Friday, Apr 10 2020 | Time 09:42 Hrs(IST)
  • ನ್ಯೂಜಿಲೆಂಡ್ ನಲ್ಲಿ ಕೊರೊನಾ ಸೋಂಕಿನ ಎರಡನೇ ಸಾವಿನ ಪ್ರಕರಣ
  • ಅಸ್ಸಾಂನಲ್ಲಿ ಕೊರೊನಾ ಸೋಂಕಿನ ಮೊದಲ ಸಾವು
  • ಕೊರೊನಾ ಸಾಂಕ್ರಾಮಿಕ ರೋಗ ಕುರಿತಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮೊದಲ ಸಭೆ
  • ಒಪೆಕ್ ಒಪ್ಪಂದದಿಂದ ಹಿಂದೆ ಸರಿದ ಮೆಕ್ಸಿಕೋ
  • ಒಪೆಕ್ ಮಾತುಕತೆ ಶುಕ್ರವಾರ ಮುಂದುವರಿಕೆ
  • ವಿಶ್ವಾದ್ಯಂತ ಕೊರೊನಾ ಸೋಂಕಿನಿಂದ 95 ಸಾವಿರಕ್ಕೂ ಹೆಚ್ಚು ಜನರ ಸಾವು
  • ತೈಲ ಬೆಲೆ ಸ್ಥಿರತೆಗೆ ಸಹಕಾರದ ನಡೆ ಅಗತ್ಯ – ನಾಯಕರ ಪ್ರತಿಪಾದನೆ
business economy Share

ಸೆನ್ಸೆಕ್ಸ್ 693, ನಿಫ್ಟಿ 191 ಅಂಕ ಏರಿಕೆ ದಾಖಲು

ಮುಂಬೈ, ಮಾರ್ಚ್ 24 (ಯುಎನ್‌ಐ) ಸೋಮವಾರ ಐತಿಹಾಸಿಕ ಕುಸಿತದ ಕಂಡ ನಂತರ, ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 693 ಅಂಕಗಳಷ್ಟು ಅಥವಾ ಶೇ 2.7 ರಷ್ಟು ಏರಿಕೆಯಾಗಿ 26,674 ಕ್ಕೆ ದಿನದ ವಹಿವಾಟು ಕೊನೆಗೊಳಿಸುವುದರೊಂದಿಗೆ ಷೇರು ಮಾರುಕಟ್ಟೆ ಭಾಗಶಃ ಚೇತರಿಕೆ ದಾಖಲಿಸಿದೆ.
ನಿಫ್ಟಿ ಸಹ 191 ಅಂಕ ಅಥವಾ ಶೇ 2.5 ಕ್ಕೆ ಏರಿಕೆ ಕಂಡು 7,801 ಕ್ಕೆ ತಲುಪಿದೆ.

ಏಷ್ಯಾದ ಮಾರುಕಟ್ಟೆಗಳ ಉತ್ತಮ ಏರಿಕೆಗೆ ದೇಶೀಯ ಮಾರುಕಟ್ಟೆಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿವೆ. ಸೆನ್ಸೆಕ್ಸ್ ಶೇ 4 ಮತ್ತು ನಿಫ್ಟಿ ಶೇ 3ರಷ್ಟು ಏರಿಕೆಯೊಂದಿಗೆ ದಿನದ ವಹಿವಾಟು ಆರಂಭಿಸಿದರೂ ಒಂದು ತಾಸಿನೊಳಗೆ ದಿಢೀರ್ ಕುಸಿತ ಕಂಡವು.
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಸುದ್ದಿಗೋಷ್ಠಿಯ ಅಂಶಗಳು ತಲುಪುತ್ತಿದ್ದಂತೆ, ಹೂಡಿಕೆದಾರರ ನಿರೀಕ್ಷೆ ಹೆಚ್ಚಾಗಿ ಖರೀದಿ ಉತ್ಸಾಹ ಕಂಡುಬಂತು.
ಮಾಹಿತಿ ತಂತ್ರಜ್ಞಾನ, ತಂತ್ರಜ್ಞಾನ ಮತ್ತು ಇಂಧನ ಕ್ಷೇತ್ರಗಳ ಷೇರುಗಳಿಗೆ ಉತ್ತಮ ಬೇಡಿಕೆ ಕಂಡು ಬಂದಿದೆ. ಸೆನ್ಸೆಕ್ಸ್ ಪಟ್ಟಿಯಲ್ಲಿರುವ ಕಂಪನಿಗಳ ಪೈಕಿ ಇನ್ಫೋಸಿಸ್ ಷೇರುಗಳು ಶೇ 13 ರಷ್ಟು ಅತಿ ಹೆಚ್ಚು ಏರಿಕೆ ದಾಖಲಿಸಿವೆ. ರಿಲಯನ್ಸ್ ಇಂಡಸ್ಟ್ರೀಸ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಐಸಿಐಸಿಐ ಬ್ಯಾಂಕಿನ ಷೇರುಗಳು ಸಹ ಉತ್ತಮ ಏರಿಕೆ ಕಂಡಿವೆ. ಆದರೆ, ಮಹೀಂದ್ರಾ ಆಂಡ್‍ ಮಹೀಂದ್ರಾ ಷೇರುಗಳು ಶೇ .8 ರಷ್ಟು ಕುಸಿತ ಕಂಡಿವೆ.
ಯುಎನ್‍ಐ ಎಸ್ಎಲ್ಎಸ್ 1145
More News
ಸೆನ್ಸೆಕ್ಸ್ 868 35 ಅಂಕ ಏರಿಕೆ

