Tuesday, Jan 21 2020 | Time 22:13 Hrs(IST)
 • ಟ್ರಂಪ್ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
 • ಸಿದ್ದರಾಮಯ್ಯ ವಿರುದ್ಧ ಪ್ರತಿಭಟಿಸಿದವರನ್ನು ಪಕ್ಷದಿಂದ ಅಮಾನತುಗೊಳಿಸಿದ ದಿನೇಶ್ ಗುಂಡೂರಾವ್
 • ಅಂಧರ ಕ್ರಿಕೆಟ್: ಆಂಧ್ರ ಪ್ರದೇಶ ತಂಡಕ್ಕೆೆ ಟಿ-20 ಮುಕುಟ
 • ಕೃಷಿ ಆಧಾರಿತ ಉದ್ಯಮ ಸ್ಥಾಪನೆ, ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು: ಹೂಡಿಕೆದಾರರಿಗೆ ಯಡಿಯೂರಪ್ಪ ಮನವಿ
 • ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಿಂದ ಇಶಾಂತ್ ಶರ್ಮಾ ಔಟ್
 • ನಾರಾಯಣ ಹೆಲ್ತ್ ಸಿಟಿಯಿಂದ ನಾಲ್ಕು ವರ್ಷದ ಮಗುವಿಗೆ ಹೃದಯ ಕಸಿ: ಮಹತ್ವದ ಸಾಧನೆ
 • ಆನಂದ್ ಸಿಂಗ್, ಕಂಪ್ಲಿ ಗಣೇಶ್ ಖುದ್ದು ಹಾಜರಾಗಲೇಬೇಕು: ಹೈಕೋರ್ಟ್ ಆದೇಶ
 • ಅಮರಾವತಿ ಆಂಧ್ರ ರಾಜಧಾನಿಯಾಗಿ ಮುಂದುವರಿಯಲಿದೆ; ಪವನ್ ಕಲ್ಯಾಣ್
 • ಮನೆ ಮನೆಗೆ ಸಿಎಎ ವಿರುದ್ಧ ಅಭಿಯಾನ ಕೊಂಡೊಯ್ಯಲು ಜೆಡಿಎಸ್ ಸಿದ್ಧತೆ
 • ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ನೋಂದಣಿ ಇಳಿಮುಖ: ಮುಖ್ಯಚುನಾವಣಾಧಿಕಾರಿ ಬೇಸರ!
 • ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ
 • ಮೆಂಟನ್ ಕಪ್ ಶೂಟಿಂಗ್ : ಅಪೂರ್ವಿ, ದಿವ್ಯಾಂಶ್ ಗೆ ಚಿನ್ನದ ಪದಕ
 • ಟ್ರಂಪ್ ಹತ್ಯೆಗೆ 3 ಮಿಲಿಯನ್ ಡಾಲರ್ ಬಹುಮಾನ!
 • ಮಂಗಳೂರು ವಿಮಾನ ನಿಲ್ದಾಣದ್ದು ಬಾಂಬ್ ಪತ್ತೆ ಪ್ರಕರಣವಲ್ಲ, ಅಣಕು ಪ್ರದರ್ಶನ, ಹುಡುಗಾಟ: ಕುಮಾರ ಸ್ವಾಮಿ ಲೇವಡಿ
 • ಎಸ್ ಬಿಐನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಚಲ್ಲ ಶ್ರೀನಿವಾಸುಲು ಶೆಟ್ಟಿ ಅಧಿಕಾರ ಸ್ವೀಕಾರ
Health -Lifestyle Share

ಹಸುಗೂಸಿನ ಹೊಟ್ಟೆಯಲ್ಲಿತ್ತು ಭ್ರೂಣದಂತಹ ಗೆಡ್ಡೆ; ಮಣಿಪಾಲ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಬೆಂಗಳೂರು, ಆಗಸ್ಟ್ 12(ಯುಎನ್ಐ) ಪಶ್ಚಿಮ ಬಂಗಾಳದ 87ತಿಂಗಳ ಹಸುಗೂಸೊಂದರ ಹೊಟ್ಟೆಯಲ್ಲಿದ್ದ ಭ್ರೂಣದಂತಹ ಗೆಡ್ಡೆಯನ್ನು ನಗರದ ಮಣಿಪಾಲ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದೆ.

