Monday, Sep 23 2019 | Time 02:55 Hrs(IST)
  • ಇಂಡೋ-ಆಫ್ರಿಕಾ ಚುಟುಕು ಸರಣಿ ಸಮಬಲ
International Share

ಹೊಸ ಸಚಿವರ ಪಟ್ಟಿ ಘೋಷಿಸಿದ ಜಪಾನ್ ಮುಖ್ಯ ಸಂಪುಟ ಕಾರ್ಯದರ್ಶಿ

ಟೋಕಿಯೋ, ಸೆ 11 (ಸ್ಫುಟ್ನಿಕ್‌) ಜಪಾನ್ ಸರ್ಕಾರದ ಹೊಸ ಸಂಪುಟವನ್ನು ಮುಖ್ಯ ಸಂಪುಟ ಕಾರ್ಯದರ್ಶಿ ಯೋಶಿಹಿದೆ ಸುಗಾ ಬುಧವಾರ ಘೋಷಿಸಿದ್ದಾರೆ.
ಆಡಳಿತಾರೂಢ ಲಿಬರಲ್ ಡೆಮಾಕ್ರೆಟಿಕ್ ನಾಯಕತ್ವಕ್ಕೆ ಪುನಶ್ಚೇತನ ನೀಡಲು ಸಂಪುಟ ಪುನಾರಚನೆ ಪ್ರಕ್ರಿಯೆಯನ್ನು ಜಪಾನ್ ಪ್ರಧಾನಿ ಶಿಂಜೋ ಅಬೆ ಆರಂಭಿಸಿದರು.
ಜಪಾನ್ ನ ಮಾಜಿ ಪ್ರಧಾನಿ ಜುನಿಚಿರೋ ಕೊಯ್‌ಜುಮಿ ಅವರ ಪುತ್ರ ಶಿಂಜಿರೋ ಕೊಯ್‌ಜುಮಿ (38) ಸಂಪುಟಕ್ಕೆ ಸೇರ್ಪಡೆಯಾಗಿದ್ದು ದೇಶದ ಇತಿಹಾಸದಲ್ಲಿನ ರಾಜಕೀಯ ಸೇರಿದ ಅತಿ ಕಿರಿಯ ರಾಜಕಾರಣಿ ಎನಿಸಿದ್ದಾರೆ.
ವಿದೇಶಾಂಗ ಸಚಿವ ತಾರೋ ಕೊನೊ ಅವರಿಗೆ ರಕ್ಷಣಾ ಸಚಿವ ಸ್ಥಾನ ನೀಡಲಾಗಿದೆ.

ಯುಎನ್ಐ ಜಿಎಸ್ಆರ್ 1134