Sunday, Nov 17 2019 | Time 15:45 Hrs(IST)
 • ಬಾಳಾ ಠಾಕ್ರೆ ಏಳನೇ ಪುಣ್ಯ ತಿಥಿ; ಮಹಾರಾಷ್ಟ್ರದಲ್ಲಿ ಮುಖಂಡರ ಪಕ್ಷಾತೀತ ನಮನ
 • ಸಂಸತ್‍ ಚಳಿಗಾಲದ ಅಧಿವೇಶನ: ಸರ್ಕಾರ ಕರೆದಿದ್ದ ಸರ್ವಪಕ್ಷಗಳ ಸಭೆ ಅಂತ್ಯ
 • 105 ದಿನಗಳ ಬಳಿಕ ಶ್ರೀನಗರ-ಬನಿಹಾಲ್ ರೈಲು ಸೇವೆ ಪುನಾರಂಭ
 • ಕಾಶ್ಮೀರದಲ್ಲಿ ಹೆಚ್ಚಿನ ಅಂಗಡಿಗಳು ಪುನರಾರಂಭ: ಸಾಮಾನ್ಯ ಸ್ಥಿತಿಯತ್ತ ಜನ-ಜೀವನ
 • ಮೀಸಲಾತಿಗೆ ಶತಶತಮಾನಗಳ ಇತಿಹಾಸವಿದೆ: ನಾಡೋಜ ಬರಗೂರು ರಾಮಚಂದ್ರಪ್ಪ
 • ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ; ಜಯಗಳಿಸಿರುವ ಗೋಟ ಬಯಾ ರಾಜಪಕ್ಸೆ ಗೆ ಪ್ರಧಾನಿ ಮೋದಿ ಅಭಿನಂದನೆ
 • ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ಬೆಲೆ ಹೆಚ್ಚಿಸುವುದಿಲ್ಲ ಟಿಟಿಡಿ ಅಧ್ಯಕ್ಷರ ಸ್ಪಷ್ಟನೆ
 • ಮೂವರು ಅಂತಾರಾಜ್ಯ ಮಾದಕ ವಸ್ತು ಮಾರಾಟಗಾರರ ಬಂಧನ
 • ಪೂಂಚ್‌ನಲ್ಲಿನ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ
 • ಅಧ್ಯಕ್ಷೀಯ ಚುನಾವಣೆ: ಶ್ರೀಲಂಕಾ ರಕ್ಷಣಾ ಸಚಿವ ಗೋಟಬಯಾ ರಾಜಪಕ್ಸೆಗೆ ಜಯ
 • ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಜಮೀನು ನೀಡಲು ಮುಂದಾದ ಹಿಂದೂ ಕುಟುಂಬಗಳು
 • ಶಿಕಾರಿಪುರದಲ್ಲಿ 15, 17 ನೇ ಶತಮಾನದ ಎರಡು ಶಿಲಾಶಾಸನಗಳು ಪತ್ತೆ
 • ಡಿಸೆಂಬರ್ ಎರಡನೇ ವಾರ ರಾಜ್ಯ ರಾಜಕಾರಣದಲ್ಲಿ ಮಹತ್ವ ಬದಲಾವಣೆ; ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭವಿಷ್ಯ
 • ಶಿವಮೊಗ್ಗದಲ್ಲಿ ಎರಡು ಶಿಲಾಶಾಸನ ಪತ್ತೆ
 • ಪವನ್ ದೇಶ್‍ಪಾಂಡೆ ಸ್ಫೋಟಕ ಅರ್ಧ ಶತಕ: ಗೋವಾಗೆ 173 ರನ್ ಗುರಿ ನೀಡಿದ ಕರ್ನಾಟಕ
Entertainment Share

ಹ್ಯಾಟ್ರಿಕ್ ಹೀರೋ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿ: ಲಂಡನ್​ನಲ್ಲಿ ವಿಶ್ರಾಂತಿ: ನಾಳೆ ಅಭಿಮಾನಿಗಳೊಂದಿಗೆ ಜನ್ಮದಿನಾಚರಣೆಗೆ ಅಲಭ್ಯ

