 • ಐಐಟಿ ದೆಹಲಿ ಜೆಇಇ ( ಅಡ್ವಾನ್ಸ್ಡ್ ) ಪರೀಕ್ಷೆ 2020ರ ಮೇ 17 ಕ್ಕೆ; ಅಮೆರಿಕದಲ್ಲೂ ಪರೀಕ್ಷಾ ಕೇಂದ್ರ
 • ಇಡಿ ಸಮನ್ಸ್ ಪ್ರಶ್ನಿಸಿ ಡಿ ಕೆ ಶಿವಕುಮಾರ್ ಮೇಲ್ಮನವಿ ತೀರ್ಪು ಕಾಯ್ದಿರಿಸಿ ಹೈಕೋರ್ಟ್ ; ನಾಳೆ ತೀರ್ಪು ಸಾಧ್ಯತೆ
 • ಸೇವೆಯಿಂದ ಮಾತ್ರ ಶ್ರೇಷ್ಠ ವೈದ್ಯರಾಗಲು ಸಾಧ್ಯ; ಡಾ ಹರ್ಷವರ್ಧನ್
 • ರಾಷ್ಟ್ರಪತಿ, ಸಾಮಾನ್ಯ ಪ್ರಜೆಗೂ ಒಂದೇ ಕಾನೂನು: ಡಿಸಿಎಂ ಲಕ್ಷ್ಮಣ ಸವದಿ
 • ಕೆಬಿಸಿ; ಕೋಟಿ ರೂಪಾಯಿ ಗೆದ್ದ ಮಧ್ಯಾಹ್ನ ಬಿಸಿಯೂಟ ತಯಾರಿಸುವ ಕಾರ್ಯಕರ್ತೆ
 • ಮತದಾರ ಪಟ್ಟಿ ಪರಿಷ್ಕರಣಾ ಆಂದೋಲನ; ಸೇರ್ಪಡೆ, ತಿದ್ದುಪಡಿಗೆ ಅವಕಾಶ- ಅನಿಲ್ ಕುಮಾರ್
 • ಭಾಷೆ, ಸಂಸ್ಕೃತಿ ಹೆಸರಲ್ಲಿ ಸಂಘರ್ಷ ಸೃಷ್ಟಿಸುವುದು ಬಿಜೆಪಿ ಕೆಲಸ : ದಿನೇಶ್ ಗುಂಡೂರಾವ್
 • ಕಾಂಗ್ರೆಸ್ ಪಕ್ಷ ಮುಳಗುತ್ತಿರುವ ಹಡಗು: ಎಂ ಪಿ ರೇಣುಕಾಚಾರ್ಯ ಲೇವಡಿ
 • ಆಪ್‍ನಿಂದ ವಾರ್ಡ್ ನಿರ್ವಹಣಾ ಕೈಪಿಡಿ ಬಿಡುಗಡೆ
 • ಬಿಬಿಎಂಪಿ ಆಯುಕ್ತರ ಅಧಿಕಾರ ಮೊಟಕು; ವಿಶೇಷ, ಹೆಚ್ಚುವರಿ ಆಯುಕ್ತರಿಗೆ ಹೆಚ್ಚಿನ ಹೊಣೆ- ನಗರಾಭಿವೃದ್ಧಿ ಇಲಾಖೆ ಆದೇಶ
 • ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು
 • ಸರ್ಕಾರದ ಕಿರುಕುಳದಿಂದ ಕೊಡೆಲಾ ಆತ್ಮಹತ್ಯೆ: ಚಂದ್ರಬಾಬು ನಾಯ್ಡು ಆರೋಪ
 • ಕಳುವಾದ ಮೊಬೈಲ್ ಫೊನ್ ಪತ್ತೆಗೆ ಹೊಸ ತಂತ್ರ !
