Monday, Aug 2 2021 | Time 15:37 Hrs(IST)
  • ಸಂಪುಟ : ಮೊದಲ ಹಂತದಲ್ಲಿ 15 ಸಚಿವರ ಪ್ರಮಾಣ ವಚನ ಸಂಭವ
  • ಕೊರೋನ ಅನಾಹುತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ : ಸಿದ್ದರಾಮಯ್ಯ
  • ಮೇಲ್ಮನೆ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪರ ಮಠಾಧೀಶರು ವಕಾಲತ್ತು
  • ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು
  • ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು
  • ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
business economy Share

ಹೆಚ್ಚಿನ ಗ್ಲಾಮರ್ ಕೋಶಂಟ್‍ ಹೊಂದಿರುವ ಗ್ಲಾಮರ್ ‘ಎಕ್ಸ್‌ಟಿಇಸಿ’ ಮೋಟಾರುಸೈಕಲ್ ಮಾರುಕಟ್ಟೆ ಪರಿಚಯ

ಬೆಂಗಳೂರು, ಜು 21 (ಯುಎನ್ಐ) ಹೀರೋ ಮೋಟೋಕಾರ್ಪ್, ತನ್ನ ಸುಪ್ರಸಿದ್ಧ ಮೋಟಾರು ಸೈಕಲ್’ ಜುಲೈ -ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 'ಗ್ಲಾಮರ್’ನ ‘ಎಕ್ಸ್‌ಟಿಇಸಿ’ ಅವತಾರವನ್ನು ಪರಿಚಯಿಸಿದೆ.
ಯುವಜನತೆಯ ಬದಲಾಗುತ್ತಿರುವ ಅಭಿರುಚಿ ಹಾಗು ಇಚ್ಛೆಗಳನ್ನು ಪ್ರತಿನಿಧಿಸುವ ಗ್ಲಾಮರ್ ‘ಎಕ್ಸ್‌ಟಿಇಸಿ’, ಸ್ಟೈಲ್, ಸುರಕ್ಷತೆ ಹಾಗು ಸಂಪರ್ಕತೆಯ ಸಂಯೋಜನೆಯಾಗಿದೆ. ಸೈಡ್ ಸ್ಟ್ಯಾಂಡ್ ಇಂಜಿನ್ ಕಟ್-ಆಫ್, ಬ್ಯಾಂಕ್ ಆ್ಯಂಗಲ್ ಸೆನ್ಸಾರ್, ಹಾಗು ಎಲ್‍ಇಡಿ ಹೆಡ್‍ಲ್ಯಾಂಪ್‍ನ ಜೊತೆಗೆ, ವರ್ಗದಲ್ಲೇ ಮೊಟ್ಟಮೊದಲನೆಯದಾದ ಬ್ಲೂಟೂತ್ ಸಂಪರ್ಕತೆ, ತಿರುವಿನಿಂದ ತಿರುವಿಗೆ ಚಲನೆ, ಸಂಯೋಜಿತ ಯುಎಸ್‍ಬಿ ಚಾರ್ಜರ್ ಮುಂತಾದುವುಗಳು ಇದರ ಪ್ರಮುಖ ಫೀಚರ್‌ಗಳಾಗಿವೆ.
ಈ ಗ್ಲಾಮರ್ ಬೈಕ್ 78,900 ರೂ. ಹಾಗೂ 83,500 ರೂ. ಶೋರೂಂ ಬೆಲೆಯಲ್ಲಿ ಲಭ್ಯವಿದೆ.
