Saturday, Dec 5 2020 | Time 01:36 Hrs(IST)
business economy Share

‘ಎಲ್ ಅಂಡ್ ಟಿ ಕನ್ಸ್ಟ್ರಕ್ಷನ್ ‘ಗೆ ಭಾರತದ ಮೊದಲ ಹೈ-ಸ್ಪೀಡ್ ರೈಲು ಕಾರಿಡಾರ್ ನಿರ್ಮಾಣ ಗುತ್ತಿಗೆ

‘ಎಲ್ ಅಂಡ್ ಟಿ ಕನ್ಸ್ಟ್ರಕ್ಷನ್ ‘ಗೆ ಭಾರತದ ಮೊದಲ ಹೈ-ಸ್ಪೀಡ್ ರೈಲು ಕಾರಿಡಾರ್ ನಿರ್ಮಾಣ ಗುತ್ತಿಗೆ
‘ಎಲ್ ಅಂಡ್ ಟಿ ಕನ್ಸ್ಟ್ರಕ್ಷನ್ ‘ಗೆ ಭಾರತದ ಮೊದಲ ಹೈ-ಸ್ಪೀಡ್ ರೈಲು ಕಾರಿಡಾರ್ ನಿರ್ಮಾಣ ಗುತ್ತಿಗೆ

ಮುಂಬೈ, ನ 19 (ಯುಎನ್‌ಐ) ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್‍ ರೈಲು ಯೋಜೆಯೆಂದೇ ಹೆಸರಾಗಿರುವ ಹೈ ಸ್ಪೀಡ್ ರೈಲು (ಎಂಎಎಚ್‌ಎಸ್‌ಆರ್) ಯೋಜನೆಯಡಿ 87.569 ಕಿ.ಮೀ ಮಾರ್ಗ ನಿರ್ಮಿಸಲು ಎಲ್ ಅಂಡ್ ಟಿ ಕನ್‌ಸ್ಟ್ರಕ್ಷನ್‌ ಕಂಪೆನಿಯ ಸಾರಿಗೆ ಮೂಲಸೌಕರ್ಯ ವ್ಯವಹಾರ ವಿಭಾಗಕ್ಕೆ ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‍ ಸಿಎಲ್) ನಿಂದ ಮತ್ತೊಂದು ಬೃಹತ್ ಗುತ್ತಿಗೆ ದೊರೆತಿದೆ.

ಎಂಎಎಚ್‌ಎಸ್‌ಆರ್ ನ ಸಿ-6 ಪ್ಯಾಕೇಜ್ ಅನ್ನು ನಿರ್ಮಿಸಲು ಈ ಗುತ್ತಿಗೆ ದೊರೆತಿದೆ. ಈಗಾಗಲೇ ಯೋಜನೆಯ ಸಿ-4 ಪ್ಯಾಕೇಜ್‌ಗಾಗಿ ಸಂಸ್ಥೆ ಗುತ್ತಿಗೆ ಪಡೆದಿದೆ. 237.1 ಕಿ.ಮೀ. ಉದ್ದದ ಮಾರ್ಗವನ್ನೊಳಗೊಂಡ ಈ ಯೋಜನೆಯಡಿ ದೇಶದಲ್ಲಿ ಇಲ್ಲಿಯವರೆಗೆ ನೀಡಲಾದ ಅತಿದೊಡ್ಡ ಇಪಿಸಿ ಗುತ್ತಿಗೆ ಇದಾಗಿದೆ.

ಎಂಎಎಚ್‌ಎಸ್‌ಆರ್ ನ ಈ ಪ್ಯಾಕೇಜ್‍ನಡಿ ಮಾರ್ಗದ ಪಕ್ಕದಲ್ಲಿ ನೀರು ಹರಿದು ಹೋಗಲು ಕಾಲುವೆಗಳು, ಒಂದು ನಿಲ್ದಾಣ, ಪ್ರಮುಖ ನದಿ ಸೇತುವೆಗಳು, ನಿರ್ವಹಣೆ ಡಿಪೋಗಳು ಮತ್ತು ಇತರ ಕಾಮಗಾರಿಗಳು ಒಳಗೊಂಡಿವೆ. ಈ ಗುತ್ತಿಗೆ ಒಪ್ಪಂದದ ನಿರ್ದಿಷ್ಟ ಪ್ಯಾಕೇಜ್ ಒಟ್ಟು ಉದ್ದದ ಶೇ 17.2 ರಷ್ಟಿದೆ. ಇದು ವಡೋದರಾದ ಹೊರವಲಯದಿಂದ ಗುಜರಾತ್ ರಾಜ್ಯದ ಅಹಮದಾಬಾದ್‌ನ ಹೊರವಲಯದವರೆಗಿದೆ. ಆನಂದ್ / ನಾಡಿಯಾಡ್‌ನಲ್ಲಿ ಒಂದು ನಿಲ್ದಾಣವೂ ಈ ಪ್ಯಾಕೇಜ್‍ನಡಿ ಸೇರಿದೆ.

ಯುಎನ್ಐ ಎಸ್ಎಲ್ಎಸ್ 1339

More News
ಸೆನ್ಸೆಕ್ಸ್: ಸಾರ್ವಕಾಲಿಕ ಗರಿಷ್ಠ ಮಟ್ಟವಾದ 45,079 55ರಲ್ಲಿ ದಿನದ ವಹಿವಾಟು ಅಂತ್ಯ

ಸೆನ್ಸೆಕ್ಸ್: ಸಾರ್ವಕಾಲಿಕ ಗರಿಷ್ಠ ಮಟ್ಟವಾದ 45,079 55ರಲ್ಲಿ ದಿನದ ವಹಿವಾಟು ಅಂತ್ಯ

04 Dec 2020 | 5:28 PM

ಮುಂಬೈ, ಡಿ 4 (ಯುಎನ್ಐ) ರಿಸರ್ವ್ ಬ್ಯಾಂಕ್ ತನ್ನ ನೀತಿಗಳಲ್ಲಿ ಯತಾಸ್ಥಿತಿ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ ಶುಕ್ರವಾರ ದಿನದ ವಹಿವಾಟಿನ ಅಂತ್ಯಕ್ಕೆ 446.90 ಅಂಕ ಏರಿಕೆ ಕಂಎಉ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 45,079.55ರಲ್ಲಿ ವಹಿವಾಟು ಮುಗಿಸಿದೆ.

 Sharesee more..