Sunday, Aug 25 2019 | Time 01:26 Hrs(IST)
Entertainment Share

ಹಿರಿಯ ಬೆಂಗಾಳಿ ನಟ ಸ್ವರೂಪ ದತ್ತ ನಿಧನ

ಕೋಲ್ಕತಾ, ಜುಲೈ 17 (ಯುಎನ್‌ಐ) ಹಿರಿಯ ಬೆಂಗಾಳಿ ನಟ ಸ್ವರೂಪ ದತ್ತಾ ಬುಧವಾರ ಬೆಳಗ್ಗೆ ನಿಧನರಾದರು; ಅವರಿಗೆ 78 ವರ್ಷ ವಯಸ್ಸಾಗಿತ್ತು.
ಸ್ನಾನದ ಕೋಣೆಯಲ್ಲಿ ಅಸ್ವಸ್ಥರಾಗಿ ಬಿದ್ದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಮೆದುಳು ಪಾರ್ಶ್ವವಾಯುವಾಗಿದ್ದು ಅವರ ಸ್ಥಿತಿ ಗಂಭೀರವಾಗಿತ್ತು. ಅವರು ದೀರ್ಘಾವಧಿ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಾಳಿ ಸಿನಿಮಾ ನಟ ಸ್ವರೂಪ ದತ್ತಾ 1941 ರ ಜೂನ್ 22 ರಂದು ಜನಿಸಿದ್ದರು. ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ತಪನ್ ಸಿನ್ಹಾ ಅವರ ಅಪಂಜನ್ ಚಿತ್ರ ದತ್ತಾ ಅವರಿಗೆ ಪ್ರಮುಖ ತಿರುವು ಕೊಟ್ಟಿತ್ತು. ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಅವರು ಪಿತಾ ಪುತ್ರ, ಸಾಗಿನಾ ಮಹತೋ, ಉಪಹಾರ್ ಮೊದಲಾದ ಚಿತ್ರಗಳಲ್ಲಿ ಅವರು ಮನೋಜ್ಞ ಅಭಿನಯ ನೀಡಿದ್ದಾರೆ.

ಯುಎನ್ಐ ಜಿಎಸ್ಆರ್ ಆರ್ ಕೆ 1230
More News
ವಿಜ್ಞಾನಿಯಾಗಿದ್ದ ವಿದ್ಯಾ ಈಗ ಗಣಿತಶಾಸ್ತ್ರಜ್ಞೆ !

ವಿಜ್ಞಾನಿಯಾಗಿದ್ದ ವಿದ್ಯಾ ಈಗ ಗಣಿತಶಾಸ್ತ್ರಜ್ಞೆ !

24 Aug 2019 | 2:11 PM

ಮುಂಬೈ 24 ಆಗಸ್ಟ್ (ಯುಎನ್ಐ) ವಿಭಿನ್ನ ಕಥೆಗಳುಳ್ಳ ಮಹಿಳಾ ಪ್ರದಾನ ಚಿತ್ರಗಳಲ್ಲಿ ನಟಿಸಿ ತಮ್ಮದೇ ಛಾಪನ್ನು ಮೂಡಿಸಿದ ಬಾಲಿವುಡ್ ನಟಿ ವಿದ್ಯಾ ಬಾಲನ್ ಈಗ ಮಾನವ ಕಂಪ್ಯೂಟರ್ ಎಂಬ ಖ್ಯಾತಿಯ ಗಣಿತಶಾಸ್ತ್ರಜ್ಞೆ ಶಕುಂತಲಾ ದೇವಿ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ.

 Sharesee more..

ದಕ್ಷಿಣ ಕೊರಿಯಾದಲ್ಲಿ 'ಅಂದಾಧುನ್'

24 Aug 2019 | 1:28 PM

 Sharesee more..