Wednesday, Jul 17 2019 | Time 12:03 Hrs(IST)
  • ಬಂಡಾಯ ಶಾಸಕರು ವಿಶ್ವಾಸ ಮತಯಾಚನೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ: ಸುಪ್ರೀಂ ತೀರ್ಪು
  • ನರೇಂದರ್‌ : ಅಂತಾರಾಷ್ಟ್ರೀಯ ಗೋಲು ಗಳಿಸಿದ ಭಾರತದ ಎರಡನೇ ಅತಿ ಕಿರಿಯ ಆಟಗಾರ
  • ನಾಲ್ಕೈದು ದಿನಗಳಲ್ಲಿ ಬಿಜೆಪಿ ಸರ್ಕಾರಅಸ್ಥಿತ್ವಕ್ಕೆ : ಬಿಎಸ್ ಯಡಿಯೂರಪ್ಪ ವಿಶ್ವಾಸ
Health -Lifestyle Share

ಸಾಂಕ್ರಾಮಿಕವಲ್ಲದ ಕಾಯಿಲೆ: ಭಾರತದಲ್ಲಿ ಪ್ರತಿ ಸೆಕೆಂಡಿಗೆ 10 ಜನರ ಸಾವು!

ಚೆನ್ನೈ, ಜುಲೈ 10 (ಯುಎನ್ಐ) ಹೃದ್ರೋಗ, ಕ್ಯಾನ್ಸರ್, ಮಧುಮೇಹ, ಉಬ್ಬಸದಂತಹ ಸಾಂಕ್ರಾಮಿಕವಲ್ಲದ ವಿವಿಧ ಬಗೆಯ ಕಾಯಿಲೆಗಳಿಗೆ ಭಾರತದಲ್ಲಿ ಪ್ರತಿ ಸೆಕೆಂಡಿಗೆ 10 ಜನರು ಸಾವನ್ನಪ್ಪುತ್ತಿದ್ದು, ಆರೋಗ್ಯಕರ ಜೀವನಕ್ಕಾಗಿ ಸೂಕ್ತ ಆಹಾರ ಕ್ರಮ ಅನುಸರಿಸುವಂತೆ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಸಲಹೆ ನೀಡಿದ್ದಾರೆ
ಅಪೊಲೊ ಆಸ್ಪತ್ರೆ ಹಾಗೂ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಬುಧವಾರ ಜಂಟಿಯಾಗಿ ಆಯೋಜಿಸಿದ್ದ ‘ಸಂಚಾರಿ ಆರೋಗ್ಯ ಘಟಕ’ ಉದ್ಘಾಟಿಸಿ ಮಾತನಾಡಿದ ಅವರು, ಸಾಂಕ್ರಾಮಿಕವಲ್ಲದ ರೋಗಗಳಿಗೆ ಜಾಗತಿಕವಾಗಿ ಗಂಟೆಗೆ 15 ದಶಲಕ್ಷ ಜನರು ಅಕಾಲಿಕವಾಗಿ ಮೃತಪಡುತ್ತಿದ್ದಾರೆ ಮಧ್ಯಮ ಹಾಗೂ ಕಡಿಮೆ ಆದಾಯವುಳ್ಳ ದೇಶಗಳಲ್ಲಿಯೇ ಸಾವಿನ ಪ್ರಮಾಣ ಹೆಚ್ಚಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಕ್ಯಾನ್ಸರ್, ಹೃದ್ರೋಗ ಸಮಸ್ಯೆಗಳು, ಮಧುಮೇಹ, ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಗಳಿಂದ ಭಾರತದಲ್ಲಿ ಪ್ರತಿ ಸೆಕೆಂಡ್ ಗೆ 10 ಜನರು ಸಾವನ್ನಪ್ಪುತ್ತಿದ್ದಾರೆ. ದೇಶದ ಮರಣ ಪ್ರಮಾಣದ ಹೆಚ್ಚಳಕ್ಕೆ ಸಾಂಕ್ರಾಮಿಕವಲ್ಲದ ರೋಗಗಳು ಪ್ರಮುಖ ಕಾರಣವಾಗಿವೆ ಎಂದಿದ್ದಾರೆ.
“ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಬಳಲುವ 30 ರಿಂದ 70 ವರ್ಷದೊಳಗಿನ ಶೇ 26ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ದುಡಿಯುವ ಜನರ ಅಕಾಲಿಕ ಮರಣದಿಂದಾಗಿ ದೇಶದ ಉತ್ಪಾದನೆ, ಆರ್ಥಿಕಾಭಿವೃದ್ಧಿ ಕುಸಿತ ಹಾಗೂ ಬಡತನಕ್ಕೆ ಕಾರಣವಾಗುತ್ತದೆ” ಎಂದು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಕಳವಳ ವ್ಯಕ್ತಪಡಿಸಿದ್ದು, ಆಹಾರ, ವಿಹಾರ ಸೇರಿದಂತೆ ಆರೋಗ್ಯಕರ ಜೀವನಶೈಲಿ ಅನುಸರಿಸುವಂತೆ ಯುವಜನತೆಗೆ ಕಿವಿಮಾತು ಹೇಳಿದ್ದಾರೆ.
ಯುಎನ್ಐ ಎಸ್ಎ ವಿಎನ್ 1423
More News
ಗರ್ಭಧಾರಣೆಯ ವೈದ್ಯಕೀಯ ಕಾಯ್ದೆ ಕುರಿತು ಪರಿಶೀಲನೆ: ಸುಪ್ರೀಂ ಕೋರ್ಟ್

