Thursday, Aug 22 2019 | Time 14:55 Hrs(IST)
 • ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಕಾರಣ-ಎಚ್ ಡಿ ದೇವೇಗೌಡ
 • ಇಸ್ರೋ ಮುಖ್ಯಸ್ಥ ಸಿವನ್ ಗೆ, ಅಬ್ದುಲ್ ಕಲಾಂ ಪ್ರಶಸ್ತಿ ಪ್ರದಾನ
 • ಮಾದಕ ವಸ್ತು ಮಾರಾಟ ಯತ್ನ: ವ್ಯಕ್ತಿ ಬಂಧನ
 • ಕೋಕೇನ್ ಮಾರಾಟ: ನೈಜೀರಿಯಾ ದೇಶದ ನಾಗರಿಕನ ಬಂಧನ
 • ಇಂದು ಸಂಜೆ ದೆಹಲಿಗೆ, ಖಾತೆ ಹಂಚಿಕೆ ಬಗ್ಗೆ ಅಮಿತ್‍ ಷಾರೊಂದಿಗೆ ಚರ್ಚೆ-ಬಿ ಎಸ್ ಯಡಿಯೂರಪ್ಪ
 • ರಾಜೀವ್ ಗಾಂಧಿ ಹತ್ಯೆ ಪ್ರಕರಣ; ತಪ್ಪಿತಸ್ಥೆ ನಳಿನಿ ಪೆರೋಲ್ ಅವಧಿ ಮೂರು ವಾರ ವಿಸ್ತರಣೆ
 • ಅಕ್ರಮ ಹಣ ವರ್ಗಾವಣೆ ಆರೋಪ : ಇಡಿ ಅಧಿಕಾರಿಗಳ ಮುಂದೆ ರಾಜ್ ಠಾಕ್ರೆ
 • ಮಗಳ ಕೊಲೆ ಆರೋಪಿ ಮಹಿಳೆಯ ಸಾಕ್ಷ್ಯಆಧರಿಸಿ ಚಿದಂಬರಂ ಬಂಧನ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‍ ಟೀಕೆ
 • ಗೋವಾಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ
 • ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳ ಹೆದರಿಸಿ ಓಡಿಸಿದ ದಂಪತಿಗೆ ಪೊಲೀಸ್ ಕಮೀಷನರ್ ಶ್ಲಾಘನೆ
 • ಯುಎಸ್‌ ಓಪನ್‌: ಅಗ್ರ ಸ್ಥಾನ ಅಲಂಕರಿಸಿದ ಜೊಕೊವಿಚ್‌, ಒಸಾಕ
 • ನೇಪಾಳ ಅಧ್ಯಕ್ಷರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಜೈಶಂಕರ್ ಸೌಜನ್ಯದ ಭೇಟಿ
 • ಐಎನ್ಎಕ್ಸ್ ಮಾಧ್ಯಮ ಪ್ರಕರಣ: ಪಿ ಚಿದಂಬರಂ ವಿಚಾರಣೆ, ಇಂದು ಸಿಬಿಐ ನ್ಯಾಯಾಲಯ ಮುಂದೆ ಹಾಜರು
 • ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರುಪಯೋಗ: ಕಾಂಗ್ರೆಸ್ ಆರೋಪ
 • ಬಾರ್ಸಿಲೋನಾದಿಂದ ನೇಯ್ಮಾರ್‌ಗೆ ಎರೆಡನೇ ಬಾರಿ ಅವಕಾಶ ಬಂದಿರಲಿಲ್ಲ: ವರದಿಗಳು
Sports Share

ಹಾಕಿ: ನಾಲ್ಕನೇ ಪಂದ್ಯದಲ್ಲಿ ಭಾರತಕ್ಕೆ ನಿರಾಸೆ

ಪರ್ತ್‌, ಮೇ 15 (ಯುಎನ್‌ಐ) ಭಾರತ ಪುರುಷರ ಹಾಕಿ ತಂಡ ಬುಧವಾರ ಇಲ್ಲಿನ ಪರ್ತ್‌ ಹಾಕಿ ಕ್ರಿಡಾಂಗಣದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ವಿಶ್ವ ನಂ. 2 ಆಸ್ಟ್ರೇಲಿಯಾ ವಿರುದ್ಧ 0-4 ಅಂತರದಲ್ಲಿ ಸೋಲು ಅನುಭವಿಸಿತು ಇದರೊಂದಿಗೆ ಸತತ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ವಿಶ್ವದ ಐದನೇ ಶ್ರೇಯಾಂಕದ ಭಾರತಕ್ಕೆ ಗೆಲುವಿನ ಲಯ ಮುಂದುವರಿಸುವಲ್ಲಿ ವಿಫಲವಾಯಿತು.
ಬ್ಲೇಕ್ ಗೋವರ್ಸ್ (15 ಹಾಗೂ 60ನೇ ನಿಮಿಷ) ಮತ್ತು ಜೆರೆಮಿ ಹೇವರ್ಡ್ (20 ಹಾಗೂ 59ನೇ ನಿಮಿಷ) ಇವರಿಬ್ಬರು ಗಳಿಸಿದ ತಲಾ ಎರಡೆರಡು ಗೋಲುಗಳ ಸಹಾಯದಿಂದ ಆತಿಥೇಯ ಆಸ್ಟ್ರೇಲಿಯಾ ಗೆದ್ದು ಬೀಗಿತು. 15ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಬ್ಲೇಕ್ ಗೋವರ್ಸ್‌ ಆತಿಥೇಯರಿಗೆ 1-0 ಮುನ್ನಡೆ ತಂದುಕೊಟ್ಟರು.
