Wednesday, Feb 26 2020 | Time 11:32 Hrs(IST)
  • ದೆಹಲಿ ಹಿಂಸಾಚಾರ: ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
  • ಕಾರ್ಮಿಕನ ಬರ್ಬರ ಹತ್ಯೆ
  • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
  • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
  • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
  • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
  • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
Sports Share

ಸಿಪಿಎಲ್‌: ಸೇಟ್‌ ಕಿಟ್ಸ್‌ ಮತ್ತು ನೆವಿಸ್‌ ಪ್ಯಾಟ್ರಿಯಟ್ಸ್ ತಂಡಕ್ಕೆ ದಾಖಲೆಯ ಜಯ

ಸೇಂಟ್‌ ಕಿಟ್ಸ್‌, ಸೆ 11 (ಯುಎನ್‌ಐ) ಸೇಂಟ್‌ ಕಿಟ್ಸ್‌ ಹಾಗೂ ನೆವಿಸ್‌ ಪ್ಯಾಟ್ರಿಯಟ್ಸ್‌ ತಂಡ ಇಲ್ಲಿ ನಡೆಯುತ್ತಿರುವ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಜಮೈಕಾ ತಲ್ಲವಾಹ್ಸ್‌ ವಿರುದ್ಧ 242 ರನ್‌ ದಾಖಲೆಯ ಜಯ ಸಾಧಿಸಿತು.
ಜಮೈಕಾ ತಲ್ಲವಾಹ್ಸ್‌ ನೀಡಿದ್ದ 242 ರನ್ ಕಠಿಣ ಗುರಿ ಹಿಂಬಾಲಿಸಿದ ಸೇಂಟ್‌ ಕಿಟ್ಸ್‌ ಹಾಗೂ ನೆವಿಸ್ ಪ್ಯಾಟ್ರಿಯಟ್ಸ್ ತಂಡ ಅತ್ಯತ್ತಮ ಪ್ರದರ್ಶನ ತೋರಿತು. 18.5 ಓವರ್‌ಗಳಲ್ಲಿ ಇನ್ನೂ ಏಳು ಎಸೆತಗಳು ಬಾಕಿ ಇರುವಂತೆ ಆರು ವಿಕೆಟ್‌ ಕಳೆದುಕೊಂಡು 242 ರನ್ ಗಳಿಸಿ ದಾಖಲೆಯ ಜಯ ಸಾಧಿಸಿತು.
ಸೇಂಟ್‌ ಕಿಟ್ಸ್‌ ಹಾಗೂ ಪ್ಯಾಟ್ರಿಯಟ್ಸ್‌ ಪರ ಆರಂಭಿಕರಾಗಿ ಕಣಕ್ಕೆ ಇಳಿದ ಡೆವೋನ್‌ ಥಾಮಸ್‌ ಹಾಗೂ ಎವಿನ್‌ ಲೆವಿಸ್‌ ಜೋಡಿ ಕೇವಲ 5.3 ಓವರ್‌ಗಳಲ್ಲಿ ಮುರಿಯದ ಮೊದಲನೇ ವಿಕೆಟ್‌ಗೆ 85 ರನ್‌ ಗಳಿಸಿ ತಂಡಕ್ಕೆ ಭರ್ಜರಿ ಅಡಿಪಾಯ ಹಾಕಿತು.
ಎವಿನ್‌ ಲೆವಿಸ್‌ ಕೇವಲ 18 ಎಸೆತಗಳಲ್ಲಿ ಆರು ಸಿಕ್ಸರ್‌ ಹಾಗೂ ಮೂರು ಬೌಂಡರಿಯೊಂದಿಗೆ 53 ರನ್‌ ಗಳಿಸಿ ಔಟ್‌ ಆದರು. ಮೂರನೇ ಕ್ರಮಾಂಕದಲ್ಲಿ ಲೌರಿ ಎವಾನ್ಸ್‌ 20 ಎಸೆತಗಳಲ್ಲಿ 41 ರನ್‌ ಗಳಿಸಿದರು. ಆರಂಭದಿಂದಲೂ ಭರ್ಜರಿ ಬ್ಯಾಟಿಂಗ್‌ ಮಾಡಿದ ಡೆವೋನ್‌ ಥಾಮಸ್ ಎದುರಿಸಿದ 40 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ಎಂಟು ಬೌಂಡರಿಯೊಂದಿಗೆ 71 ರನ್‌ ಗಳಿಸಿ ತಂಡವನ್ನು ಗೆಲುವಿನ ಸಮೀಪ ತಲುಪಿಸಿದರು. ನಂತರ ಮಧ್ಯಮ ಕ್ರಮಾಂಕದಲ್ಲಿ ಫ್ಯಾಬಿಯನ್‌ ಅಲ್ಲೆನ್‌ (ಔಟಾಗದೆ 37 ರನ್‌) ಹಾಗೂ ಶಮರಹ್‌ ಬ್ರೂಕ್ಸ್‌ (27 ರನ್‌) ಅವರ ತಂಡವನ್ನು ಗೆಲುವಿನ ದಡ ಸೇರಿಸುವ ಮೂಲಕ ತಮ್ಮ ಜವಾಬ್ದಾರಿ ಪೂರ್ಣಗೊಳಿಸಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್‌ ಮಾಡಿದ ಜಮೈಕಾ ತಲ್ಲವಾಹ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 241 ರನ್‌ ಗಳಿಸಿತ್ತು.
ಗೇಲ್‌ ಶತಕ ವ್ಯರ್ಥ:
ಜಮೈಕಾ ತಲ್ಲವಾಹ್ಸ್‌ ಪರ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಕ್ರಿಸ್‌ ಗೇಲ್‌ ಅಬ್ಬರದ ಬ್ಯಾಟಿಂಗ್‌ ಮಾಡಿದ್ದರು. 62 ಎಸೆತಗಳಲ್ಲಿ 10 ಸಿಕ್ಸರ್‌ ಹಾಗೂ ಏಳು ಬೌಂಡರಿಯೊಂದಿಗೆ 116 ರನ್‌ ಗಳಿಸಿ ನೆರೆದಿದ್ದ ಅಪಾರ ಅಭಿಮಾನಿಗಳನ್ನು ರಂಜಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಮಾಡಿದ್ದ ಚಾಡ್ವಿಕ್‌ ವಾಲ್ಟನ್‌ ಅವರು 36 ಎಸೆತಗಳಲ್ಲಿ ಎಂಟು ಸಿಕ್ಸರ್‌ ಹಾಗೂ ಮೂರು ಬೌಂಡರಿಯೊಂದಿಗೆ 73 ರನ್‌ ಗಳಿಸಿದ್ದರು. ಇವರಿಬ್ಬರು ಅತ್ಯುತ್ತಮ ಬ್ಯಾಟಿಂಗ್‌ ನೆರವಿನಿಂದ ಜಮೈಕಾ ತಂಡ 241 ರನ್‌ ಗಳಿಸಿತ್ತು.
ಸಂಕ್ಷಿಪ್ತ ಸ್ಕೋರ್‌
ಜಮೈಕಾ ತಲ್ಲವಾಹ್ಸ್‌: 20 ಓವರ್‌ಗಳಲ್ಲಿ 241/4 (ಕ್ರಿಸ್‌ ಗೇಲ್ 116, ಚಾಡ್ವಿಕ್‌ ವಾಲ್ಟನ್‌ 73; ಫ್ಯಾಬಿಯನ್‌ ಅಲ್ಲೆನ್‌ 30 ಕ್ಕೆ 2, ಅಲ್ಝಾರಿ ಜೊಸೆಫ್‌ 39 ಕ್ಕೆ 2)
ಸೇಂಟ್ ಕಿಟ್ಸ್: 18.5 ಓವರ್‌ಗಳಲ್ಲಿ 242/6 (ಡೆವೋನ್‌ ಥಾಮಸ್‌ 71, ಎವಿನ್ ಲೆವಿಸ್‌ 53, ಲೌರಿ ಎವಾನ್ಸ್‌ 41, ಫ್ಯಾಬಿಯನ್‌ ಔಟಾಗದೆ 37, ಶಮರಹ್‌ ಬ್ರೂಕ್ಸ್‌ 27; ಓಶಾನ್‌ ಥಾಮಸ್‌ 53 ಕ್ಕೆ 4, ಆ್ಯಂಡ್ರೆ ರಸೆಲ್‌ 54 ಕ್ಕೆ 2)
ಯುಎನ್‌ಐ ಆರ್‌ಕೆ ಎಎಚ್‌ 1108
More News

