Sunday, Nov 17 2019 | Time 18:48 Hrs(IST)
 • ಯುಪಿಯಲ್ಲಿ ರೈತರ ಮೇಲೆ ಲಾಠಿ ಬೀಸಿದ ಪೊಲೀಸರು
 • ಐಸಿಸಿ ಟೆಸ್ಟ್‌ ಶ್ರೇಯಾಂಕ: ವೃತ್ತಿ ಜೀವನದ ಶ್ರೇಷ್ಠ ಶ್ರೇಯಾಂಕ ಪಡೆದ ಅಗರ್ವಾಲ್, ಶಮಿ
 • ಜಾರ್ಖಂಡ್ ಚುನಾವಣೆ: ಬಿಜೆಪಿಗೆ 65 ಹೆಚ್ಚು ಸ್ಥಾನ: ಜಾವಡೇಕರ್ ವಿಶ್ವಾಸ
 • ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಭಾಗಿ
 • ಕಪ್ಪುಹಣದ ಮೇಲೆ ಮತ್ತೊಮ್ಮೆ ಗುರಿ; ಆಸ್ತಿಗಳಿಗೆ ಆಧಾರ್ ಕಡ್ಡಾಯಗೊಳಿಸಲು ಮೋದಿ ಸರ್ಕಾರದ ಸಿದ್ದತೆ
 • ಗೋವಾ ವಿರುದ್ಧ ಕರ್ನಾಟಕಕ್ಕೆೆ 35 ರನ್ ಜಯ
 • ಕುಖ್ಯಾತ ಮನೆಗಳ್ಳ ಎಸ್ಕೇಪ್ ಕಾರ್ತಿಕ್ ಬಂಧನ: 8 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ
 • ಪ್ರಸಕ್ತ ಸಂಸತ್ ಅಧಿವೇಶನ ರಾಜ್ಯಸಭೆಯ 250 ನೇ ಅಧಿವೇಶನ ಆಚರಣೆಯ ವಿಶೇಷ ಸಂದರ್ಭವಾಗಲಿದೆ: ಪ್ರಧಾನಿ
 • class="rtejustify">ಆಯೋಧ್ಯೆ ತೀರ್ಪು; ಮರು ಪರಿಶೀಲನಾ ಆರ್ಜಿ ಸಲ್ಲಿಸಲು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧಾರ
 • ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ,ಕೇಂದ್ರ ಸಚಿವರು,ಸಂಸದರಿಗೆ ಸ್ಥಾನ
 • ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಏಕಮುಖ ಸಂಚಾರ ಆರಂಭ
 • ಬಾಳಾ ಠಾಕ್ರೆ ಏಳನೇ ಪುಣ್ಯ ತಿಥಿ; ಮಹಾರಾಷ್ಟ್ರದಲ್ಲಿ ಮುಖಂಡರ ಪಕ್ಷಾತೀತ ನಮನ
 • ಸಂಸತ್‍ ಚಳಿಗಾಲದ ಅಧಿವೇಶನ: ಸರ್ಕಾರ ಕರೆದಿದ್ದ ಸರ್ವಪಕ್ಷಗಳ ಸಭೆ ಅಂತ್ಯ
 • 105 ದಿನಗಳ ಬಳಿಕ ಶ್ರೀನಗರ-ಬನಿಹಾಲ್ ರೈಲು ಸೇವೆ ಪುನಾರಂಭ
 • ಕಾಶ್ಮೀರದಲ್ಲಿ ಹೆಚ್ಚಿನ ಅಂಗಡಿಗಳು ಪುನರಾರಂಭ: ಸಾಮಾನ್ಯ ಸ್ಥಿತಿಯತ್ತ ಜನ-ಜೀವನ
Health -Lifestyle Share

