Monday, Sep 16 2019 | Time 20:26 Hrs(IST)
  • ಐಐಟಿ ದೆಹಲಿ ಜೆಇಇ ( ಅಡ್ವಾನ್ಸ್ಡ್ ) ಪರೀಕ್ಷೆ 2020ರ ಮೇ 17 ಕ್ಕೆ; ಅಮೆರಿಕದಲ್ಲೂ ಪರೀಕ್ಷಾ ಕೇಂದ್ರ
  • ಇಡಿ ಸಮನ್ಸ್ ಪ್ರಶ್ನಿಸಿ ಡಿ ಕೆ ಶಿವಕುಮಾರ್ ಮೇಲ್ಮನವಿ ತೀರ್ಪು ಕಾಯ್ದಿರಿಸಿ ಹೈಕೋರ್ಟ್ ; ನಾಳೆ ತೀರ್ಪು ಸಾಧ್ಯತೆ
  • ಸೇವೆಯಿಂದ ಮಾತ್ರ ಶ್ರೇಷ್ಠ ವೈದ್ಯರಾಗಲು ಸಾಧ್ಯ; ಡಾ ಹರ್ಷವರ್ಧನ್
  • ರಾಷ್ಟ್ರಪತಿ, ಸಾಮಾನ್ಯ ಪ್ರಜೆಗೂ ಒಂದೇ ಕಾನೂನು: ಡಿಸಿಎಂ ಲಕ್ಷ್ಮಣ ಸವದಿ
  • ಕೆಬಿಸಿ; ಕೋಟಿ ರೂಪಾಯಿ ಗೆದ್ದ ಮಧ್ಯಾಹ್ನ ಬಿಸಿಯೂಟ ತಯಾರಿಸುವ ಕಾರ್ಯಕರ್ತೆ
  • ಮತದಾರ ಪಟ್ಟಿ ಪರಿಷ್ಕರಣಾ ಆಂದೋಲನ; ಸೇರ್ಪಡೆ, ತಿದ್ದುಪಡಿಗೆ ಅವಕಾಶ- ಅನಿಲ್ ಕುಮಾರ್
  • ಭಾಷೆ, ಸಂಸ್ಕೃತಿ ಹೆಸರಲ್ಲಿ ಸಂಘರ್ಷ ಸೃಷ್ಟಿಸುವುದು ಬಿಜೆಪಿ ಕೆಲಸ : ದಿನೇಶ್ ಗುಂಡೂರಾವ್
  • ಕಾಂಗ್ರೆಸ್ ಪಕ್ಷ ಮುಳಗುತ್ತಿರುವ ಹಡಗು: ಎಂ ಪಿ ರೇಣುಕಾಚಾರ್ಯ ಲೇವಡಿ
  • ಆಪ್‍ನಿಂದ ವಾರ್ಡ್ ನಿರ್ವಹಣಾ ಕೈಪಿಡಿ ಬಿಡುಗಡೆ
  • ಬಿಬಿಎಂಪಿ ಆಯುಕ್ತರ ಅಧಿಕಾರ ಮೊಟಕು; ವಿಶೇಷ, ಹೆಚ್ಚುವರಿ ಆಯುಕ್ತರಿಗೆ ಹೆಚ್ಚಿನ ಹೊಣೆ- ನಗರಾಭಿವೃದ್ಧಿ ಇಲಾಖೆ ಆದೇಶ
  • ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು
  • ಸರ್ಕಾರದ ಕಿರುಕುಳದಿಂದ ಕೊಡೆಲಾ ಆತ್ಮಹತ್ಯೆ: ಚಂದ್ರಬಾಬು ನಾಯ್ಡು ಆರೋಪ
  • ಕಳುವಾದ ಮೊಬೈಲ್ ಫೊನ್ ಪತ್ತೆಗೆ ಹೊಸ ತಂತ್ರ !
  • ಮೋಟಾರು ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ 19ರಂದು ಬೆಂಗಳೂರು ವಕೀಲರ ಸಂಘದ ಪ್ರತಿಭಟನೆ
  • ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಬೆಂಗಳೂರು ನಗರ ಉಳಿಸಿಕೊಂಡ ಮುಖ್ಯಮಂತ್ರಿ
Sports Share