ಗರ್ಭಧಾರಣೆಯ ವೈದ್ಯಕೀಯ ಕಾಯ್ದೆ ಕುರಿತು ಪರಿಶೀಲನೆ: ಸುಪ್ರೀಂ ಕೋರ್ಟ್

15 Jul 2019 | 8:08 PM

ನವದೆಹಲಿ, ಜುಲೈ 15 (ಯುಎನ್‌ಐ) ಗರ್ಭಧಾರಣೆ ಆಯ್ಕೆ ಮಾಡುವ ಹಕ್ಕು ಮಹಿಳೆಯರಿಗೆ ಇದೆಯೇ ಎಂಬ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

 Sharesee more..
ಹದಿಹರಯದ ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಆರೋಗ್ಯಕ್ಕಾಗಿ ರಾಜ್ಯಗಳ ಮೂಲಕ ಕೇಂದ್ರ ಸರ್ಕಾರದ ಸಹಕಾರ

ಹದಿಹರಯದ ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಆರೋಗ್ಯಕ್ಕಾಗಿ ರಾಜ್ಯಗಳ ಮೂಲಕ ಕೇಂದ್ರ ಸರ್ಕಾರದ ಸಹಕಾರ

14 Jul 2019 | 2:28 PM

ನವದೆಹಲಿ, ಜುಲೈ 14 (ಯುಎನ್ಐ) ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹದಿಹರಯದ ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಆರೋಗ್ಯಕ್ಕಾಗಿ ಸಹಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ

 Sharesee more..
ಮಕ್ಕಳಲ್ಲಿ ಕಿವುಡು, ಮೂಕತನ ಬಹುದೊಡ್ಡ ವಿಕಲತೆ : ಡಾ  ಸುರೇಶ್ ಇಸ್ಲೂರ್

ಮಕ್ಕಳಲ್ಲಿ ಕಿವುಡು, ಮೂಕತನ ಬಹುದೊಡ್ಡ ವಿಕಲತೆ : ಡಾ ಸುರೇಶ್ ಇಸ್ಲೂರ್

08 Jul 2019 | 8:23 PM

ಶಿವಮೊಗ್ಗ, ಜು 8 [ಯುಎನ್ಐ] ಮಕ್ಕಳಲ್ಲಿ ಕಿವುಡು ಹಾಗೂ ಮೂಕತನ ಬಹು ದೊಡ್ಡ ವಿಕಲತೆಯಾಗಿದೆ ಯಾಕೆಂದರೆ ಬುದ್ಧಿ ಮಾಂದ್ಯತೆ ಇರುವುವರನ್ನು ನೋಡಿದಾಗ ಗುರುತಿಸಬಹುದು, ಅಂಗವಿಕಲರನ್ನು ನೋಡಿದಾಗ ಗುರುತಿಸಬಹುದು ಆದರೆ ಕಿವುಡು ಮತ್ತು ಮೂಕ ಮಕ್ಕಳನ್ನು ನೋಡಿದಾಗ ಗುರುತಿಸಲು ಸಾಧ್ಯವಿಲ್ಲ ಎಂದು ತಜ್ಞ ವೈದ್ಯರಾದ ಡಾ.

 Sharesee more..