ಬೆಂಗಳೂರು, ಜುಲೈ 11 (ಯುಎನ್ಐ) ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳ ಹಾರೈಕೆ ಫಲಿಸಿದ್ದು, ಲಂಡನ್ ನಲ್ಲಿ ಅವರ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಶುಕ್ರವಾರ ಜುಲೈ 12ರಂದು ಅವರ ಜನ್ಮದಿನಕ್ಕೂ ಮೊದಲೇ ಬಂದಿರುವ ಈ ಸಿಹಿ ಸುದ್ದಿ ಅಭಿಮಾನಿಗಳಿಗೆ ನೆಮ್ಮದಿ ತಂದಿದೆ ಆದರೆ ಬರ್ತ್ ಡೇ ಗೆ ಲಭ್ಯವಿರುವುದಿಲ್ಲ ಎಂಬ ನೋವು ಕಾಡುತ್ತಿದೆ

ಕಳೆದ ಆರು ತಿಂಗಳಿನಿಂದ ಭುಜದ ನೋವಿನಿಂದ ಬಳಲುತ್ತಿದ್ದ ಶಿವಣ್ಣ ಕೆಲ ದಿನಗಳ ಹಿಂದೆಯಷ್ಟೇ, ಶಸ್ತ್ರ ಚಿಕಿತ್ಸೆಗಾಗಿ ಲಂಡನ್​ಗೆ ತೆರಳಿದ್ದರು. ಬುಧವಾರ ಶಿವಣ್ಣನವರಿಗೆ ಶಸ್ತ್ರ ಚಿಕಿತ್ಸೆ ನಡೆದು ಆಫರೇಶನ್​ ಯಶಸ್ವಿಯಾಗಿದ್ದು, ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆಯಂತೆ

ಶಿವಣ್ಣ ಆರೋಗ್ಯವಾಗಿದ್ದಾರೆ, ವೈದ್ಯರು ಒಂದು ತಿಂಗಳು ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ಶಿವಣ್ಣ ಆಪ್ತ ಹಾಗೂ ನಿರ್ಮಾಪಕ ಕೆ.ಪಿ.ಶ್ರೀಕಾಂತ್​ ಟ್ವಿಟರ್​ ಖಾತೆಯ ಮೂಲಕ ಸ್ಪಷ್ಟ ಪಡಿಸಿದ್ದಾರೆ.

ಶಿವರಾಜ್ ಕುಮಾರ್ ಜೊತೆಗೆ ಪತ್ನಿ ಗೀತಾ ಶಿವರಾಜಕುಮಾರ್ ಹಾಗೂ ಪುತ್ರಿ ನಿವೇದಿತಾ ಕೂಡ ಲಂಡನ್​ಗೆ ತೆರಳಿದ್ದಾರೆ ಪುನೀತ್ ರಾಜಕುಮಾರ್ ಕೂಡ ಅಣ್ಣನ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ.

ಕಳೆದ 6 ತಿಂಗಳ ಹಿಂದೆ ಪ್ರವಾಸಕ್ಕೆ ತೆರಳಿದ್ದ ವೇಳೆ ಹಿಮದಲ್ಲಿ ಜಾರಿ ಬಿದ್ದು ಶಿವಣ್ಣ ಗಾಯಗೊಂಡಿದ್ದು, ಆ ವೇಳೆ ಅವರಿಗೆ ಭುಜದ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಶೂಟಿಂಗ್​ ಮುಗಿಸಿದ ಶಿವಣ್ಣ ಹುಟ್ಟುಹಬ್ಬ ಆಚರಣೆಯನ್ನು ಕೈಬಿಟ್ಟು ಆಪರೇಶನ್​ಗಾಗಿ ಲಂಡನ್​ಗೆ ತೆರಳಿದ್ದರು.