ಹಾಕಿ: ನೆದರ್‌ಲೆಂಡ್‌ಗೆ ಮಣಿದ ಭಾರತ ಕಿರಿಯರು

ಮ್ಯಾಡ್ರಿಡ್‌, ಜೂ 12 (ಯುಎನ್‌ಐ) ಕಠಿಣ ಹೋರಾಟದ ನಡುವೆಯೂ ಭಾರತ ಕಿರಿಯರ ಹಾಕಿ ತಂಡ ಎಂಟು ರಾಷ್ಟ್ರಗಳ 21 ವಯೋಮಿತಿ ಆಹ್ವಾನಿತ ಟೂರ್ನಿಯ ಪಂದ್ಯದಲ್ಲಿ ನೆದರ್‌ಲೆಂಡ್‌ ವಿರುದ್ಧ 2-3 ಅಂತರದಲ್ಲಿ ಸೋಲು ಅನುಭವಿಸಿತು.
ಪಂದ್ಯದ ಮೊದಲ ಕ್ವಾರ್ಟರ್‌ 5ನೇ ನಿಮಿಷದಲ್ಲೇ ಜಿಮ್‌ ವಾನ್‌ ಡೆ ವೆನ್ನೆ ಅವರು ನೆದರ್‌ಲೆಂಡ್‌ಗೆ ಗೋಲಿನ ಖಾತೆ ತೆರೆದರು. ನಂತರ, ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ಭಾರತ ಸಮಬಲ ಸಾಧಿಸಲು ಸಾಕಷ್ಟು ಪ್ರಯತ್ನ ನಡೆಸಿತು. ಆದರೆ, ಗೋಲು ಗಳಿಸಲು ಸಾಧ್ಯವಾಗಿರಲಿಲ್ಲ.
ಎರಡನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳ ನಡುವೆ ಭಾರಿ ಕಾದಾಟ ಏರ್ಪಟ್ಟಿತ್ತು. ಆದರೆ, ಎರಡೂ ತಂಡಗಳು ರಕ್ಷಣಾ ಕೋಟೆಗಳ ಗುಣಮಟ್ಟದ ಪ್ರದರ್ಶನ ತೋರಿದವು. 23ನೇ ನಿಮಿಷದಲ್ಲಿ ವಿಷ್ಣುಕಾಂತ್‌ ಅವರು ಭಾರತಕ್ಕೆ ಗೋಲಿನ ಖಾತೆ ತೆರೆದರು. ಇದರೊಂದಿಗೆ ಎರಡೂ ತಂಡಗಳು ಸಮಬಲ ಸಾಧಿಸಿದವು.
ಆದರೆ, ಭಾರತ ಸಮಬಲ ಮಾಡಿಕೊಂಡ ಮೂರು ನಿಮಿಷಗಳ ಬಳಿಕ ನೆದರ್‌ಲೆಂಡ್‌ಗೆ ವಾನ್‌ ಡೆ ವೆನ್ನೆ ಅವರು ಪೆನಾಲ್ಟಿ ಕಾರ್ನರ್‌ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಸಫಲರಾಗುತ್ತಾರೆ. ಮೊದಲ ಅವಧಿ ಬಳಿಕ ನೆದರ್‌ಲೆಂಡ್‌ 2-1 ಮುನ್ನಡೆಯೊಂದಿಗೆ ವಿಶ್ರಾಂತಿಗೆ ತೆರಳಿತು.
ವಿಶ್ರಾಂತಿ ಬಳಿಕ ಕಣಕ್ಕೆ ಇಳಿದ ಭಾರತ ಹಾಗೂ ನೆದರ್‌ಲೆಂಡ್‌ ತಂಡಗಳು ಆಟದ ತೀವ್ರತೆ ಹಾಗೂ ವೇಗವನ್ನು ಹೆಚ್ಚಿಸಿದವು. ಆದರೆ, ಡೆರ್ಕ್ ಡೆ ವಿಲ್ಡರ್ ಅವರು ನೆದರ್‌ಲೆಂಡ್‌ಗೆ ಮೂರನೇ ಗೋಲು ಕೊಡುಗೆಯಾಗಿ ನೀಡಿದರು.
ಎರಡು ಗೋಲುಗಳ ಹಿನ್ನಡೆಯಿಂದ ತೀವ್ರ ಒತ್ತಡಕ್ಕೆ ಒಳಗಾದ ಭಾರತ, ಗೋಲು ಗಳಿಸಲು ಸಾಕಷ್ಟು ಪ್ರಯತ್ನ ನಡೆಸಿತು. ಅದರಂತೆ 37ನೆ ನಿಮಿಷದಲ್ಲಿ ಸುದೀಪ್‌ ಚಿರ್ಮಾಕೊ ಅವರು ಮಹತ್ವದ ಗೋಲು ಗಳಿಸಿ ತಂಡದ ಹಿನ್ನಡೆಯ ಅಂತರವನ್ನು ಕಡಿಮೆಗೊಳಿಸಿದರು.
ನಂತರ ಅಂತಿಮ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ಭಾರತ ಗೋಲು ಗಳಿಸಲು ಸಾಕಷ್ಟು ಹೆಣಗಾಡಿತು. ಆದರೂ ಡಚ್‌ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 2-3 ಅಂತರದಲ್ಲಿ ಭಾರತ, ನೆದರ್‌ಲೆಂಡ್‌ಗೆ ಶರಣಾಯಿತು.
ಯುಎನ್‌ಐ ಆರ್‌ಕೆ ಎಎಚ್‌ 1247
More News