'ಗುಟ್ಟಿನಿಂದ ಬಟ್ಟಲಿನೆಡೆಗೆ' :ಇದು ಸಂತ್ರಸ್ತ ಸಹೋದರಿಯರಿಗಾಗಿ

'ಗುಟ್ಟಿನಿಂದ ಬಟ್ಟಲಿನೆಡೆಗೆ' :ಇದು ಸಂತ್ರಸ್ತ ಸಹೋದರಿಯರಿಗಾಗಿ
'ಗುಟ್ಟಿನಿಂದ ಬಟ್ಟಲಿನೆಡೆಗೆ' :ಇದು ಸಂತ್ರಸ್ತ ಸಹೋದರಿಯರಿಗಾಗಿ

(ವಿಶೇಷ ವರದಿ: ಸಂಧ್ಯಾ ಸೊರಬ)ಬೆಂಗಳೂರು, ಸೆ 9 (ಯುಎನ್‍ಐ) ಸುತ್ತೆಲ್ಲಾ ನೆರೆ, ಕಾಲು ಚಾಚಲು ಜಾಗವಿರದ ನಿರಾಶ್ರಿತಕೇಂದ್ರದಲ್ಲಿ ಮಹಿಳೆಯರು ಮುಟ್ಟಿನ ಸಂದರ್ಭಗಳಲ್ಲಿ ಎದುರಿಸುವ ಯಾತನೆ ಅನುಭವಿಸಿದವರಿಗಷ್ಟೆ ಗೊತ್ತು ಅಂತಹ ದಿನಗಳಲ್ಲಿ ಎದುರಿಸುವ ಮುಜುಗರದ ಪರಿಸ್ಥಿತಿಯನ್ನು ಬಹಿರಂಗವಾಗಿ ಹೇಳಿಕೊಳ್ಳಲು ಆಗದಂತಹ ಅನುಭವಿಸಲು ಸಾಧ್ಯವಿಲ್ಲದಂತಹ ಸನ್ನಿವೇಶ ಇರುತ್ತದೆ ಆದರೆ ಇಂತಹ ನಿರಾಶ್ರಿತ ಕೇಂದ್ರಗಳಲ್ಲಿ ಮಹಿಳೆಯರ ನೆರವಿಗೆ ಬಂದಿದ್ದು ‘ಗುಟ್ಟಿನಿಂದ ಬಟ್ಟಲಿನೆಡೆಗೆ’ ಅಭಿಯಾನ