ಹೊಟ್ಟೆಯ ಭಾಗದಲ್ಲಿ ದೊಡ್ಡ ಊತದ ಸಮಸ್ಯೆ ಹೊತ್ತು ಆಸ್ಪತ್ರೆಗೆ ಬಂದಿದ್ದ ಹಸುಗೂಸು ಅಭೀರ್ ಮೊಂಡಲ್ ಅವರ ಪೋಷಕರಿಗೆ ಆಸ್ಪತ್ರೆಯ ವೈದ್ಯರ ತಂಡ ಹೊಸ ಆಶಾಕಿರಣ ನೀಡಿದೆ. ಈ ಮಗುವಿನ ತಪಾಸಣೆ ನಡೆಸಿದ್ದ ಕೋರಮಂಗಲದ ಮಣಿಪಾಲ್ ಮಕ್ಕಳ ತಪಾಸಣಾ ಕ್ಲಿನಿಕ್ ನ ಮುಖ್ಯಸ್ಥ ಡಾ. ರಾಧಾಕೃಷ್ಣ ಅವರು ಹೊಟ್ಟೆಯೊಳಗೆ ಗಡ್ಡೆ ಮೂಳೆ ಅಲ್ಲದೇ ದ್ರವ ಮತ್ತು ಘನ ಪದಾರ್ಥಗಳಿಂದ ಕೂಡಿದ್ದನ್ನು ಪತ್ತೆ ಹಚ್ಚಿದ್ದರು. ನಂತರ ವೈದ್ಯರ ತಂಡದೊಂದಿಗೆ ಸಮಾಲೋಚನೆ ನಡೆಸಿ , ಶಸ್ತ್ರಚಿಕಿತ್ಸೆ ಮೂಲಕ ಗೆಡ್ಡೆಯನ್ನು ಹೊರತೆಗೆದಿದ್ದಾರೆ.

ಪಶ್ಚಿಮ ಬಂಗಾಳದ ದ ತನ್ಮಯ್ ಮೊಂಡಲ್ ಪತ್ನಿ ಬಿಜಿಯ ಮೊಂಡಲ್ ಗರ್ಭಿಣಿಯಾಗಿದ್ದಾಗ ಹಲವು ಪರೀಕ್ಷೆ ಮತ್ತು ಸ್ಕಾನ್‌ಗಳನ್ನು ಮಾಡಿಸಿದ್ದರಾದರೂ, ಆಗ ಅವರಿಗೆ ಶಿಶುವಿನ ಬೆಳವಣಿಗೆಯಲ್ಲಿ ಯಾವುದೇ ಲೋಪಗಳು ಕಂಡಿರಲಿಲ್ಲ. ಶಿಶು ಅವಧಿಗೆ ಮುನ್ನ ಅಂದರೆ 7ನೇ ತಿಂಗಳಲ್ಲಿಯೇ ಜನಿಸಿತ್ತು. ಅಭೀರ್‌ಗೆ ಎರಡು ತಿಂಗಳಾಗಿದ್ದಾಗ ಆತನ ಹೊಟ್ಟೆಯ ಭಾಗದಲ್ಲಿ ಅಸಾಮಾನ್ಯ ಊತ ಇರುವುದು ಪತ್ತೆಯಾಗಿತ್ತು. ಹಲವು ವೈದ್ಯರಿಗೆ ತೋರಿಸಿದರೂ ಪ್ರಯೋಜನವಾಗಿರಲಿಲ್ಲ. ನಂತರ, ಕೋಲ್ಕತಾದ ವೈದ್ಯರೊಬ್ಬರು ಅಸಾಮಾನ್ಯ ಗಡ್ಡೆಯನ್ನು ಪತ್ತೆ ಮಾಡಿದ್ದರು. ಅಲ್ಲದೇ ಇದು ಅತ್ಯಂತ ಅಪರೂಪ ಹಾಗೂ ಸಂಕೀರ್ಣ ಪ್ರಕರಣವಾದ್ದರಿಂದ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹೋಗಲು ಸಲಹೆ ನೀಡಿದ್ದರು.

