Monday, Oct 26 2020 | Time 03:29 Hrs(IST)
International Share

ಸೊಮಾಲಿ : ಶಬಾಬ್ ಸಂಘಟನೆಯ 12 ಉಗ್ರರು ಹತ

ಮೊಗಾದಿಶು, 1 17 (ಯುಎನ್‍ಐ) ಹಿರಾನ್‌ನ ಮಧ್ಯ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೊಮಾಲಿ ರಾಷ್ಟ್ರೀಯ ಸೇನೆ (ಎಸ್‌ಎನ್‌ಎ) ಅಲ್-ಶಬಾಬ್ ಹೋರಾಟಗಾರರ ಸದಸ್ಯರನ್ನು ಕೊಂದಿದೆ ಎಂದು ಮಿಲಿಟರಿ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಈ ಕುರಿತು ಎಸ್‌ಎನ್‌ಎಯ 5 ನೇ ಘಟಕ ವಿಭಾಗ 27 ರ ಕಮಾಂಡರ್ ಮೊಹಮ್ಮದ್ ಹಸನ್ ಇಬ್ರಾಹಿಂ ಮಾಹಿತಿ ನೀಡಿದ್ದು, ಬುಲೆ ಬಾರ್ಡೆ ಮತ್ತು ಜಲ ಲಕ್ಸಿ ನಗರಗಳ ನಡುವಿನ ಪ್ರದೇಶದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಅಲ್ಲಿ ಉಗ್ರರು ಸ್ಥಳೀಯ ಜನರನ್ನು ಕಡ್ಡಾಯವಾಗಿ ದೇಣಿಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದಿದ್ದಾರೆ.
"ಉಗ್ರರು ಸೈನ್ಯದ ವಿರುದ್ಧ ಹೋರಾಡಲು ಪ್ರಯತ್ನಿಸಿಗಂಟೆಗಳ ಕಾಲ ತೀವ್ರವಾದ ಮುಖಾಮುಖಿಯಾಯಿತು, ಆದರೆ ನಾವು ಅವರನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಗಿದ್ದೇವೆ, 12 ಉಗ್ರರನ್ನು ಕೊಂದಿದ್ದೇವೆ" ಎಂದು ಇಬ್ರಾಹಿಂ ಹೇಳಿದ್ದಾರೆ.
ಸರ್ಕಾರಿ ಪಡೆಗಳು ಇತ್ತೀಚೆಗೆ ಮಧ್ಯ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಅಲ್-ಶಬಾಬ್ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಉಗ್ರರು ಗ್ರಾಮೀಣ ಪ್ರದೇಶದಲ್ಲಿ ಅಡಗಿಕೊಂಡಿದ್ದಾರೆ, ಹೊಂಚುದಾಳಿ ನಡೆಸುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಉಗ್ರರು ಅಡಗಿರುವ ಮಧ್ಯ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಅಲ್-ಶಬಾಬ್ ಉಗ್ರಗಾಮಿಗಳ ವಿರುದ್ಧ ಸೇನಾಪಡೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ಯುಎನ್‍ಐ ಎಸ್‍ಎ 1638
More News
ಆತ್ಮಾಹುತಿ ಬಾಂಬ್ ದಾಳಿ, ಸಾವಿನ ಸಂಖ್ಯೆ 30 ಕ್ಕೆ ಏರಿಕೆ

ಆತ್ಮಾಹುತಿ ಬಾಂಬ್ ದಾಳಿ, ಸಾವಿನ ಸಂಖ್ಯೆ 30 ಕ್ಕೆ ಏರಿಕೆ

25 Oct 2020 | 5:30 PM

ಕಾಬೂಲ್, ಅಕ್ಟೋಬರ್ 25 (ಯುಎನ್ಐ) ಅಫಘಾನ್ ರಾಜಧಾನಿಯ ಶಿಕ್ಷಣ ಕೇಂದ್ರವೊಂದರ ಬಳಿ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 30 ಕ್ಕೆ ಏರಿಕೆಯಾಗಿದ್ದು, ಈ ದುರಂತದಲ್ಲಿ ಇತರೆ 70 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು ಸ್ಪುಟ್ನಿಕ್ ಗೆ ತಿಳಿಸಿವೆ.

 Sharesee more..
ಸ್ಯಾಮ್ ಸಂಗ್ ಅಧ್ಯಕ್ಷ ಲೀ ಕುನ್-ಹೀ ನಿಧನ

ಸ್ಯಾಮ್ ಸಂಗ್ ಅಧ್ಯಕ್ಷ ಲೀ ಕುನ್-ಹೀ ನಿಧನ

25 Oct 2020 | 3:00 PM

ಮಾಸ್ಕೋ, ಅ.25 (ಸ್ಪುಟ್ನಿಕ್) ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಅಧ್ಯಕ್ಷ ಲೀ ಕುನ್-ಹೀ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು ಎಂದು ಸೌತ್ ಕೊರಿಯಾ ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

 Sharesee more..