Tuesday, Oct 22 2019 | Time 08:45 Hrs(IST)
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
business economy Share

ಸೆನ್ಸೆಕ್ಸ್ 97 ಅಂಕ ಏರಿಕೆ

ಮುಂಬೈ, ಅ 9 (ಯುಎನ್ಐ) ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಬುಧವಾರದ ವಹಿವಾಟಿನಲ್ಲಿ 97 ಅಂಕ ಏರಿಕೆ ಕಂಡಿದೆ.
ಸೆನ್ಸೆಕ್ಸ್ 97 ಅಂಕ ಏರಿಕೆ ಕಂಡು 37,628.01 ರಲ್ಲಿತ್ತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 26 ಅಂಕ ಏರಿಕೆ ಕಂಡು 11,152.95 ರಲ್ಲಿತ್ತು.

ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 37,663.12 ಮತ್ತು 37,415.83.
ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 11,159.15 ಮತ್ತು 11,090.15.

ಎಮ್ & ಎಮ್ ಶೇ.2.36 ರಷ್ಟು ಏರಿಕೆ ಕಂಡು 565.65 ರೂ, ಎಲ್ & ಟಿ ಶೇ 1.70 ರಷ್ಟು ಏರಿಕೆಯಾಗಿ 1421.15 ರು, ಏಷ್ಯನ್ ಪೇಂಟ್ಸ್ ಶೇ 1.18 ರಷ್ಟು ಹೆಚ್ಚಳ ಕಂಡು 1742.85 ರೂ, ಕೋಟಕ್ ಬ್ಯಾಂಕ್ ಶೇ 1.05 ರಷ್ಟು ಏರಿಕೆಯಾಗಿ 1572.50 ರೂ ಮತ್ತು ಎನ್ ಟಿ ಪಿ ಸಿ ಶೇ 1.04 ರಷ್ಟು ಏರಿಕೆಯಾಗಿ 117 ರೂ ನಷ್ಟಿದೆ.
ಯೆಸ್ ಬ್ಯಾಂಕ್ ಶೇ 8.11 ರಷ್ಟು ಇಳಿಕೆಯಾಗಿ 41.90 ರೂ, ಎಚ್ ಸಿ ಎಲ್ ಟೆಕ್ ಶೇ 2.7 ಇಳಿಕೆ ಕಂಡು 1045.15 ರೂ, ಹೀರೋ ಮೋಟೋ ಕಾರ್ಪ್ ಶೇ 1.80 ರಷ್ಟು ಇಳಿದು 2626.50 ರೂ ಮತ್ತು ಟಾಟಾ ಮೋಟಾರ್ಸ್ ಶೇ 1.52 ರಷ್ಟು ಇಳಿಕೆಯಾಗಿ 115.90 ರೂ ನಷ್ಟಿದೆ.
ಯುಎನ್ಐ ಜಿಎಸ್ಆರ್ 1148