Saturday, Jan 16 2021 | Time 08:06 Hrs(IST)
business economy Share

ಸಾರಿಗೆ ಕ್ಷೇತ್ರದ ಡಿಜಿಟಲ್ ವ್ಯಾಲೆಟ್ ಆಗಿಲಿದೆ ಫಾಸ್ಟ್ ಟ್ಯಾಗ್!

ಬೆಂಗಳೂರು, ಜ.12 (ಯುಎನ್ಐ) ಸಾರಿಗೆ ಕ್ಷೇತ್ರದ ಡಿಜಿಟಲ್ ವ್ಯಾಲೆಟ್ ಆಗಿ ಫಾಸ್ಟ್ ಟ್ಯಾಗ್ ಮಾರ್ಪಾಡು ಹೊಂದಲಿದೆ ಎಂದು ಲಾಜಿಸ್ಟಿಕ್ ಟೆಕ್ನಾಲಜಿ ಸ್ಟಾರ್ಟ್ಅಪ್ ಸಂಸ್ಥೆ ವೀಲ್ಸ್ಐ ಅಭಿಪ್ರಾಯ ಪಟ್ಟಿದೆ.
ಭಾರತದಲ್ಲಿ ಮೊದಲು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ (ಇಟಿಸಿ) ಕೇಂದ್ರವನ್ನು 2012 ರಲ್ಲಿ ಗುರುಗಾಂವ್ ನಲ್ಲಿ ಪ್ರಾರಂಭಿಸಲಾಯಿತು. ಕ್ರಮೇಣ ಇದು ಬೆಳೆದು 2016 ರಲ್ಲಿ ಫಾಸ್ಟ್ ಟ್ಯಾಗ್ ಎನ್ನುವ ಹೆಸರನ್ನು ಪಡೆಯಿತು. ಆ ವರ್ಷದಲ್ಲಿ 4 ಪ್ರಮುಖ ಬ್ಯಾಂಕ್ ಗಳು ಸುಮಾರು 1 ಲಕ್ಷ ದಷ್ಟು ಟ್ಯಾಗ್ ಗಳನ್ನು ವಿತರಿಸಿತು. 2017 ಮತ್ತು 2018 ರಲ್ಲಿ ಕ್ರಮವಾಗಿ 7 ಲಕ್ಷ ಮತ್ತು 34 ಲಕ್ಷ ಇಂತಹ ಟ್ಯಾಗ್ ಗಳನ್ನು ವಿತರಿಸಲಾಯಿತು. ಇವತ್ತು ಸುಮಾರು 2 ಕೋಟಿಗೂ ಹೆಚ್ಚಿನ ಇಂತಹ ಟ್ಯಾಗ್ ಗಳು ಬಳಕೆಯಲ್ಲಿದೆ ಎಂದು ಸಂಸ್ಥೆ ಹೇಳಿದೆ.
ಫಾಸ್ಟ್ ಟ್ಯಾಗ್ ಮೂಲಕ ಸಂಚಾರ ದಂಡಗಳನ್ನು ವಸೂಲಿ ಮಾಡುವ ನಿಟ್ಟಿನಲ್ಲಿ ಚೆನ್ನೈ ಪೋಲಿಸರು ಕೃತಕ ಬುದ್ದಿಮತ್ತೆ ಆಧಾರಿತ ರಶೀದಿ ಸಂಗ್ರಹ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪಾರ್ಕ್ + ಎನ್ನುವ ಸಂಸ್ಥೆಯು ಫಾಸ್ಟ್ ಟ್ಯಾಗ್ ವ್ಯಾಲೇಟ್ ಮೂಲಕವೆ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸುತ್ತಿದೆ. ಟ್ಯಾಗ್ ಮಾರಾಟದ ಸ್ಪರ್ಧೆಗೆ ಕೇಂದ್ರ, ರಾಜ್ಯ ಹಾಗು ಖಾಸಗಿ ಸಂಸ್ಥೆಗಳು ಕೂಡ ಇಳಿದಿವೆ.