ಶಸ್ತ್ರಚಿಕಿತ್ಸೆ ಕುರಿತು ವಿವರಿಸಿದ ಡಾ. ರಾಧಾಕೃಷ್ಣ,. ಶಿಶುವಿನ ಹೊಟ್ಟೆಯ ಹಿಂಭಾಗದ ಗೋಡೆಯಿಂದ ಮುಂಭಾಗದವರೆಗೂ ದೊಡ್ಡ ಗಾತ್ರದ ಗೆಡ್ಡೆ ಹರಡಿತ್ತು. ಇದರೊಳಗೆ ದ್ರವ ಮತ್ತು ಘನ ವಸ್ತುಗಳು ಮಿಶ್ರವಾಗಿತ್ತು. ಈ ಮುದ್ದೆಯನ್ನು ಟೆರಟೋಮಾಸ್ ಎಂದೂ ಹೇಳುತ್ತಾರೆ. ಅಂದರೆ ಸಾಮಾನ್ಯವಾಗಿ ಆ ಜಾಗದಲ್ಲಿ ಇರದ ಅಂಗಾಶಗಳಿಂದ ಅದು ಕೂಡಿತ್ತು. ಇದು ಬಹಳ ಅಪರೂಪದ ಸ್ಥಿತಿ ಫೀಟಸ್ ಇನ್ ಫಿಟುವನ್ನು ಹೋಲುತ್ತಿತ್ತು. ಈ ಸ್ಥಿತಿ ಅಪರೂಪದ ಜನ್ಮಜಾತ ಲೋಪವಾಗಿದೆ. ತನ್ನ ಅವಳಿಯ ದೇಹದಲ್ಲಿನ ಪರೋಪಜೀವಿ ಭ್ರೂಣ ಮತ್ತು ವಿರೂಪತೆಯನ್ನು ಈ ಸ್ಥಿತಿ ಒಳಗೊಂಡಿರುತ್ತದೆ ಎಂದರು.

ಹೊಟ್ಟೆ, ಪ್ಯಾಂಕ್ರಿಯಾ ಮತ್ತು ಕರುಳಿಗೆ ರಕ್ತ ಪೂರೈಸುವ ಪ್ರಮುಖ ರಕ್ತನಾಳಗಳು ಕೂಡ ಸ್ಥಳಪಲ್ಲಟಗೊಂಡಿದ್ದು, ಈ ಗಡ್ಡೆಗೆ ಹತ್ತಿರವಾಗಿದ್ದವು. ದೇಹದ ಇತರೆ ಅಂಗಗಳಿಂದ ಗಡ್ಡೆಯನ್ನು ಬೇರ್ಪಡಿಸಲು ಬಹಳ ಎಚ್ಚರಿಕೆಯಿಂದ ಮತ್ತು ಸೂಕ್ಷ್ಮವಾಗಿ ಗಮನಿಸಿ ಕತ್ತರಿಸಬೇಕಾಯಿತು. ಎಚ್ಚರಿಕೆಯಿಂದ ಸೂಕ್ಷ್ಮವಾಗಿ ಪರೀಕ್ಷೆ ನಡೆಸಿದಾಗ ಈ ಮಾದರಿಯಲ್ಲಿ ಕೆಲವು ವಿರಳವಾದ ಅಂಶಗಳು ಪತ್ತೆಯಾಗಿದ್ದವು. ಘನ ವಸ್ತುಗಳಲ್ಲಿ ಮೆದುಳು, ಕೂದಲು, ಕರುಳಿನ ಅಂಗಾಂಶಗಳು ಮತ್ತು ಮೂಳೆಗಳು ಸೇರಿದ್ದವು. ಜೊತೆಗೆ ಇದು ಪೂರ್ಣವಾಗಿ ರೂಪುಗೊಳ್ಳದ ಭ್ರೂಣವಾಗಿ ಕಂಡಿತ್ತು ಎಂದು ಡಾ. ರಾಧಾಕೃಷ್ಣ ವಿವರಿಸಿದರು.