ಪ್ರವಾಹ ಸಂತ್ರಸ್ತ ಪ್ರದೇಶದ ಮಹಿಳೆಯೊಬ್ಬಳು ತಾನು ಬಹಿಷ್ಠೆಯಾದ ಸಂದರ್ಭದಲ್ಲಿ ತನ್ನ ವೈಯಕ್ತಿಕ ಸ್ವಚ್ಛತೆಗೆ ಈ ಅಭಿಯಾನ ನೆರವಿಗೆ ಬಂದಿದ್ದನ್ನು ತನ್ನದೇ ಆದ ಉತ್ತರ ಕರ್ನಾಟಕ ಶೈಲಿಯಲ್ಲಿ ಹೇಳಿಕೊಂಡಿದ್ದು ಹೀಗೆ,“ನೀವು ಈ ಕಪ್ ಕೊಟ್ಟಿ ಹೋಗಿದ್ದು ಭಾಳ ಚೊಲೋ ಆತ್ರಿ, ನನಗ ಇವತ್ತ ಹೆಂಗ ಕಳೀತು ಅನ್ನೋದ ಗೊತ್ತಾಗ್ಲಿಲ್ಲ. ಇಂಥ ಒಂದು ವಸ್ತು ಭೂಮಿ ಮ್ಯಾಗ ಹೆಣ್ಮಕ್ಕಳಿಗ್ ಐತಿ, ನೀರಾಗ್ ಎಲ್ಲವೂ ಕೊಚ್ಚೋದಾಗ ಹೆಣ್ಮಕ್ಕಳಿಗೆ ಇದು ಆಧಾರಾಕೇತಿ ಅಂತ ಗೊತ್ತಿರ್ಲಿಲ್ಲರಿ. ಥ್ಯಾಂಕ್ಸ್ ರೀ..” ಎಂದು ಉದ್ಘಾರ ತೆಗೆದಳು.ಇದು ಗದಗ ಜಿಲ್ಲೆ ರೋಣಾ ತಾಲೂಕಿನ ಕುರುವಿನಕೊಪ್ಪ ಗ್ರಾಮದ 40 ವರ್ಷದ ಶೋಭಾ ಮೆಣಸಗಿಯ ಹೃದಯದಾಳದ ಮಾತು. ಅಷ್ಟಕ್ಕೂ ಇದು ಈ ಹೆಣ್ಣುಮಗಳ ಮಾತಷ್ಟೇ ಅಲ್ಲ. ಇಂತಹ ನೂರಾರು ಧ‍್ವನಿಗಳು ಪ್ರತಿಧ‍್ವನಿಸುತ್ತಿವೆ.ಸಂತ್ರಸ್ತರಿಗೆ ಹಣ, ಬಟ್ಟೆ, ದವಸಧಾನ್ಯ ಕೊಡುವುದು ಒಂದು ಕಡೆಯಾದರೆ, ಸಂತ್ರಸ್ತ ಸಹೋದರಿಯರ ದೈಹಿಕ ಸ್ವಾಸ್ಥ್ಯದ ಕಾಳಜಿಗೆ ಪ್ರಗತಿಪರ ಮಹಿಳೆಯರು ಮುಟ್ಟಿನ ಬಟ್ಟಲು ನೀಡುವ ಮೂಲಕ ಅವರ ನೆರವಿಗೆ ವಿಶೇಷವಾಗಿ ಸ್ಪಂದಿಸಿದ್ದಾರೆ.ಮುಟ್ಟು (ಹೊರಗಾಗುವುದು) ಹೆಣ್ಣು ಜೀವಕ್ಕೆ ಪ್ರತಿ ತಿಂಗಳ ನೈಸರ್ಗಿಕ ಕ್ರಿಯೆ ಆದರೂ, ಆ 4 ದಿನಗಳು ಆಕೆ ಅನುಭವಿಸುವ ತಳಮಳ, ನೋವು ಆಕೆಗೆ ಮಾತ್ರ ಗೊತ್ತು. ಅದನ್ನು ಮತ್ತೊಂದು ಹೆಣ್ಣು ಅರಿಯಬಲ್ಲಳು ಅನುಭವಿಸಬಲ್ಲಳು. ಸಾಮಾನ್ಯ ಪರಿಸ್ಥಿತಿಯಲ್ಲಿಯೇ ಮುಟ್ಟು ಮತ್ತು ಅದನ್ನು ನಿರ್ವಹಿಸುವುದು ಕಷ್ಟ.ಅಂತಹದರಲ್ಲಿ ಪ್ರವಾಹ ಸಂದರ್ಭದಲ್ಲಿ ಅದು ಇನ್ನೂ ಕಷ್ಟ. ಸಂತ್ರ‍ಸ್ತ ಸಹೋದರಿಯರಿಗೆ ಈ ದಿನಗಳಲ್ಲಿ ಉಪಕಾರಿಯಾದ ‘ಮುಟ್ಟಿನ ಬಟ್ಟಲು’ ನ್ನು ಮುಟ್ಟಿಸುವ ಕೆಲಸವನ್ನು ಈ ಪ್ರಗತಿಪರ ತಂಡ ಮಾಡುತ್ತಿದೆ.

ಸಮಾನ ಮನಸ್ಕ ಪ್ರಗತಿಪರ 6 ಮಹಿಳೆಯ ತಂಡ “ಗುಟ್ಟಿನಿಂದ ಬಟ್ಟಲಿನೆಡೆಗೆ” ಎನ್ನುವ ಅಭಿಯಾನವನ್ನು ಕಳೆದೊಂದು ತಿಂಗಳಿನಿಂದ ಆರಂಭಿಸಿದೆ.