ಇನ್ನು ಶಿವರಾಜ್ ಕುಮಾರ್ ಅವರು ಶಸ್ತ್ರಚಿಕಿತ್ಸೆಗೆ ತೆರಳುವ ಮುನ್ನ ಬಾಲಿವುಡ್ ನಟ ಅರ್ಬಾಜ್ ಖಾನ್ ಅವರನ್ನು ಭೇಟಿ ಮಾಡಿದ್ದರು ಎಂದು ತಿಳಿದುಬಂದಿದೆ.
ಯುಎನ್ಐ ಎಸ್ಎ ಎಸ್ಎಚ್ 1747
More News
ಗಾಂಧೀಜಿ ಮಕ್ಕಳಲ್ಲಿ ಇನ್ನೂ ಜೀವಂತ: ದೊರಂಗೌ

ಗಾಂಧೀಜಿ ಮಕ್ಕಳಲ್ಲಿ ಇನ್ನೂ ಜೀವಂತ: ದೊರಂಗೌ

16 Nov 2019 | 8:59 PM

ಬೆಂಗಳೂರು, ನ ೧೬ (ಯುಎನ್‌ಐ) ದೇಶದ ಒಳಿತಿಗಾಗಿ ಮಹಾತ್ಮ ಗಾಂಧಿಯವರು ನೀಡಿದ ಆದರ್ಶ ಅನನ್ಯ ಭೌತಿಕವಾಗಿ ಅವರು ಬದುಕಿಲ್ಲವಾದರೂ, ಮಕ್ಕಳಲ್ಲಿ ಜೀವಂತವಾಗಿದ್ದಾರೆ ಎಂದು ಖ್ಯಾತ ಸಾಹಿತಿ, ಪದ್ಮಶ್ರೀ ಪುರಸ್ಕೃತ ದೊಡ್ಡರಂಗೇಗೌಡ ಹೇಳಿದ್ದಾರೆ

 Sharesee more..
ರವಿಚಂದ್ರನ್ ಪುತ್ರ ಮನೋರಂಜನ್ ಇನ್ನು 'ಮನುರಂಜನ್ ರವಿಚಂದ್ರನ್’

ರವಿಚಂದ್ರನ್ ಪುತ್ರ ಮನೋರಂಜನ್ ಇನ್ನು 'ಮನುರಂಜನ್ ರವಿಚಂದ್ರನ್’

16 Nov 2019 | 7:28 PM

ಬೆಂಗಳೂರು, ನ ೧೬ (ಯುಎನ್‌ಐ) ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಹೆಸರು ’ಮನುರಂಜನ್ ರವಿಚಂದ್ರನ್’ ಆಗಿ ಬದಲಾಗಿದ್ದು, `ಮುಗಿಲ್‌ಪೇಟೆ’ ಚಿತ್ರದಲ್ಲಿ ಮಾಸ್ ಕ್ಲಾಸ್ ಹೀರೋ ಆಗಿ ಕಾಣಿಸಿಕೊಳ್ಳಲು ಬೇಕಾದ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ

 Sharesee more..
200 ಕೋಟಿ ರೂ ಕ್ಲಬ್ ಸೇರಿದ ಹೌಸ್ ಫುಲ್-4

200 ಕೋಟಿ ರೂ ಕ್ಲಬ್ ಸೇರಿದ ಹೌಸ್ ಫುಲ್-4

15 Nov 2019 | 9:21 PM

ಮುಂಬೈ, ನ 15 (ಯುಎನ್ಐ) ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಚಿತ್ರ ಹೌಸ್ ಫುಲ್ -4 ಯಶಸ್ವಿ ಪ್ರದರ್ಶನ ಕಂಡು ಎರಡೇ ವಾರಕ್ಕೆ 200 ಕೋಟಿ ರೂ.ಗಳಿಕೆಯ ಕ್ಲಬ್ ಗೆ ಸೇರ್ಪಡೆಯಾಗಿದೆ.

 Sharesee more..

'ಗಡಿನಾಡು’ ಧ್ವನಿಸಾಂದ್ರಿಕೆ ಬಿಡುಗಡೆ

15 Nov 2019 | 8:39 PM

 Sharesee more..