Tuesday, Jul 7 2020 | Time 04:53 Hrs(IST)
International Share

ಸುಲೇಮಾನಿ ಹತ್ಯೆ; ಅಮೆರಿಕಾ ವಿರುದ್ದ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಹೋಗಲಿರುವ ಇರಾನ್

ಸುಲೇಮಾನಿ ಹತ್ಯೆ; ಅಮೆರಿಕಾ ವಿರುದ್ದ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ  ಹೋಗಲಿರುವ  ಇರಾನ್
ಸುಲೇಮಾನಿ ಹತ್ಯೆ; ಅಮೆರಿಕಾ ವಿರುದ್ದ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಹೋಗಲಿರುವ ಇರಾನ್

ಟೆಹ್ರಾನ್, ಜ೧೪(ಸ್ಪುಟ್ನಿಕ್) ತನ್ನ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸುಲೇಮಾನಿ ಅವರನ್ನು ಹತ್ಯೆ ನಡೆಸಿರುವ ಅಮೆರಿಕಾ ಸರ್ಕಾರ ಹಾಗೂ ಸಶಸ್ತ್ರಪಡೆಗಳ ಮೇಲೆ ಉತ್ತರದಾಯಿತ್ವ ನಿಗದಿ ಪಡಿಸಲು ಇರಾನ್, ದಿ ಹೇಗ್ ನಲ್ಲಿರುವ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ಅಮೆರಿಕಾ ವಿರುದ್ದ ಮೊಕದ್ದಮೆ ಹೂಡಲು ಉದ್ದೇಶಿಸಿದೆ ಎಂದು ಇರಾನ್ ನ್ಯಾಯಾಂಗ ವಕ್ತಾರ ಗುಲಾಂ ಹೊಸೈನ್ ಇಸ್ಮಾಯಿಲಿ ಮಂಗಳವಾರ ಹೇಳಿದ್ದಾರೆ.

ಖಾಸಿಂ ಸುಲೇಮಾನಿ ಹತ್ಯೆಯ ಹೊಣೆಗಾರಿಕೆಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಬೇಕು ಎಂದು ಇರಾನ್ ಮುಖ್ಯ ನ್ಯಾಯಮೂರ್ತಿ ಇಬ್ರಾಹಿಂ ರೈಸಿ ಈಗಾಗಲೇ ಹೇಳಿದ್ದಾರೆ.

ಖಾಸಿಂ ಸುಲೇ ಮಾನಿ ಅವರನ್ನು ಹತ್ಯೆ ನಡೆಸಿದ ಅಪರಾಧಕ್ಕಾಗಿ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ, ಅಮೆರಿಕಾ ಸೇನೆ. ಅಮೆರಿಕಾ ಸರ್ಕಾರ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಿಚಾರಣೆಗೊಳಪಡಿಸಲು ನಾವು ಉದ್ದೇಶಿಸಿದ್ದೇವೆ ಎಂದು ಇಸ್ಮಾಯಲಿ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದರು

ಅಮೆರಿಕಾ ವಿರುದ್ದದ ವಿಚಾರಣೆಯನ್ನು ಇರಾಕಿ ನ್ಯಾಯಾಲಯಗಳಲ್ಲಿ ಹಾಗೂ ಇರಾನ್ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೊಳಪಡಿಬೇಕೆಂಬುದು ಇರಾನ್ ಬಯಸುತ್ತದೆ ಎಂದು ಅವರು ಹೇಳಿದರು.

ಯುಎನ್ ಐ ಕೆವಿಆರ್ ೧೭೫೪

More News

ಪಾಕಿಸ್ತಾನ ಆರೋಗ್ಯ ಸಚಿವರಿಗೂ ಕರೋನ ಸೋಂಕು

06 Jul 2020 | 7:17 PM

 Sharesee more..
ವಿಶ್ವದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1 14, ಮೃತರ ಸಂಖ್ಯೆ 5 33

ವಿಶ್ವದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1 14, ಮೃತರ ಸಂಖ್ಯೆ 5 33

06 Jul 2020 | 4:51 PM

ನವದೆಹಲಿ, ಜುಲೈ 6 (ಯುಎನ್ಐ) ವಿಶ್ವದಲ್ಲಿ ಕೊರೊನಾ ವೈರಸ್ ಸೋಂಕಿನ ಸಂಖ್ಯೆ ಹೆಚ್ಚುತ್ತಿದ್ದು, ಒಟ್ಟು ಪೀಡಿತರ ಸಂಖ್ಯೆ 1.14 ಕೋಟಿ ಮೀರಿದೆ ಮತ್ತು 5.33 ಲಕ್ಷಕ್ಕೂ ಹೆಚ್ಚು ಜನರು ಈ ಅವಧಿಯಲ್ಲಿ ಬಲಿಯಾಗಿದ್ದಾರೆ.

 Sharesee more..

ಹಜ್‌ ವೇಳೆ ಪವಿತ್ರ ಕಾಬಾ ಸ್ಪರ್ಶ ನಿಷೇಧ

06 Jul 2020 | 1:53 PM

 Sharesee more..