Friday, Apr 10 2020 | Time 09:48 Hrs(IST)
  • ನ್ಯೂಜಿಲೆಂಡ್ ನಲ್ಲಿ ಕೊರೊನಾ ಸೋಂಕಿನ ಎರಡನೇ ಸಾವಿನ ಪ್ರಕರಣ
  • ಅಸ್ಸಾಂನಲ್ಲಿ ಕೊರೊನಾ ಸೋಂಕಿನ ಮೊದಲ ಸಾವು
  • ಕೊರೊನಾ ಸಾಂಕ್ರಾಮಿಕ ರೋಗ ಕುರಿತಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮೊದಲ ಸಭೆ
  • ಒಪೆಕ್ ಒಪ್ಪಂದದಿಂದ ಹಿಂದೆ ಸರಿದ ಮೆಕ್ಸಿಕೋ
  • ಒಪೆಕ್ ಮಾತುಕತೆ ಶುಕ್ರವಾರ ಮುಂದುವರಿಕೆ
  • ವಿಶ್ವಾದ್ಯಂತ ಕೊರೊನಾ ಸೋಂಕಿನಿಂದ 95 ಸಾವಿರಕ್ಕೂ ಹೆಚ್ಚು ಜನರ ಸಾವು
  • ತೈಲ ಬೆಲೆ ಸ್ಥಿರತೆಗೆ ಸಹಕಾರದ ನಡೆ ಅಗತ್ಯ – ನಾಯಕರ ಪ್ರತಿಪಾದನೆ
Entertainment Share

ಸ್ವಸ್ಥವಾಗಿರಿ, ಸುರಕ್ಷಿತರಾಗಿರಿ: ದರ್ಶನ್

ಬೆಂಗಳೂರು, ಮಾ 25 (ಯುಎನ್‍ಐ) ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯ ಕೋರಿರುವ ಚಾಲೆಂಜಿಂಗ್ ‍ಸ್ಟಾರ್ ದರ್ಶನ್, ಈ ವರ್ಷ ಸಕಲ ಆಯಸ್ಸು ,ಆರೋಗ್ಯ ಮತ್ತು ಸಮೃದ್ಧಿ ನಿಮ್ಮದಾಗಲಿ. ನಾವೆಲ್ಲರೂ ಒಟ್ಟಿಗೆ ಈ ಮಾರಕ ಕರೋನ ವೈರಸ್ ವಿರುದ್ಧ ಹೋರಾಡೋಣ. ಸ್ವಚ್ಛವಾಗಿರಿ, ಸ್ವಸ್ತರಾಗಿರಿ, ಸುರಕ್ಷಿತವಾಗಿರಿ, ಸದ್ಯಕ್ಕೆ ಮನೆಯಲ್ಲಿಯೇ ಇರಿ ಎಂದು ಮನವಿ ಮಾಡಿದ್ದಾರೆ.

ಇನ್ನು ನಟ ಸತೀಶ್ ನೀನಾಸಂ, ರಾಜರಾಜೇಶ್ವರಿ ನಗರದ ಕೆಲ ಬಡಾವಣೆಗಳಲ್ಲಿ ಸೈಕಲ್ ಮೂಲಕ ಸಂಚರಿಸಿ, ಕೊರೋನಾ ಸೋಂಕಿನ ಗಂಭೀರತೆಯ ಬಗ್ಗೆ ತಿಳಿಸಿ ಪ್ರತಿಯೊಬ್ಬರೂ ಮನೆಯಲ್ಲಿಯೇ ಇರುವಂತೆ ಸೂಚಿಸಿದ್ದಾರೆ.

