Sunday, Aug 25 2019 | Time 01:21 Hrs(IST)
Entertainment Share

'ಇಷ್ಕ್-ವಿಶ್ಕ್' ರಿಮೇಕ್ ನಲ್ಲಿ ಸಾರಾಗೆ ನೋಡುವ ಆಸೆ : ಅಮೃತಾ ರಾವ್

ಮುಂಬೈ, ಜುಲೈ 16 (ಯುಎನ್ಐ) 'ಇಷ್ಕ್-ವಿಶ್ಕ್' ರಿಮೇಕ್ ಚಿತ್ರದಲ್ಲಿ ನಟಿ ಸಾರಾ ಅಲಿ ಖಾನ್ ಅವರಿಗೆ ನೋಡುವ ಆಸೆ ಇದೆ ಎಂದು ಬಾಲಿವುಡ್ ನಟಿ ಅಮೃತಾ ರಾವ್ ತಿಳಿಸಿದ್ದಾರೆ.
2003ರಲ್ಲಿ ಪ್ರದರ್ಶನಗೊಂಡ 'ಇಷ್ಕ್-ವಿಶ್ಕ್' ಚಿತ್ರದಲ್ಲಿ ಅಮೃತಾ, ಸರಳ ಕಾಲೇಜು ಕನ್ಯೆ ಮೆಹ್ರಾ ಆಗಿ ಕಾಣಿಸಿಕೊಂಡಿದ್ದು, ಶಾಹೀದ್ ಅವರ ಜೊತೆ ನಟಿಸಿದ್ದರು. ಇದೀಗ ಈ ಚಿತ್ರದ ರಿಮೇಕ್ ಹೊರಬರುತ್ತಿದ್ದು, ಅಮೃತಾ, ತಮ್ಮ ಪಾತ್ರಕ್ಕೆ ಸಾರಾ ನಟಿಸಿದರೆ ಚೆಂದ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಇಷ್ಕ್-ವಿಶ್ಕ್' ರಿಮೇಕ್ ನಲ್ಲಿ ಶಾಹಿದ್ ಸಹೋದರ ಇಶಾನ್ ಖಟ್ಟರ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಬಿಟೌನ್ ನಲ್ಲಿ ಕೇಳಿಬರುತ್ತಿವೆ.
ಪತ್ರಕರ್ತರೊಬ್ಬರು ಅಮೃತಾಗೆ ರಿಮೇಕ್ ನಲ್ಲಿ ನಟಿಸುವ ಆಸೆ ಇದೆಯಾ ಎಂದು ಪ್ರಶ್ನಿಸಿದ್ದಾಗ, ''ನಾನೀಗ ಇದ್ದಂತೆಯೇ ಇಶಾನ್ ಅವರೊಂದಿಗೆ ನಟಿಸಲು ಅವಕಾಶ ಕೊಡಬೇಕು ಎಂದು ಕಿರುನಗೆಯ ಬೀರಿದ್ದಾರೆ''.
ಯುಎನ್ಐ ಪಿಕೆ ಎಸ್ಎಚ್ 1818
More News
ವಿಜ್ಞಾನಿಯಾಗಿದ್ದ ವಿದ್ಯಾ ಈಗ ಗಣಿತಶಾಸ್ತ್ರಜ್ಞೆ !

ವಿಜ್ಞಾನಿಯಾಗಿದ್ದ ವಿದ್ಯಾ ಈಗ ಗಣಿತಶಾಸ್ತ್ರಜ್ಞೆ !

24 Aug 2019 | 2:11 PM

ಮುಂಬೈ 24 ಆಗಸ್ಟ್ (ಯುಎನ್ಐ) ವಿಭಿನ್ನ ಕಥೆಗಳುಳ್ಳ ಮಹಿಳಾ ಪ್ರದಾನ ಚಿತ್ರಗಳಲ್ಲಿ ನಟಿಸಿ ತಮ್ಮದೇ ಛಾಪನ್ನು ಮೂಡಿಸಿದ ಬಾಲಿವುಡ್ ನಟಿ ವಿದ್ಯಾ ಬಾಲನ್ ಈಗ ಮಾನವ ಕಂಪ್ಯೂಟರ್ ಎಂಬ ಖ್ಯಾತಿಯ ಗಣಿತಶಾಸ್ತ್ರಜ್ಞೆ ಶಕುಂತಲಾ ದೇವಿ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ.

 Sharesee more..

ದಕ್ಷಿಣ ಕೊರಿಯಾದಲ್ಲಿ 'ಅಂದಾಧುನ್'

24 Aug 2019 | 1:28 PM

 Sharesee more..