Wednesday, Dec 2 2020 | Time 07:53 Hrs(IST)
Entertainment Share

ಹಾಸ್ಯ ನಟಿ ಭಾರತಿ ಸಿಂಗ್ ಮುಂಬೈ ಮನೆಯ ಮೇಲೆ ಎನ್ ಸಿ ಬಿ ದಾಳಿ

ಹಾಸ್ಯ ನಟಿ ಭಾರತಿ ಸಿಂಗ್ ಮುಂಬೈ  ಮನೆಯ ಮೇಲೆ ಎನ್ ಸಿ ಬಿ ದಾಳಿ
ಹಾಸ್ಯ ನಟಿ ಭಾರತಿ ಸಿಂಗ್ ಮುಂಬೈ ಮನೆಯ ಮೇಲೆ ಎನ್ ಸಿ ಬಿ ದಾಳಿ

ಮುಂಬೈ, ನ 21(ಯುಎನ್ಐ) ಹಾಸ್ಯನಟಿ ಭಾರತಿ ಸಿಂಗ್ ಅವರ ನಿವಾಸದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಶನಿವಾರ ದಾಳಿ ಮಾಡಿ ಶೋಧನೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿಮಾಡಿವೆ.

ನಟಿ ಭಾರತಿ ಹಾಗೂ ಅವರ ಪತಿ ಮಾದಕ ಪದಾರ್ಥ ಸೇವಿಸುತ್ತಾರೆ ಎಂಬ ನಿಖರ ಮಾಹಿತಿ ದೊರೆತಿದೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.

ಮಾದಕ ಪದಾರ್ಥಗಳಿಗೆ ಸಂಬಂಧಿಸಿದಂತೆ ಎನ್ ಸಿಬಿ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಪ್ರಸಿದ್ದ ವ್ಯಕ್ತಿಗಳ ಮನೆಗಳಲ್ಲಿ ಸರಣಿ ಶೋಧ ನಡೆಸುತ್ತಿದೆ. ಈ ತಿಂಗಳ ಆರಂಭದಲ್ಲಿ ಎನ್‌ ಸಿ ಬಿ ನಟ ಅರ್ಜುನ್ ರಾಂಪಾಲ್ , ನಿರ್ಮಾಪಕ ಫಿರೋಜ್ ನಾಡಿಯಾವಾಲಾ ಅವರ ಮನೆಗಳ ಮೇಲೆ ದಾಳಿ ನಡೆಸಿತ್ತು. ಜಾರಿ ನಿರ್ದೇಶನಾಲಯ (ಇಡಿ) ನೀಡಿದ ಮಾಹಿತಿಯಂತೆ ಡ್ರಗ್ಸ್ ಬಳಸುತ್ತಿರುವ ಬಾಲಿವುಡ್ ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ಎನ್ ಸಿಬಿ ದಾಳಿ ನಡೆಸುತ್ತಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ನಂತರ ಬಾಲಿವುಡ್‌ನಲ್ಲಿ ಡ್ರಗ್ ಮಾಫಿಯಾ ಹಗರಣ ಸ್ಫೋಟಗೊಂಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಅವರನ್ನು ಸೆಪ್ಟೆಂಬರ್ 9 ರಂದು ಎನ್‌ಸಿಬಿ ಬಂಧಿಸಿತ್ತು.

ಯುಎನ್ಐ ಕೆವಿಆರ್ 1249

More News
‘ಚಿತ್ರಲೋಕ’ ಗೆ ಯೂಟ್ಯೂಬ್ ಸಿಲ್ವರ್ ಕ್ರಿಯೇಟರ್ ಪ್ರಶಸ್ತಿ

‘ಚಿತ್ರಲೋಕ’ ಗೆ ಯೂಟ್ಯೂಬ್ ಸಿಲ್ವರ್ ಕ್ರಿಯೇಟರ್ ಪ್ರಶಸ್ತಿ

01 Dec 2020 | 9:03 PM

ಬೆಂಗಳೂರು, ಡಿ 01 (ಯುಎನ್‍ಐ) ಕನ್ನಡ ಚಿತ್ರರಂಗದ ಮೊದಲ ಪೋರ್ಟಲ್ ಎನಿಸಿರುವ ಪಾತ್ರವಾಗಿರುವ ಚಿತ್ರಲೋಕ ಡಾಟ್‍ಕಾಮ್, ಇನ್ನೊಂದು ಹೊಸ ಮೈಲಿಗಲ್ಲು ಸಾಧಿಸಿದೆ.

 Sharesee more..
ಸಿನಿಮಾ ನೋಡಿ ಡಾಟ್ ಇನ್ ಡೌನ್ ಲೋಡ್ ಮಾಡಿ, ನಿಮ್ಮಿಚ್ಛೆಯ ಚಿತ್ರ ವೀಕ್ಷಿಸಿ

ಸಿನಿಮಾ ನೋಡಿ ಡಾಟ್ ಇನ್ ಡೌನ್ ಲೋಡ್ ಮಾಡಿ, ನಿಮ್ಮಿಚ್ಛೆಯ ಚಿತ್ರ ವೀಕ್ಷಿಸಿ

01 Dec 2020 | 8:59 PM

ಬೆಂಗಳೂರು, ಡಿ 01 (ಯುಎನ್‍ಐ) ಕೊರೋನಾ ಬಂದಾಗಿನಿಂದ ಜನರು ಚಿತ್ರಮಂದಿರಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

 Sharesee more..

ಕ್ರಿಸ್ಮಸ್ ಗೆ ಬರ್ತಾಳೆ ‘ಶಕೀಲಾ’

01 Dec 2020 | 3:54 PM

 Sharesee more..
ರಾಜಕೀಯ ಪ್ರವೇಶದ ಬಗ್ಗೆ ಶೀಘ್ರವೇ ನಿರ್ಧಾರ: ರಜನೀಕಾಂತ್

ರಾಜಕೀಯ ಪ್ರವೇಶದ ಬಗ್ಗೆ ಶೀಘ್ರವೇ ನಿರ್ಧಾರ: ರಜನೀಕಾಂತ್

30 Nov 2020 | 8:45 PM

ಚೆನ್ನೈ, ನ 30 (ಯುಎನ್ಐ) ರಜನೀಕಾಂತ್ ಅವರ ರಾಜಕೀಯ ಪ್ರವೇಶದ ಕುರಿತು ಕೆಲ ವರ್ಷಗಳಿಂದ ಕೇಳಿಬರುತ್ತಿರುವ ಚರ್ಚೆಗೆ ಸದ್ಯದಲ್ಲೇ ತೆರೆ ಬೀಳಲಿದೆ.

 Sharesee more..