Tuesday, Aug 11 2020 | Time 18:07 Hrs(IST)
 • ಅಶೋಕ್ ಗೆಹ್ಲೋಟ್ ಜತೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ !: ಸಚಿನ್ ಪೈಲೆಟ್
 • ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಶೇ 80 ರಷ್ಟು ಸೋಂಕು: ಪ್ರಧಾನಿ ಮೋದಿ
 • ಕೋವಿಡ್‌; 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದ
 • ಸೂಪರ್‌ ಓಪವರ್‌ನಲ್ಲಿ ಬೌಲಿಂಗ್‌ ಮಾಡಲು ಬುಮ್ರಾ ಅತ್ಯುತ್ತಮ ಆಯ್ಕೆ: ಆಕಾಶ್ ಚೋಪ್ರ
 • ಪುರುಷರ ರಾಷ್ಟ್ರೀಯ ಹಾಕಿ ಶಿಬಿರ ಅನಿಶ್ಚಿತ
 • 800ನೇ ಟೆಸ್ಟ್‌ ವಿಕೆಟ್‌ಗಾಗಿ ಇಶಾಂತ್‌ ಎದುರು ಬೇಡಿಕೊಂಡಿದ್ದ ಮುತ್ತಯ್ಯ ಮುರಳೀಧರನ್!
 • ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ರಾಜೀನಾಮೆ
 • ಪ್ಲಾಸ್ಮಾ ದಾನಕ್ಕೆ ಐದು ಸಾವಿರ ರೂ ಪ್ರೋತ್ಸಾಹಧನ ಸರಿಯಲ್ಲ: ಇದು ವ್ಯಾಪಾರೀಕರಣವಾಗಬಾರದು: ಡಾ ವಿಶಾಲ್ ರಾವ್
 • ಐಪಿಎಲ್‌ಗೆ ರಾಹುಲ್‌ ರೆಡಿ, ಕಿಂಗ್ಸ್‌ ಇಲೆವೆನ್‌ ಕ್ಯಾಪ್ಟನ್‌ ಭರ್ಜರಿ ಬ್ಯಾಟಿಂಗ್‌ ಅಭ್ಯಾಸ
 • ರಣಬೀರ್ ಅತ್ಯಾಚಾರಿ, ದೀಪಿಕಾ ಸೈಕೋ
 • ಖಾಸಗಿ ಆಸ್ಪತ್ರೆಗಳ ಅವಾಂತರ: ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಮುಂದೆ ಸದಸ್ಯರ ಆಕ್ರೋಶ; ಐಸಿಯುಗೆ ಸಿಸಿಟಿವಿ ಅಳವಡಿಕೆ ಬಗ್ಗೆ ನಿರ್ಣಯ
 • ಮೈಸೂರು ಅರಮನೆ ಇನ್ನು ಎಲ್ಲಾ ದಿನಗಳಲ್ಲೂ ಪ್ರವಾಸಿಗರಿಗೆ ಮುಕ್ತ
 • ಚೀನಾ ಉದ್ಯಮಿಗಾಗಿ ತಯಾರಾಗುತ್ತಿದೆ 11 ಕೋಟಿ ರೂ ಚಿನ್ನದ ಮಾಸ್ಕ್ !!
 • ಕನ್ನಡ ಭಾಷಾ ಕೌಶಲ್ಯ ಆನ್‌ ಲೈನ್ ಪರೀಕ್ಷೆ ತಂತ್ರಾಂಶಕ್ಕೆ ರಾಜ್ಯೋತ್ಸವ ವೇಳೆ ಚಾಲನೆ: ಟಿ ಎಸ್ ನಾಗಾಭರಣ
 • ಎಸ್‌ಎಸ್‌ಎಲ್‌ ಸಿ ಪರೀಕ್ಷೆಯ ಯಶಸ್ವಿ; ಮುಖ್ಯಮಂತ್ರಿ ಕೃತಜ್ಞತೆ
International Share

ಸುಡಾನ್‍ನಲ್ಲಿ ಹಿಂಸೆ ಕೊನೆಗಾಣಬೇಕು: ಯೂನಿಸೆಫ್‍ ಮುಖ್ಯಸ್ಥರ ಕರೆ

ವಿಶ್ವಸಂಸ್ಥೆ, ಜೂನ್‍ 12 (ಯುಎನ್‍ಐ)-ಆಫ್ರಿಕಾದ ಸೂಡಾನ್‍ನಲ್ಲಿ ಈ ತಿಂಗಳ ಆರಂಭದಿಂದ ಪ್ರತಿಭಟನಾಕಾರರ ಮೇಲೆ ಸೇನೆ ನಡೆಸಿದ ಹಿಂಸಾಚಾರ ಘಟನೆಗಳಲ್ಲಿ ಇದುವರೆಗೆ ಕನಿಷ್ಠ 19 ಮಕ್ಕಳು ಮೃತಪಟ್ಟು, ಇತರ 49 ಮಂದಿ ಗಾಯಗೊಂಡಿದ್ದಾರೆ. ದೇಶದಲ್ಲಿ ಮುಂದುವರಿದ ಹಿಂಸೆ ಮತ್ತು ಅಶಾಂತಿಯಿಂದ ಮಕ್ಕಳು ಮತ್ತು ಯುವಜನರು ನಲುಗಿದ್ದಾರೆ ಎಂದು ವಿಶ್ವಸಂಸ್ಥೆ ಮಕ್ಕಳ ನಿಧಿ (ಯೂನಿಸೆಫ್‍) ಅಧ್ಯಕ್ಷರು ಕಳವಳ ವ್ಯಕ್ತಪಡಿಸಿದ್ದಾರೆ.
‘ಮಕ್ಕಳನ್ನು ಬಂಧನಕ್ಕೊಳಪಡಿಸಿ ಲೈಂಗಿಕವಾಗಿ ಶೋಷಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ, ಹೋರಾಟಕ್ಕಾಗಿ ಮಕ್ಕಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.’ ಎಂದು ಯೂನಿಸೆಫ್‍ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟ್ಟ ಫೋರ್ ಹೇಳಿದ್ದಾರೆ.

ಮೂರು ದಶಕಗಳ ಕಾಲ ಅಧಿಕಾರ ನಡೆಸಿದ್ದ ಅಧ್ಯಕ್ಷ ಒಮರ್ ಅಲ್-ಬಶೀರ್ ಅವರನ್ನು ಕಳೆದ ಏಪ್ರಿಲ್‍ನಲ್ಲಿ ಸೇನೆ ಪದಚ್ಯುತಗೊಳಿಸಿ, ಆಡಳಿತ ಕೈವಶಮಾಡಿಕೊಂಡಿತ್ತು. ಅಂದಿನಿಂದ ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಒತ್ತಾಯಿಸಿ ನಾಗರಿಕರು ಸೇನೆ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಜೂನ್ 3 ರಂದು ರಾಜಧಾನಿ ಖರ್ಟೋಮ್‍ನಲ್ಲಿ ಭದ್ರತಾ ಪಡೆಗಳು ಮತ್ತು ಅರೆಸೇನಾ ಪಡೆಗಳು ಪ್ರಜಾಪ್ರಭುತ್ವ ಪರ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದವು. ಇದರಿಂದ ಹಲವರು ಸತ್ತು, ಅನೇಕ ಮಂದಿ ಗಾಯಗೊಂಡಿದ್ದರು.
ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್ 1042