ಆಧುನಿಕ ವೈದ್ಯಕೀಯ ಸಾಹಿತ್ಯದ ಪ್ರಕಾರ ಫೀಟಸ್ ಇನ್ ಫೀಟು(ಎಫ್‌ಐಎಫ್) ಅತ್ಯಂತ ವಿರಳವಾಗಿ ಕಂಡುಬರುವ ಸ್ಥಿತಿಯಾಗಿದ್ದು, ಇದುವರೆಗೆ ಕೆಲವೇ ನೂರರಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ರೋಗನಿರ್ಣಯ ಸುಲಭವಾಗಿರುವುದಿಲ್ಲ. ಇದರ ಬೆಳವಣಿಗೆ ಕೆಲವು ತಿಂಗಳಿಂದ ವರ್ಷಗಳವರೆಗೆ ಆಗಬಹುದಾಗಿದೆ.

ಅಭೀರ್ ಪೋಷಕರು ಮಾತನಾಡಿ, “ಇದು ನಮಗೆ ಪವಾಡಕ್ಕಿಂತಲೂ ಕಡಿಮೆಯೇನಲ್ಲ. ನಮ್ಮ ಶಿಶುವಿನ ಸ್ಥಿತಿ ಕುರಿತು ನಾವು ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದೆವು. ಹಲವಾರು ವೈದ್ಯರು ನೋಡಿದರೂ ಶಿಶುವಿನ ಈ ಸ್ಥಿತಿ ಸರಿಯಾಗಿ ಪತ್ತೆಯಾಗಿರಲಿಲ್ಲ. ಅಭೀರ್ ಈಗ ಉತ್ತಮ ರೀತಿಯಲ್ಲಿ ಚೇತರಿಸಿಕೊಂಡಿದ್ದು, ನಾವು ಈಗ ಪಶ್ಚಿಮ ಬಂಗಾಳಕ್ಕೆ ವಾಪಸ್ ತೆರಳುತ್ತಿದ್ದೇವೆ. ನಮ್ಮ ಶಿಶುವಿಗೆ ನೂತನ ಭರವಸೆ ನೀಡಿದ್ದಕ್ಕಾಗಿ ಮತ್ತು ಅವರ ಅದ್ಭುತ ಬೆಂಬಲಕ್ಕಾಗಿ ಡಾ. ರಾಧಾಕೃಷ್ಣ ಮತ್ತು ಅವರ ಮಣಿಪಾಲ್ ಆಸ್ಪತ್ರೆಯ ವೈದ್ಯರ ತಂಡಕ್ಕೆ ನಾವು ಕೃತಜ್ಞರಾಗಿದ್ದೇವೆ ಎಂದರು.

ಯುಎನ್ಐ ಎಸ್ಎಚ್ ಎಸ್ಎ 1922
More News
ವಾಗ್ಮೀ, ಕವಿ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಪ್ರಧಾನಿಯಾಗಿ ಹತ್ತು ಹಲವು ಆಯಾಮಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ

ವಾಗ್ಮೀ, ಕವಿ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಪ್ರಧಾನಿಯಾಗಿ ಹತ್ತು ಹಲವು ಆಯಾಮಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ

25 Dec 2019 | 4:06 PM

ನವದೆಹಲಿ, ಡಿ 25 [ಯುಎನ್ಐ] ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಬದುಕು, ಬರಹ, ರಾಜಕೀಯ ಜೀವನ ಕುರಿತು ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವರಾಗಿದ್ದ ಸಂದರ್ಭದಲ್ಲಿ ಈಗಿನ ಉಪ ರಾಷ್ಟ್ರಪತಿ ಎಂ.

 Sharesee more..