ವಿನೇಶ, ದಿವ್ಯಾ, ಸಾಕ್ಷಿಯ ಮೇಲೆ ಎಲ್ಲರ ಕಣ್ಣು

16 Sep 2019 | 7:40 PM

 Sharesee more..

ಸ್ಥಿರ ಪ್ರದರ್ಶನ ನೀಡಿದ ಸಂತಸವಿದೆ: ಸ್ಮಿತ್

16 Sep 2019 | 7:39 PM

 Sharesee more..
ಐಸಿಸಿ ಟೆಸ್ಟ್ ಶ್ರೇಯಾಂಕ: ಸ್ಮಿತ್‌ಗೆ ಅಗ್ರಸ್ಥಾನ, ದ್ವಿತೀಯ ಸ್ಥಾನದಲ್ಲಿ ಕೊಹ್ಲಿ

ಐಸಿಸಿ ಟೆಸ್ಟ್ ಶ್ರೇಯಾಂಕ: ಸ್ಮಿತ್‌ಗೆ ಅಗ್ರಸ್ಥಾನ, ದ್ವಿತೀಯ ಸ್ಥಾನದಲ್ಲಿ ಕೊಹ್ಲಿ

16 Sep 2019 | 6:14 PM

ದುಬೈ, ಸೆಪ್ಟೆಂಬರ್ 16 (ಯುಎನ್‌ಐ) ಸೋಮವಾರ ಬಿಡುಗಡೆಯಾದ ಬ್ಯಾಟ್ಸ್‌ಮನ್‌ಗಳ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅಗ್ರಸ್ಥಾನದಲ್ಲಿದ್ದರೆ, ಭಾರತದ ನಾಯಕ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿ ಸ್ಥಿರವಾಗಿ ಉಳಿದಿದ್ದಾರೆ.

 Sharesee more..
ಬಂಜಾ ಲುಕಾ ಚಾಲೆಂಜರ್‌: ರನ್ನರ್ ಅಪ್‌ಗೆ ತೃಪ್ತಿಪಟ್ಟ ಸುಮಿತ್‌ ನಗಾಲ್‌

ಬಂಜಾ ಲುಕಾ ಚಾಲೆಂಜರ್‌: ರನ್ನರ್ ಅಪ್‌ಗೆ ತೃಪ್ತಿಪಟ್ಟ ಸುಮಿತ್‌ ನಗಾಲ್‌

16 Sep 2019 | 4:31 PM

ನವದೆಹಲಿ, ಸೆ 16 (ಯುಎನ್‌ಐ) ಆರನೇ ಶ್ರೇಯಾಂಕದ ಭಾರತದ ಸುಮಿತ್‌ ನಗಾಲ್‌ ಅವರು ಬಂಜ ಲುಕಾ ಚಾಲೆಂಜರ್‌(ಬೋಸ್ನಿಯಾ ಮತ್ತು ಹರ್ಜೆಗೋವಿನಾ) 2019ರ ಟೆನಿಸ್‌ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ನೇದರ್‌ಲೆಂಡ್‌ನ ಟಾಲನ್ ಗ್ರಿಕ್ಸ್‌ಪೂರ್ ಅವರ ವಿರುದ್ಧ ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟರು

 Sharesee more..