Wednesday, Dec 2 2020 | Time 08:04 Hrs(IST)
business economy Share

ಸೆನ್ಸೆಕ್ಸ್ 580.09 ಅಂಕ ಪತನ

ಮುಂಬೈ, ನ19 (ಯುಎನ್‌ಐ) ಬ್ಯಾಂಕಿಂಗ್, ಹಣಕಾಸು, ದೂರಸಂಪರ್ಕ ಮತ್ತು ಲೋಹ ಷೇರುಗಳ ಭಾರೀ ಮಾರಾಟ ಒತ್ತಡದಿಂದ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‌ಇ)ದ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ದಿನದಂತ್ಯಕ್ಕೆ 580.09 ಕುಸಿದು 43,599.96 ಕ್ಕೆ ಇಳಿದಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ)ದ ಸೂಚ್ಯಂಕ ನಿಫ್ಟಿ ಸಹ 166.55 ಅಂಕ ಇಳಿಕೆ ಕಂಡು 12,771.70 ಕುಸಿದಿದೆ.
ಸೆನ್ಸೆಕ್ಸ್, ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 44,230.00 ಮತ್ತು 43,518.11ರಲ್ಲಿತ್ತು..
ನಿಫ್ಟಿ, ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 12,963 ಮತ್ತು 12,745.75ರಲ್ಲಿತ್ತು. ಬಿಎಸ್‌ಇನ ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ ಎಸ್‍ಬಿಐ ಶೇ .4.84 ರಷ್ಟು ಕುಸಿದು 239.85 ರೂ.
ಐಸಿಐಸಿಐ ಬ್ಯಾಂಕ್ ಶೇ 4.11 ರಷ್ಟು ಕುಸಿದು 477 ರೂ. ಆಕ್ಸಿಸ್ ಬ್ಯಾಂಕ್ ಶೇ 4.06 ರಷ್ಟು ಕುಸಿದು 610.40 ರೂ. ಅಲ್ಟ್ರಾಸೆಮ್ಕೊ 3.18 ರಷ್ಟು ಕುಸಿದು 4770 ರೂ.ಮತ್ತು ಬಜಾಜ್ ಫೈನಾನ್ಸ್ ಶೇ 2.80 ರಷ್ಟು ಕುಸಿದು 4,325 ರೂ ನಲ್ಲಿ ವಹಿವಾಟು ಅಂತ್ಯಗೊಳಿಸಿವೆ.
ಆದರೆ, ಪವರ್‌ಗ್ರಿಡ್ ಶೇ .2.78 ರಷ್ಟು ಏರಿಕೆ ಕಂಡು 190.50 ರೂ., ಐಟಿಸಿ ಶೇ 2.15 ರಷ್ಟು ಏರಿಕೆ ಕಂಡು 188 ರೂ, ಎನ್‌ಟಿಪಿಸಿ ಶೇ 1.59 ರಷ್ಟು ಏರಿಕೆ ಕಂಡು 89.70 ರೂ. ಟಾಟಾ ಸ್ಟೀಲ್ ಶೇ 1.20 ರಷ್ಟು ಏರಿಕೆ ಕಂಡು 1289.55 ರೂ.ನಲ್ಲಿದ್ದವು.
ಯುಎನ್‍ಐ ಎಸ್ಎಲ್ಎಸ್ 1619
More News
27 ದಿನಗಳ ಗೇಮಿಂಗ್ ಟೂರ್ನಮೆಂಟ್‌ ಗಾಗಿ ಕ್ಲಾಷ್ ರಾಯಲ್ ಜೊತೆಯಾದ ಜಿಯೋ

27 ದಿನಗಳ ಗೇಮಿಂಗ್ ಟೂರ್ನಮೆಂಟ್‌ ಗಾಗಿ ಕ್ಲಾಷ್ ರಾಯಲ್ ಜೊತೆಯಾದ ಜಿಯೋ

01 Dec 2020 | 4:31 PM

ಮುಂಬೈ, ಡಿ.1 (ಯುಎನ್ಐ) ಜಿಯೋ ಗೇಮ್ಸ್ 27 ದಿನಗಳ ಕ್ಲಾಷ್ ರಾಯಲ್ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, ಇದರಲ್ಲಿ ವಿಜೇತರಿಗೆ ‘ಇಂಡಿಯಾ ಕಾ ಗೇಮಿಂಗ್ ಚಾಂಪಿಯನ್’ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

 Sharesee more..

ಸೆಕೆಂಡ್‌ ಹ್ಯಾಂಡ್‌ ಕಾರುಗಳ ದಾಖಲೆ ಮಾರಾಟ

01 Dec 2020 | 11:23 AM

 Sharesee more..