ಸೆನ್ಸೆಕ್ಸ್ 868 35 ಅಂಕ ಏರಿಕೆ

09 Apr 2020 | 4:12 PM

ಮುಂಬೈ, ಏಪ್ರಿಲ್ 9 (ಯುಎನ್ಐ) ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸೂಚ್ಯಂಕ, ಸೆನ್ಸೆಕ್ಸ್ ಗುರುವಾರದ ಆರಂಭಿಕ ವಹಿವಾಟಿನಲ್ಲಿ 868.35 ಅಂಕ ಏರಿಕೆ ಕಂಡು 30,762.31 ಕ್ಕೆ ತಲುಪಿದೆ.

 Sharesee more..
ಕಡಿಮೆ ವೆಚ್ಚದ ಸೋಂಕು ನಿವಾರಕ ದ್ರಾವಣ ಸಿಂಪಡಣೆ

ಕಡಿಮೆ ವೆಚ್ಚದ ಸೋಂಕು ನಿವಾರಕ ದ್ರಾವಣ ಸಿಂಪಡಣೆ

09 Apr 2020 | 3:42 PM

ಬೆಂಗಳೂರು, ಏ. 9(ಯುಎನ್‌ಐ) ಎಲ್ಲೆಡೆ ಕೊರೊನಾ ವೈರಸ್ ಭೀತಿಯಿದೆ. ಇದು ಹರಡುವುದನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಇಡೀ ದೇಶವನ್ನು ಲಾಕ್ ಡೌನ್ ಮಾಡಿದೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು/ ಕೃಷಿಗೆ ಬೇಕಾದ ಬಿತ್ತನೆ ಬೀಜ- ಗೊಬ್ಬರ – ಕೀಟನಾಶಕ – ಯಂತ್ರೋಪಕರಣಗಳ ಮಾರುಕಟ್ಟೆಗಳನ್ನು ಹೆಚ್ಚುಕಾಲ ಸ್ಥಗಿತಗೊಳಿಸುವುದು ಸಾಧ್ಯವಾಗುವುದಿಲ್ಲ

 Sharesee more..
ಲಾಕ್‌ಡೌನ್: ವೈನ್, ಜಾಮ್, ಟೊಮೆಟೊ ಸಾಸ್‍ ತಯಾರಿಸಲು ರೈತರಿಗೆ ಐಸಿಎಆರ್ ಸಲಹೆ

ಲಾಕ್‌ಡೌನ್: ವೈನ್, ಜಾಮ್, ಟೊಮೆಟೊ ಸಾಸ್‍ ತಯಾರಿಸಲು ರೈತರಿಗೆ ಐಸಿಎಆರ್ ಸಲಹೆ

08 Apr 2020 | 6:21 PM

ನವದೆಹಲಿ, ಏಪ್ರಿಲ್ 8 (ಯುಎನ್‌ಐ) ಲಾಕ್‌ಡೌನ್ ಅವಧಿಯಲ್ಲಿ ಮೌಲ್ಯವರ್ಧಿತ ಉತ್ಪನ್ನಗಳಾದ ವೈನ್, ಜಾಮ್, ಜೆಲ್ಲಿ, ಸ್ಕ್ವ್ಯಾಷ್, ಟೊಮೆಟೊ ಸಾಸ್‌ ಮತ್ತಿತರ ಪದಾರ್ಥಗಳನ್ನು ತಯಾರಿಸುವಂತೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ರೈತರಿಗೆ ಸಲಹೆ ಮಾಡಿದೆ .

 Sharesee more..
ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಟ್ವಿಟರ್ ಸಿಇಒ ಒಂದು ಶತಕೋಟಿ ಡಾಲರ್ ದೇಣಿಗೆ

ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಟ್ವಿಟರ್ ಸಿಇಒ ಒಂದು ಶತಕೋಟಿ ಡಾಲರ್ ದೇಣಿಗೆ

08 Apr 2020 | 5:29 PM

ವಾಷಿಂಗ್ಟನ್, ಏಪ್ರಿಲ್ 8 (ಯುಎನ್‌ಐ) ಮಾರಕ ಕೊರೊನವೈರಸ್ (ಕೊವಿದ್‍ -19) ವಿರುದ್ಧದ ಜಾಗತಿಕ ಹೋರಾಟಕ್ಕೆ ಟ್ವಿಟರ್ ಸಂಸ್ಥಾಪಕ ಮತ್ತು ಸಿಇಒ ಜ್ಯಾಕ್ ಡಾರ್ಸೆ ಒಂದು ಶತಕೋಟಿ ಡಾಲರ್‌ ದೇಣಿಗೆ ನೀಡಿದ್ದಾರೆ.

 Sharesee more..