 • ಮೋಟಾರು ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ 19ರಂದು ಬೆಂಗಳೂರು ವಕೀಲರ ಸಂಘದ ಪ್ರತಿಭಟನೆ
 • ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಬೆಂಗಳೂರು ನಗರ ಉಳಿಸಿಕೊಂಡ ಮುಖ್ಯಮಂತ್ರಿ
Entertainment Share

ಸಲ್ಮಾನ್ ಗೆ ಪ್ರಿಯಾಂಕಾ 'ಭಾರತ್' ಚಿತ್ರದ ಪ್ರಚಾರ ಮಾಡಬೇಕಂತೆ

ಮುಂಬೈ, ಮೇ 26 (ಯುಎನ್ಐ) ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ, 'ಭಾರತ್' ಚಿತ್ರದ ಪ್ರಚಾರ ಮಾಡಬೇಕು ಎಂದು ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಆಸೆ ವ್ಯಕ್ತಪಡಿಸಿದ್ದಾರೆ.
'ಭಾರತ್' ಚಿತ್ರಕ್ಕೆ ಈ ಮೊದಲು ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಮದುವೆ ಕಾರಣ ಸಮಯ ಹೊಂದಾಣಿಕೆ ಆಗುವುದಿಲ್ಲ ಎಂಬ ನೆಪ ಹೇಳಿ ಪಿಗ್ಗಿ ಚಿತ್ರದಲ್ಲಿ ನಟಿಸಲು ನಿರಾಕರಿಸಿದರು.
ಪ್ರಿಯಾಂಕಾ ಈ ಚಿತ್ರ ನಿರಾಕರಿಸಿದ್ದಕ್ಕೆ ಅನೇಕ ಬಾರಿ ಸಲ್ಮಾನ್ ಮಾಧ್ಯಮದ ಎದುರು ಬೇಸರ ವ್ಯಕ್ತಪಡಿಸಿದ್ದು ಇದೆ. ಸದ್ಯ ಪ್ರಿಯಾಂಕಾ ಚಿತ್ರದಲ್ಲಿಲ್ಲ. ಆದರೆ, ಅವರಿಗೆ ಚಿತ್ರಕಥೆ ತುಂಬಾ ಇಷ್ಟವಾಗಿತ್ತು. ಹೀಗಾಗಿ ಚಿತ್ರದ ಕುರಿತು ಪ್ರಿಯಾಂಕಾ ಪ್ರಚಾರ ಮಾಡಬಹುದು ಎಂದು ಸಲ್ಮಾನ್ ಆಸೆ ವ್ಯಕ್ತಪಡಿಸಿದ್ದಾರೆ.
ಸದ್ಯ ಸಲ್ಮಾನ್, 'ಭಾರತ್' ಚಿತ್ರ ಪ್ರಚಾರದಲ್ಲಿ ತೊಡಗಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ಪ್ರೇಕ್ಷಕ ವರ್ಗ ಭಾರೀ ಮೆಚ್ಚಿಕೊಂಡಿದೆ. ಸಲ್ಮಾನ್ ಜೊತೆಗೆ ಬಾಲಿವುಡ್ ಬಾರ್ಬಿ ಗರ್ಲ್ ಕತ್ರಿನಾ ಕೈಫ್ ತೆರೆ ಹಂಚಿಕೊಂಡಿದ್ದಾರೆ.
ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಭಾರತ್' ಚಿತ್ರದಲ್ಲಿ ಸಲ್ಮಾನ್, ಕತ್ರಿನಾ ಹೊರತಾಗಿ ನಟಿಯರಾದ ದಿಶಾ ಪಠಾನಿ, ಟಬು ಹಾಗೂ ನಟರಾದ ಜಾಕಿ ಶ್ರಾಫ್, ಸುನೀಲ್ ಗ್ರೋವರ್ ಮುಖ್ಯ ಪಾತ್ರದಲ್ಲಿದ್ದಾರೆ.
'ಭಾರತ್' ಚಿತ್ರ ರಂಜಾನ್ ಹಬ್ಬದಂದು ಜೂನ್ 05ಕ್ಕೆ ತೆರೆ ಕಾಣಲಿದೆ.
ಯುಎನ್ಐ ಪಿಕೆ ಎಎಚ್ 1233