Monday, Oct 26 2020 | Time 03:27 Hrs(IST)
business economy Share

‘ಆತ್ಮನಿರ್ಭರ್’ ಭಾರತ್’ ಕಡೆಗೆ ಬೆಮೆಲ್ ಹೆಜ್ಜೆ-‘ಎಕ್ವಿಪ್ ಮೆಂಟ್ ಇಂಡಿಯಾ’ ಪ್ರಶಸ್ತಿ ಗರಿ

‘ಆತ್ಮನಿರ್ಭರ್’ ಭಾರತ್’ ಕಡೆಗೆ ಬೆಮೆಲ್ ಹೆಜ್ಜೆ-‘ಎಕ್ವಿಪ್ ಮೆಂಟ್ ಇಂಡಿಯಾ’ ಪ್ರಶಸ್ತಿ ಗರಿ
‘ಆತ್ಮನಿರ್ಭರ್’ ಭಾರತ್’ ಕಡೆಗೆ ಬೆಮೆಲ್ ಹೆಜ್ಜೆ-‘ಎಕ್ವಿಪ್ ಮೆಂಟ್ ಇಂಡಿಯಾ’ ಪ್ರಶಸ್ತಿ ಗರಿ

ಬೆಂಗಳೂರು, ಅ 16(ಯುಎನ್ಐ)- ರಕ್ಷಣಾ ವಲಯದ ಷೆಡ್ಯೂಲ್ಡ್ ‘ಎ’ಕಂಪೆನಿಯಾದ ಬಿಇಎಂಎಲ್(ಬೆಮೆಲ್) ಲಿಮಿಟೆಡ್, ಕ್ರಾವ್ಲರ್ ಡೋಜರ್ ಗಳು ಮತ್ತು ರಿಜಿಡ್ ಡಂಪ್ ಟ್ರಕ್ ಗಳ ಮಾರಾಟದಲ್ಲಿನ ಸಾಧನೆಗಾಗಿ ಎಂಟನೇ ವಾರ್ಷಿಕ ‘ಎಕ್ವಿಪ್ ಮೆಂಟ್ ಇಂಡಿಯಾ-2020’ ಪ್ರಶಸ್ತಿಯನ್ನು ಪಡೆದಿದೆ.ಗುರುವಾರ ವರ್ಚ್ಯುಯಲ್ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸಂಸ್ಥೆಗೆ ಪ್ರದಾನ ಮಾಡಲಾಗಿದೆ.ವಿವಿಧ ನಿರ್ಮಾಣ ಸಲಕರಣೆಗಳ ವಿಭಾಗಗಳಲ್ಲಿ ಹೆಚ್ಚು ಮಾರಾಟವಾದ ಕಂಪನಿಗಳನ್ನು ಗುರುತಿಸಿ ಎಕ್ವಿಪ್ ಮೆಂಟ್ ಇಂಡಿಯಾ ಪ್ರಶಸ್ತಿಗಳನ್ನು ನೀಡಲಾಯಿತು. ನಿರ್ಮಾಣ ಸಲಕರಣೆ ಉದ್ಯಮದ ವೃತ್ತಿಪರರನ್ನು ಒಳಗೊಂಡ ಖ್ಯಾತ ತೀರ್ಪುಗಾರರ ಸಮಿತಿಯು ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಶುಕ್ರವಾರ ಬೆಮೆಲ್ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.ಈ ಪ್ರಶಸ್ತಿ ‘ಆತ್ಮನಿರ್ಭರ್ ಭಾರತ್‌’ಗೆ ಬಿಇಎಂಎಲ್ ನೀಡುತ್ತಿರು ಅಮೂಲ್ಯ ಕೊಡುಗೆಗೆ ಗೌರವ ಸೂಚಕವಾಗಿದೆ ಎಂದು ಬಿಇಎಂಎಲ್ ಸಿಎಂಡಿ ಡಾ.ದೀಪಕ್ ಕುಮಾರ್ ಹೋಟಾ ಹೇಳಿದ್ದಾರೆ.ಯುಎನ್ಐ ಎಸ್ಎಲ್ಎಸ್ 1438

More News
ಆದಾಯ ತೆರಿಗೆ ವಿವರ ಸಲ್ಲಿಕೆಗೆ ಡಿ 31 ರವರೆಗೆ ಗಡುವು ವಿಸ್ತರಣೆ

ಆದಾಯ ತೆರಿಗೆ ವಿವರ ಸಲ್ಲಿಕೆಗೆ ಡಿ 31 ರವರೆಗೆ ಗಡುವು ವಿಸ್ತರಣೆ

24 Oct 2020 | 5:23 PM

ನವದೆಹಲಿ, ಅ 24 (ಯುಎನ್‍ಐ)- ಪ್ರಸಕ್ತ ಸಾಲಿನ (2019-20) ಆದಾಯ ತೆರಿಗೆ ವಿವರ ಸಲ್ಲಿಕೆ(ಐಟಿಆರ್) ಗೆ ತೆರಿಗೆ ಪಾವತಿದಾರರಿಗೆ ಈ ವರ್ಷದ ಡಿಸೆಂಬರ್ 31ರವರೆಗೆ ಗಡುವು ವಿಸ್ತರಿಸಲಾಗಿದೆ.

 Sharesee more..
ಜಿಎಸ್ ಟಿ ಪರಿಹಾರ: ಕರ್ನಾಟಕ ಸೇರಿ 16 ರಾಜ್ಯಗಳಿಗೆ ಮೊದಲ ಕಂತಿನಲ್ಲಿ6,000 ಕೋಟಿ ರೂ  ಬಿಡುಗಡೆ

ಜಿಎಸ್ ಟಿ ಪರಿಹಾರ: ಕರ್ನಾಟಕ ಸೇರಿ 16 ರಾಜ್ಯಗಳಿಗೆ ಮೊದಲ ಕಂತಿನಲ್ಲಿ6,000 ಕೋಟಿ ರೂ ಬಿಡುಗಡೆ

23 Oct 2020 | 9:25 PM

ನವದೆಹಲಿ, ಅ 23 []ಯುಎನ್ಐ] 2020-2021ನೇ ಸಾಲಿಗೆ ಜಿಎಸ್ ಟಿ ಪರಿಹಾರದ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ವಿಶೇಷ ಯೋಜನೆ ಅಡಿ ಸಾಲ ಮಂಜೂರು ಮಾಡಿದೆ. ಕರ್ನಾಟಕ ಸೇರಿ 16 ರಾಜ್ಯಗಳಿಗೆ ಮೊದಲ ಕಂತಿನಲ್ಲಿ 6,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

 Sharesee more..