Monday, Aug 2 2021 | Time 13:22 Hrs(IST)
  • ಮೇಲ್ಮನೆ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪರ ಮಠಾಧೀಶರು ವಕಾಲತ್ತು
  • ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು
  • ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು
  • ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
Entertainment Share

ಸಾಹಸ ದೃಶ್ಯ ನೋಡಿ ನಟ ದೀಕ್ಷಿತ್ ತಂದೆ ರಾಜಣ್ಣ ಕಣ್ಣೀರಾಗಿದ್ದೇಕೆ?

ಸಾಹಸ ದೃಶ್ಯ ನೋಡಿ ನಟ ದೀಕ್ಷಿತ್ ತಂದೆ ರಾಜಣ್ಣ ಕಣ್ಣೀರಾಗಿದ್ದೇಕೆ?
ಸಾಹಸ ದೃಶ್ಯ ನೋಡಿ ನಟ ದೀಕ್ಷಿತ್ ತಂದೆ ರಾಜಣ್ಣ ಕಣ್ಣೀರಾಗಿದ್ದೇಕೆ?

ಬೆಂಗಳೂರು, ಜುಲೈ 20(ಯುಎನ್ಐ) ನಿರ್ದೇಶಕ ರವಿ ಶ್ರೀವತ್ಸ ಸಾರಥ್ಯದಲ್ಲಿ ಡೆಡ್ಲಿ 3 ಚಿತ್ರೀಕರಣ ಆರಂಭವಾಗಿದ್ದು, ಬೆಂಗಳೂರು, ಮಂಗಳೂರು ಹಾಗೂ ಕಾಂಬೋಡಿಯಾದಲ್ಲಿ ಚಿತ್ರೀಕರಿಸಲು ತಂಡ ನಿರ್ಧರಿಸಿದೆ.ಇನ್ನು, ಚಿತ್ರದ ನಾಯಕ, ಉದಯೋನ್ಮುಖ ನಟ ದೀಕ್ಷಿತ್ ತಮ್ಮ ಪ್ರತಿಭೆಯಿಂದಾಗಿ ನಿರ್ದೇಶಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರಕ್ಕೆ ಶೋಭಾ ರಾಜಣ್ಣ ಬಂಡವಾಳ ಹೂಡಿದ್ದು, ಮಗನಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.“ಮಗ ಡ್ಯೂಪ್ ಇಲ್ಲದೆ ಸಾಹಸ ದೃಶ್ಯಗಳಲ್ಲಿ ಪಾಲ್ಗೊಂಡಿದ್ದ. ಗ್ಲಾಸ್ ಬ್ರೇಕ್ ಮಾಡುವಾಗಿ ಆತನಿಗೆ ಪೆಟ್ಟಾಗಿ 3 ಹೊಲಿಗೆ ಹಾಕಿಸುವ ಸಂದರ್ಭ ಬಂದಾಗ ಕಣ್ಣೀರಿಟ್ಟಿದ್ದೆ. ಆತ ಬಹಳ ಧೈರ್ಯಶಾಲಿ. ಆದರೂ ತಂದೆಯಾದ ಕಾರಣ ನನಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಮುಂದೆ ಇಂತಹ ದೃಶ್ಯಗಳ ಚಿತ್ರೀಕರಣವನ್ನು ನೀವು ನೋಡೋದು ಬೇಡ ಅಂತ ನಿರ್ದೇಶಕರು ಹೇಳಿದ್ದಾರೆ” ಎಂದು ನಟ ದೀಕ್ಷಿತ್ ತಂದೆ ರಾಜಣ್ಣ ಯುಎನ್ ಐಗೆ ತಿಳಿಸಿದರು.