ಭಾರತದ ತಂಡದ ಬಿರೇಂದರ್‌ ಲಕ್ರ ಅವರು 19ನೇ ನಿಮಿಷದಲ್ಲಿ ಹೊಡೆದ ಚೆಂಡು ಗೋಲ್‌ ಪೋಸ್ಟ್‌ನಿಂದ ಕೆಲವೇ ಅಂತರದಲ್ಲಿ ಹೊರಗಡೆ ಸಾಗಿತು. ಜೆರೆಮಿ ಹೇವರ್ಡ್‌ 20ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಎರಡನೇ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾ 2-0 ಮುನ್ನಡೆ ಸಾಧಿಸಿತು.
24ನೇ ನಿಮಿಷದಲ್ಲಿಯೂ ಕೂಡ ಭಾರತಕ್ಕೆ ಗೋಲು ಗಳಿಸಬಹುದಾದ ಅವಕಾಶವಿತ್ತು. ಆದರೆ, ಜೇಕ್‌ ವೆಟ್ಟಾಮ್‌ ಅವರು ಗೋಲು ಪಟ್ಟಿಗೆ ಹೋಗುತ್ತಿದ್ದ ಚೆಂಡನ್ನು ಯಶಸ್ವಿಯಾಗಿ ತಡೆದರು. ಇದರಿಂದಾಗಿ ಪ್ರವಾಸಿ ತಂಡದ ಮೊದಲ ಗೋಲು ತಪ್ಪಿತು.
ಬಳಿಕ ಮೂರನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳಿಂದ ಸಮಬಲದ ಹೋರಾಟ ನಡೆಯಿತು. ಅದರಂತೆ ಗೋಲು ಗಳಿಸಬಹುದಾದ ಹಲವು ಅವಕಾಶಗಳು ಎರಡೂ ತಂಡಗಳಿಗೆ ಸಿಕ್ಕರೂ ಗೋಲು ಪಟ್ಟಿಗೆ ಚೆಂಡನ್ನು ಕಳುಹಿಸುವಲ್ಲಿ ಉಭಯ ತಂಡಗಳು ವಿಫಲವಾದವು.
ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್‌ನಲ್ಲಿ ಭಾರತ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಮೊದಲ ಗೋಲು ಗಳಿಸುವ ಅವಕಾಶವನ್ನು ಪಡೆದರು. ಅದರಂತೆ ಸ್ಟ್ರೈಕರ್‌ ವೃತ್ತದಿಂದ ಚೆಂಡನ್ನು ಗೋಲು ಪಟ್ಟಿಗೆ ಹೊಡೆದರು. ಆದರೆ, ಆಸೀಸ್‌ ಆಟಗಾರ ಜಿಗಿದು ಚೆಂಡನ್ನು ತಡೆದರು.
51ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಆಕಾಶ್‌ದೀಪ್‌ ಸಿಂಗ್‌ ಅವರು ಹೊಡೆದ ಶಾಟ್‌ ಅನ್ನು ಆಸ್ಟ್ರೇಲಿಯಾ ಗೋಲ್‌ ಕೀಪರ್‌ ಯಶಸ್ವಿಯಾಗಿ ತಡೆದರು. ನಂತರದ ನಿಮಿಷದಲ್ಲಿ ಭಾರತಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್‌ ಲಭಿಸಿದರೂ ಗೋಲು ಗಳಿಸಲು ಸಾಧ್ಯವಾಗುವುದಿಲ್ಲ.
ಕೊನೆಯ ಕ್ಷಣದವರೆಗೂ ಭಾರತ ತಂಡದ ಆಟಗಾರರು ಗೋಲು ಗಳಿಸಲು ಸಾಕಷ್ಟು ಪ್ರಯತ್ನ ನಡೆಸಿದರು. ಕೊನೆಯ ಗಳಿಗೆಯಲ್ಲಿ ನಿಯಮಿತ ಗೋಲ್ ಕೀಪರ್ ಬದಲಿಗೆ ಮೈದಾನದಲ್ಲಿದ್ದ ಆಟಗಾರನಿಗೆ ಗೋಲ್‌ ಕೀಪರ್‌ಗೆ ಅವಕಾಶ ನೀಡಲಾಗುತ್ತದೆ. ಆದರೂ ಭಾರತ ಗೋಲಿನ ಖಾತೆ ತೆರೆಯುವಲ್ಲಿ ವಿಫಲವಾಯಿತು.
ಆದರೆ, ಉತ್ತಮ ಪ್ರದರ್ಶನ ಮುಂದುವರಿಸಿದ ಎದುರಾಳಿ ಆಸ್ಟ್ರೇಲಿಯಾ, ಪಂದ್ಯದ ಕೊನೆಯ ಎರಡು ನಿಮಿಷದಲ್ಲಿ ಎರಡು ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. 59ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಜೆರೆಮಿ ಹೇವರ್ಡ್‌ ಅವರು ತಂಡಕ್ಕೆ ಮೂರನೇ ಗೋಲು ತಂದು ಕೊಟ್ಟರು.
ಇದರ ಬೆನ್ನಲ್ಲೆ ಬ್ಲೇಕ್‌ ಗೋವರ್ಸ್ 60ನೇ ನಿಮಿಷದಲ್ಲಿ ರಿವರ್ಸ್ ಸ್ಟಿಕ್‌ನಿಂದ ತಮ್ಮ ಎರಡನೇ ಗೋಲು ಪೂರೈಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 4-0 ಅಂತರದಲ್ಲಿ ಗೆದ್ದು ಬೀಗಿತು. ಉಭಯ ತಂಡಗಳ ಐದನೇ ಪಂದ್ಯ ಮುಂದಿನ ಶುಕ್ರವಾರ ನಡೆಯಲಿದೆ.
ಯುಎನ್ಐ ಆರ್‌ಕೆ ಕೆವಿಆರ್ 2017