ಈ ಎಲ್ಲಾ ಕಾರಣಗಳಿಂದ ಮುಂದಿನ ದಿನಗಳಲ್ಲಿ ಫಾಸ್ಟ್ ಟ್ಯಾಗ್ ಕೇವಲ ಟೋಲ್ ಶುಲ್ಕ ಕಟ್ಟುವುದಕ್ಕೆ ಮಾತ್ರ ಸೀಮಿತವಾಗುವುದಿಲ್ಲ ಬದಲಿಗೆ ಇದು ಸಾರಿಗೆ ಕ್ಷೇತ್ರದ ಡಿಜಿಟಲ್ ವ್ಯಾಲೇಟ್ ಆಗಿ ಮಾರ್ಪಾಡು ಹೊಂದಲಿದೆ ಎಂದು ವೀಲ್ಸ್ ಐ ಸಂಸ್ಥೆ ಹೇಳಿದೆ. ಇಂಧನ ಖರೀದಿ, ಶುಲ್ಕ ಪಾವತಿಗೆ, ಜಿಎಸ್.ಟಿ ರಿಟರ್ನ್ಸ್ ಮಾಡಲು ಸೇರಿದಂತೆ ಟೋಲ್ ಶುಲ್ಕ ಪಾವತಿಸಲು ಫಾಸ್ಟ್ ಟ್ಯಾಗ್ ಬಳಕೆ ಮುಂದಿನ ದಿನಗಳಲ್ಲಿ ಆಗಲಿದೆ. ಶೇಕಡ 80 ರಷ್ಟು ವಾಣಿಜ್ಯ ವಾಹನಗಳು ಈಗಾಗಲೇ ಫಾಸ್ಟ್ ಟ್ಯಾಗ್ ಹೊಂದಿದ್ದು ಶೇಕಡ 65 ರಷ್ಟು ಟೋಲ್ ಶುಲ್ಕ ಈ ವಾಣಿಜ್ಯ ವಾಹನಗಳಿಂದ ಬರುತ್ತದೆ.
“ಲಾರಿ ಮಾಲಿಕರು ಈ ಫಾಸ್ಟ್ ಟ್ಯಾಗ್ ಬಗ್ಗೆ ನಂಬಿಕೆ ಇಟ್ಟು ಇದನ್ನು ವಾಹನಕ್ಕೆ ಅಳವಡಿಸಿದರೆ ಮಾತ್ರ ಫಾಸ್ಟ್ ಟ್ಯಾಗ್ ಯಶಸ್ವಿಯಾಗಲು ಸಾಧ್ಯ. ಪ್ರಾಥಮಿಕವಾಗಿ ಈ ಫಾಸ್ಟ್ ಟ್ಯಾಗ್ ಗಳನ್ನು ಕಾರುಗಳಿಗೆ ಅಳವಡಿಸುವ ಉದ್ದೇಶದಿಂದ ಮಾಡಲಾಗಿತ್ತು ಆದರೆ ವಾಣಿಜ್ಯ ವಾಹನಗಳು ಇದನ್ನು ಬಳಕೆ ಮಾಡಿದರೆ ಮಾತ್ರ ಇದರ ಯಶಸ್ಸು ಸಾಧ್ಯ. ಹೈವೆ ಎಕಾನಮಿಯನ್ನು ಒಗ್ಗೂಡಿಸುವ ಸಾಮರ್ಥ್ಯವನ್ನು ಫಾಸ್ಟ್ ಟ್ಯಾಗ್ ಹೊಂದಿದೆ. ಫಾಸ್ಟ್ ಟ್ಯಾಗ್ ಬಳಕೆಯ ಮೂಲಕ ಭಾರತವು ಜಗತ್ತಿನ ಶ್ರೇಷ್ಠ ಸಾರಿಗೆ ವ್ಯವಸ್ಥೆ ಆಗುವ ದಿಕ್ಕಿನಲ್ಲಿ ಸಾಗುತ್ತಿದೆ. ಪೋಸ್ಟ್ ಪೈಡ್ ಪ್ಲಾನ್ಸ್ ಮತ್ತು ಇಂದನ ಖರೀದಿಗೆಯನ್ನು ಫಾಸ್ಟ್ ಟ್ಯಾಗ್ ಮೂಲಕ ಮಾಡಲು ವೀಲ್ಸ್ಐ ಅನುಮತಿಸುತ್ತದೆ” ಎಂದು ವೀಲ್ಸ್ಐ ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ.
ಯುಎನ್ಐ ಎಎಚ್ 2111