InternationalPosted at: Feb 21 2021 2:05PM Shareಸೇನೆ ಹಿಂತೆಗೆತ : ಭಾರತ – ಚೀನಾ ನಡುವೆ ಕಮಾಂಡರ್ ಮಟ್ಟದ ಮಾತುಕತೆ ಸಂಪನ್ನನವದೆಹಲಿ, ಫೆ 21 [ಯುಎನ್ಐ] ಚೀನಾದ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಸೇನೆ ಹಿಂತೆಗೆತ ಕುರಿತು ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ 10ನೇ ಸುತ್ತಿನ ಭಾರತ- ಚೀನಾ ಕಮಾಂಡರ್ ಮಟ್ಟದ ಮಾತುಕತೆ ಮುಕ್ತಾಯವಾಗಿದೆ. ಸೇನಾಪಡೆಗಳ ಹಿಂತೆಗೆತ ಮತ್ತಿತರ ವಿಚಾರಗಳ ಕುರಿತು ಭಾರತೀಯ ಭೂಸೇನೆ ಮತ್ತು ಚೀನಾದ ಪೀಪಲ್ ಲಿಬರೇಷನ್ ಆರ್ಮಿ ನಡುವೆ ಮಾತುಕತೆ ನಡೆಯಿತು. ಸೇನಾಪಡೆ ಹಾಗೂಐಟಿಬಿಟಿಯ ಉನ್ನತಾಧಿಕಾರಿಗಳು ಮಾತುಕತೆಯಲ್ಲಿ ಭಾಗವಹಿಸಿದ್ದರು. ಪೂರ್ವ ಲದ್ದಾಕ್ ನ ವಲಯದ ಗೋಗ್ರಾ ಮತ್ತಿತರ ಕಡೆಗಳಲ್ಲಿ ಸೇನೆಯನ್ನು ಮತ್ತಷ್ಟು ಹಿಂಪಡೆಯುವ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ರಕ್ಷಣಾಪಡೆಯ ಮೂಲಗಳು ತಿಳಿಸಿವೆ. ಪಾಂಗಾಂಗ್ ನ ಉತ್ತರ ಮತ್ತು ದಕ್ಷಿಣ ಪ್ರದೇಶಗಳಿಂದ ಮೊದಲ ಹಂತದ ಸೇನೆ ಹಿಂಪಡೆಯುವ ಕಾರ್ಯ ಸುಗಮವಾಗಿ ನಡೆದಿದೆ. ಲೆಫ್ಟಿನೆಂಟ್ ಜನರಲ್ ವೈ.ಕೆ. ಜೋಶಿ ಇತ್ತೀಚೆಗೆ ಈ ಕುರಿತು ಮಾಹಿತಿ ನೀಡಿ, ಶಾಂತಿ ಸ್ಥಾಪಿಸುವ ಕುರಿತಂತೆ ಕಮಾಂಡರ್ ಮಟ್ಟದ ಮಾತುಕತೆ ಮುಂದುವರಿಯಲಿದೆ ಎಂದು ತಿಳಿಸಿದ್ದರು. ಯುಎನ್ಐ ವಿಎನ್ 1403