ಹೀರೋ ಮೋಟೋಕಾರ್ಪ್‍ನ ಯೋಜನಾ ವಿಭಾಗ ಮತ್ತು ಜಾಗತಿಕ ಉತ್ಪನ್ನ ಯೋಜನೆ ವಿಭಾಗದ ಮುಖ್ಯಸ್ಥ ಮಾಲೋ ಲೆ ಮ್ಯಾಸ್ಸನ್, “ಹೊಸ ಗ್ಲಾಮರ್ ಬೈಕ್ ಯುವಕರಿಗೆ ಮೆಚ್ಚುಗೆಯಾಗುವಂತಹ ಅಂಶಗಳ ಸೂಕ್ತ ಸಂಯೋಜನೆಯನ್ನು ಅದು ಹೊಂದಿದೆ ಎಂದಿದ್ದಾರೆ.
ಹೀರೋ ಮೋಟೋಕಾರ್ಪ್‍ನ ಮಾರಾಟ ಹಾಗು ಮಾರಾಟನಂತರ ವಿಭಾಗದ ಮುಖ್ಯಸ್ಥ ನವೀನ್ ಚೌಹಾನ್ 2005ರಲ್ಲಿ ಆರಂಭವಾದಾಗಿನಿಂದಲೂ ಗ್ಲಾಮರ್ ಒಂದು ಟ್ರೆಂಡ್-ಸೆಟ್ಟರ್ ಆಗಿದೆ. ಅದರ ‘‘ಎಕ್ಸ್‌ಟಿಇಸಿ’ ಅವತಾರದಲ್ಲಿ ಕೂಡ, ಗ್ಲಾಮರ್, 125ಸಿಸಿ ವರ್ಗವನ್ನು ಮರುವಿವರಿಸುವಂತಹ ಅನೇಕ ಹೊಸ ಅಂಶಗಳೊಂದಿಗೆ ಬ್ರ್ಯಾಂಡ್ ಇತಿಹಾಸ ಸೃಷ್ಟಿಸಿದೆ ಎಂದಿದ್ದಾರೆ.
ಗ್ಲಾಮರ್ ‘‘ಎಕ್ಸ್‌ಟಿಇಸಿ’, ತನ್ನ ವರ್ಗದಲ್ಲೇ ಮೊಟ್ಟಮೊದಲನೆಯದಾದ ‘ಸಂಯೋಜಿತ ಯುಎಸ್‍ಬಿ ಚಾರ್ಜಿಂಗ್’, ಕರೆ ಮತ್ತು ಎಸ್‍ಎಮ್‍ಎಸ್ ಎಚ್ಚರಿಕೆಯಿರುವ ಬ್ಲೂಟೂತ್ ಸಂಪರ್ಕತೆ, ಮತ್ತು ಗೂಗಲ್ ಮ್ಯಾಪ್ ಸಂಪರ್ಕತೆಯೊಂದಿಗೆ ತಿರುವಿನಿಂದ ತಿರುವಿನ ಚಲನೆಯನ್ನು ಒದಗಿಸುತ್ತದೆ. ಉನ್ನತ ಮಟ್ಟದ ಕ್ಲಸ್ಟರ್ ಅಂಶಗಳು, ಗೇರ್ ಪೊಸಿಶನ್ ಇಂಡಿಕೇಟರ್, ಎಕೋ ಮೋಡ್, ಟ್ಯಾಕೋಮೀಟರ್, ಮತ್ತು ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್ ಮುಂತಾದವನ್ನು ಒಳಗೊಂಡಿದೆ
ಯುಎನ್ಐ ಎಸ್ಎಚ್ 1757
More News
ಸಚಿವ ಸಂಪುಟ ರಚನೆ ಸುಗಮವಾಗಿ ನಡೆಯಲಿದೆ: ಬಸವರಾಜ ಬೊಮ್ಮಾಯಿ

ಸಚಿವ ಸಂಪುಟ ರಚನೆ ಸುಗಮವಾಗಿ ನಡೆಯಲಿದೆ: ಬಸವರಾಜ ಬೊಮ್ಮಾಯಿ

30 Jul 2021 | 3:49 PM

ನವದೆಹಲಿ, ಜು.30(ಯುಎನ್‌ಐ) ಸಚಿವ ಸಂಪುಟ ರಚನೆ ಸುಗಮವಾಗಿ ನಡೆಯಲಿದೆ ಎಂದು ಸಿಎಂ ಬಸವರಾಜಬೊಮ್ಮಾಯಿ ಹೇಳಿದ್ದಾರೆ.

 Sharesee more..