ಅಂಡರ್ ವರ್ಲ್ಡ್, ಪ್ರೀತಿ ಹಾಗೂ ಕೌಟುಂಬಿಕ ಕಥಾ ಹಂದರವನ್ನು ಡೆಡ್ಲಿ 3 ಹೊಂದಿದೆ. ನಟ ಆದಿತ್ಯ ಅವರೊಂದಿಗೆ ಡೆಡ್ಲಿ ಸೋಮಾ ಸರಣಿಯನ್ನು ನಿರ್ದೇಶಿಸಿದ್ದ ರವಿ ಶ್ರೀವತ್ಸ ಡೆಡ್ಲಿ 3 ಗೂ ಮುನ್ನ ದೀಕ್ಷಿತ್ ಗೆ “ಎಂಆರ್” ಎಂಬ ಸಿನಿಮಾವನ್ನು ನಿರ್ದೇಶಿಸುವ ಯೋಜನೆ ಹೊಂದಿದ್ದರು. ಇದು ಮುತ್ತಪ್ಪ ರೈ ಅವರ ಜೀವನಾಧಾರಿತ ಕಥೆ ಹೊಂದಿದ ಸಿನಿಮಾ ಆಗಿತ್ತು. ಆದರೆ ಹಲವಾರು ವಿವಾದಗಳ ಕಾರಣದಿಂದಾಗಿ ಆ ಸಿನಿಮಾದ ಯೋಜನೆ ಚಿತ್ರೀಕರಣಕ್ಕೂ ಮುನ್ನವೇ ಸ್ಥಗಿತಗೊಂಡಿತು. ಆದಾಗ್ಯೂ ಎಂಆರ್ ಚಿತ್ರವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಚಿತ್ರ ನಿರ್ಮಾಣ ಖಚಿತ ಎಂದು ಶ್ರೀವತ್ಸ ತಿಳಿಸಿದ್ದಾರೆ.“ದೀಕ್ಷಿತ್ ಬಾಲ್ಯದಿಂದಲೂ ಹೀರೋ ಆಗಬೇಕು ಎಂಬ ಕನಸು ಕಂಡು ನಟನೆಯನ್ನು ಮೈಗೂಡಿಸಿಕೊಂಡು ಬೆಳೆದಿದ್ದಾನೆ. ಡ್ಯಾನ್ಸ್​, ಫೈಟ್​, ನಟನೆಯ ಕ್ಲಾಸ್​ಗಳಿಗೆ ತೆರಳಿ ಎಲ್ಲವನ್ನೂ ಕಲಿತಿದ್ದಾನೆ. ಸಿನಿಮಾದಲ್ಲಿ ಏನಾದರೂ ಮಾಡಬೇಕು ಎಂಬ ಆಸೆ ಅವನಿಗೆ ಇದೆ. ‘ಟೈಗರ್​ ಗಲ್ಲಿ’ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರ ಕೊಟ್ಟಿದ್ದೆ. ಅವನು ಹೀರೋ ಆಗಿ ಬೆಳೆಯುತ್ತಾನೆ ಎಂದು ಭರವಸೆ ಆಗಲೇ ನನಗೆ ಮೂಡಿತ್ತು’ ಎಂದು ರವಿಶ್ರೀವತ್ಸ ಹೇಳಿದ್ದಾರೆ.2005ರಲ್ಲಿ ‘ಡೆಡ್ಲಿ ಸೋಮ’ ಸಿನಿಮಾ ಸೂಪರ್​ ಹಿಟ್​ ಆಯಿತು. ನಟ ಆದಿತ್ಯ ಅವರಿಗೆ ಆ ಚಿತ್ರದಿಂದ ದೊಡ್ಡ ಯಶಸ್ಸು ಸಿಕ್ಕಿತು. ನಿರ್ದೇಶಕ ರವಿ ಶ್ರೀವತ್ಸ ಅವರು ಗಾಂಧಿನಗರದಲ್ಲಿ ಭರವಸೆಯ ನಿರ್ದೇಶಕ ಎನಿಸಿಕೊಂಡರು. ರಿಯಲ್​ ಲೈಫ್​ ಭೂಗತ ಲೋಕದ ಕಥೆಯನ್ನು ಹೊಂದಿದ್ದ ಆ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ನಂತರ 2010ರಲ್ಲಿ ಈ ಚಿತ್ರಕ್ಕೆ ಸೀಕ್ವೆಲ್​ ಮಾಡಲಾಯಿತು. ‘ಡೆಡ್ಲಿ 2’ ಹೆಸರಲ್ಲಿ ಆ ಸಿನಿಮಾ ಮೂಡಿಬಂತು. ಅದಕ್ಕೂ ರವಿ ಶ್ರೀವತ್ಸ ನಿರ್ದೇಶಿಸಿದರು. ನಾಯಕನಾಗಿ ಆದಿತ್ಯ ಮುಂದುವರಿದಿದ್ದರು. ಆದರೆ ಡೆಡ್ಲಿ 3 ಚಿತ್ರದಲ್ಲಿ ಬಾಲ ಸೋಮನಾಗಿ ಅಭಿನಯಿಸಿದ್ದ ದೀಕ್ಷಿತ್ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

There is no row at position 0.