ಹಿರಿಯ ನಟ ಶಿವರಾಜ್ ಕುಮಾರ್, “ಎಲ್ಲಾ ಸರಿಹೋಗುತ್ತದೆ. ನಾವೆಲ್ಲಾ ಮನೆಯಲ್ಲೇ ಇದ್ದು, ಸೋಂಕು ನಿಯಂತ್ರಣಕ್ಕೆ ಸಹಕರಿಸೋಣ” ಎಂದು ಹೇಳುವ ಮೂಲಕ ಯುಗಾದಿ ಹಬ್ಬದ ಶುಭವನ್ನು ಕೋರಿದ್ದಾರೆ.
ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್, ಇಂದು ನಾವು ನಮ್ಮ ಮನೆಯಲ್ಲಿ ಸರಳ ಯುಗಾದಿ ಆಚರಣೆ ಮಾಡಿದ್ವಿ. ಮಗ ಅಭಿಷೇಕ್ ಜೆ. ಪಿ. ನಗರದ ಮನೆಯಲ್ಲಿದ್ದು ಲಾಕ್ ಡೌನ್ ಆದೇಶ ಪಾಲಿಸುತ್ತಿದ್ದಾರೆ. ಎಲ್ಲರೂ ನಿಮ್ಮ ಮನೆಯಲ್ಲಿಯೇ ಸರಳ ಮತ್ತು ಸುರಕ್ಷಿತ ಯುಗಾದಿ ಆಚರಿಸಿದಿರೆಂದು ನಂಬಿದ್ದೇನೆ. ಎಲ್ಲರಿಗೂ ಮತ್ತೊಮ್ಮೆ ಯುಗಾದಿ ಶುಭಾಶಯಗಳು ಲಾಕ್ ಡೌನ್ ತಪ್ಪದೆ ಪಾಲಿಸಿ ಎಂದು ಮನವಿ ಮಾಡಿದ್ದಾರೆ.
ಯುಎನ್‍ಐ ಎಸ್‍ಎ ವಿಎನ್ 1954
More News

ಹನುಮ‌ ಜಯಂತಿಗೆ ಶುಭಾಶಯ ಕೋರಿದ ದರ್ಶನ್

08 Apr 2020 | 5:07 PM

 Sharesee more..
ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ

ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ

07 Apr 2020 | 5:23 PM

ಬೆಂಗಳೂರು, ಏ.7 (ಯುಎನ್ಐ) ನಿನ್ನೆ ನಿಧನರಾದ ಸ್ಯಾಂಡಲ್ ವುಡ್ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಅಂತ್ಯಕ್ರಿಯೆಯನ್ನು ನಗರದ ಹೆಬ್ಬಾಳದ ರುದ್ರಭೂಮಿಯಲ್ಲಿಂದು ನೆರವೇರಿಸಲಾಯಿತು.

 Sharesee more..
ಕೊರೊನಾ ವೈರಸ್  ನಮ್ಮನ್ನು ಭಯಭೀತಗೊಳಿಸಿದೆ; ಸಲ್ಮಾನ್ ಖಾನ್

ಕೊರೊನಾ ವೈರಸ್ ನಮ್ಮನ್ನು ಭಯಭೀತಗೊಳಿಸಿದೆ; ಸಲ್ಮಾನ್ ಖಾನ್

06 Apr 2020 | 3:49 PM

ಪುಣೆ, ಏ ೬(ಯುಎನ್‌ಐ) ಕೊರೊನಾ ವೈರಸ್ ಸೋಂಕು ನಮ್ಮನ್ನು ಭಯ ಭೀತಗೊಳಿಸಿದೆ, ನನ್ನಪ್ಪ, ಸಿನಿಮಾ ಬರಹಗಾರ ಸಲೀಂ ಖಾನ್ ಅವರನ್ನು ಭೇಟಿ ಮಾಡಿ ಸುಮಾರು ಮೂರು ವಾರಗಳಾಗಿವೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸೋಮವಾರ ಹೇಳಿದ್ದಾರೆ.

 Sharesee more..
ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸ್ಥಿತಿ ಚಿಂತಾಜನಕ

ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸ್ಥಿತಿ ಚಿಂತಾಜನಕ

06 Apr 2020 | 3:44 PM

ಬೆಂಗಳೂರು, ಏ 06 (ಯುಎನ್‍ಐ) ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

 Sharesee more..