business economyPosted at: Jan 13 2021 6:40PM Shareಸ್ಪೈಸ್ ಜೆಟ್ ವಿಮಾನಗಳ ಮೂಲಕ 11 ನಗರಗಳಿಗೆ ಕೊವಿಡ್ ಲಸಿಕೆ ರವಾನೆಪುಣೆ, ಜ 13 (ಯುಎನ್ಐ) ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆ ಬುಧವಾರ 3.5 ಟನ್ ತೂಕದ ಕೋವಿಡ್ -19 ಲಸಿಕೆಗಳ 111 ಪೆಟ್ಟಿಗೆಗಳನ್ನು ಮುಂಬೈ, ಪುಣೆ ಮತ್ತು ಹೈದರಾಬಾದ್ನಿಂದ ಹನ್ನೊಂದು ನಗರಗಳಿಗೆ ರವಾನಿಸಿದೆ. ಹೈದರಾಬಾದ್ನಿಂದ ಬೆಂಗಳೂರಿಗೆ ಕಾರ್ಯನಿರ್ವಹಿಸುತ್ತಿರುವ ಸ್ಪೈಸ್ಜೆಟ್ನ ಸರಕು ಸಾಗಣೆ ಎಸ್ಜಿ 7555 ವಿಮಾನ ಭಾರತ ಬಯೋಟೆಕ್ ನ 90 ಕೆ.ಜಿ ತೂಕದ ಕೊವಾಕ್ಸಿನ್ನ 3 ಪೆಟ್ಟಿಗೆಗಳನ್ನು ಹೊತ್ತು ಇಂದು ಬೆಳಿಗ್ಗೆ 8.50ಕ್ಕೆ ಹೊರಟು ಬೆಳಿಗ್ಗೆ 10.23 ಕ್ಕೆ ಬೆಂಗಳೂರಿಗೆ ತಲುಪಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಮುಂಬೈನ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆಯ 74 ಪೆಟ್ಟಿಗೆಗಳನ್ನು ಬಗ್ದೋಗ್ರಾ, ಡೆಹ್ರಾಡೂನ್, ಶ್ರೀನಗರ, ರಾಜ್ಕೋಟ್, ಜಮ್ಮು, ಕಾನ್ಪುರ, ಗೋರಖ್ಪುರ, ಜಬಲ್ಪುರ ಸೇರಿದಂತೆ 10 ನಗರಗಳಿಗೆ ಸ್ಪೈಸ್ ಜೆಟ್ ರವಾನಿಸಿದೆ. ಪುಣೆಯಿಂದ 34 ಪೆಟ್ಟಿಗೆಗಳ ಕೊವಿಶೀಲ್ಡ್ ಲಸಿಕಗೆಗಳನ್ನು ಸ್ಪೈಸ್ ಜೆಟ್ ದೆಹಲಿಗೆ ರವಾನಿಸಿದೆ. ಮಂಗಳವಾರ ದೆಹಲಿಗೆ ಸ್ಪೈಸ್ ಜೆಟ್ 4 ದಶಲಕ್ಷ ಡೋಸ್ ಗಳನ್ನು ಯಶಸ್ವಿಯಾಗಿ ಸಾಗಿಸಿತ್ತು. ಯುಎನ್ಐ ಎಸ್ಎಲ್ಎಸ್ 1830