ಮಾರ್ಚ 2ರಿಂದ ಚೆನ್ನೈ ಅಭ್ಯಾಸ

25 Feb 2020 | 7:24 PM

 Sharesee more..

ಏಷ್ಯಾ, ವಿಶ್ವ ಇಲೆವೆನ್ ತಂಡ ಪ್ರಕಟ

25 Feb 2020 | 7:23 PM

 Sharesee more..
ರನ್ ಹೊಳೆ ಹರಿಸಿದರೂ ಟೆಸ್ಟ್‌ನಲ್ಲಿ ರಾಹುಲ್‌ಗೆ ಅವಕಾಶವಿಲ್ಲ ಏಕೆ ? : ಕಪಿಲ್ ದೇವ್

ರನ್ ಹೊಳೆ ಹರಿಸಿದರೂ ಟೆಸ್ಟ್‌ನಲ್ಲಿ ರಾಹುಲ್‌ಗೆ ಅವಕಾಶವಿಲ್ಲ ಏಕೆ ? : ಕಪಿಲ್ ದೇವ್

25 Feb 2020 | 7:03 PM

ನವದೆಹಲಿ, ಫೆ 25 (ಯುಎನ್ಐ) ಸೀಮಿತ ಓವರ್‌ಗಳ ಸ್ವರೂಪದಲ್ಲಿ ಅತ್ಯದ್ಭುತ ಪ್ರದರ್ಶನದ ಹೊರತಾಗಿಯೂ ನ್ಯೂಜಿಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಕೆ.ಎಲ್ ರಾಹುಲ್ ಅವರನ್ನು ಕೈ ಬಿಟ್ಟಿರುವುದನ್ನು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

 Sharesee more..