ಕಿರುಚಿತ್ರಗಳ ನಿರ್ದೇಶಕಿ, ಪ್ರಗತಿಪರ ಚಿಂತಕಿ ಸಂಜ್ಯೋತಿ ಮತ್ತು ಆಕೆಯ ಒಂದಿಷ್ಟು ಬಳಗದ ಸ್ನೇಹಿತರು ಸಂತ್ರಸ್ತ ಸಹೋದರಿಯರಿಗೆ ಮುಟ್ಟಿನ ಬಟ್ಟಲಿನ ಮೂಲಕ ನೆರವಾಗುತ್ತಿದ್ದಾರೆ.

ಅಂದಹಾಗೆ ಈ ತಂಡಕ್ಕೆ ಸ್ಫೂರ್ತಿಯಾಗಿದ್ದು ಕೇರಳ ಸರ್ಕಾರ. ಹೌದು, ಕಳೆದ ಬಾರಿ ಕೇರಳದಲ್ಲಿ ಪ್ರವಾಹ ನಿಂತ ಬಳಿಕ ನಡೆದ ವೀಕ್ಷಣೆಯಲ್ಲಿ ಆ ಸರ್ಕಾರಕ್ಕೆ ಪೀರಿಯಡ್ ಪ್ಯಾಡ್ ಗಳ ಗುಡ್ಡವೇ ಕಣ್ಣಿಗೆ ಬಿದ್ದಿತ್ತು. ಅದರಿಂದ ಸುತ್ತಮುತ್ತ ಸಾಂಕ್ರಾಮಿಕ ರೋಗ ಹರಡುವ ಭಯ ಕಾಡಿತ್ತು. ಪ್ಲಾಸ್ಟಿಕ್ ಬಳಕೆಯ ಪ್ಯಾಡ್ ಗಳ ನಾಶ ಮಾಡುವುದು ಸವಾಲಾಗಿತ್ತು. ಅಂತಹ ಸಂದರ್ಭದಲ್ಲಿ ಕೇರಳ ಸರ್ಕಾರ ಅಲ್ಲಿನ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ 5 ಸಾವಿರ menstrual cup (ಮುಟ್ಟಿನ ಬಟ್ಟಲು) ಗಳನ್ನು ವಿತರಿಸಿತ್ತು.

ಇದನ್ನು ಸ್ಪೂರ್ತಿಯಾಗಿಸಿಕೊಂಡ ಈ ತಂಡ, ನೆರೆ ಸಂತ್ರಸ್ತ ಮಹಿಳೆಯರಿಗೆ ಇದನ್ನು ಉಚಿತವಾಗಿ ವಿತರಿಸುವ ಯೋಚನೆ ಮಾಡಿತು. ಕೆಲವು ದಾನಿಗಳು ಮುಂದೆ ಬಂದರೂ, ಇನ್ನೂ ಕೆಲವರು ಸಹಾಯ ಹಸ್ತ ನೀಡಿದರು. ಆರಂಭದಲ್ಲಿ ಸಾಮಾನ್ಯ ಪ್ಯಾಡ್ ಗಳನ್ನೇ ವಿತರಿಸುವ ಬಗ್ಗೆ ಯೋಚನೆ ಬಂದಿತ್ತಾದರೂ ಪ್ಯಾಡ್ ಗಳಿಂದ ಪರಿಸರ ಹಾನಿ ಹಾಗೂ ಸಾಂಕ್ರಾಮಿಕ ರೋಗಗಳು ಅದರಲ್ಲಿಯೂ ಈ ನೆರೆ ಸಂದರ್ಭದಲ್ಲಿ ಹೆಚ್ಚು. ಹೀಗಾಗಿ ಅಕ್ಕತಂಗಿ, ಅವ್ವಂದಿರ ಆರೋಗ್ಯದ ದೃಷ್ಟಿಯಿಂದ ಪರಿಸರಕ್ಕೆ ಹಾನಿಯಾಗದಂತೆ ಈ ಬಟ್ಟಲುಗಳನ್ನೇ ನೀಡುವ ಯೋಚನೆ ಹೊಳೆಯಿತು ಎಂದು ಸಂಜ್ಯೋತಿ ಯುಎನ್‍ಐ ಕನ್ನಡ ಸುದ್ದಿ ಸಂಸ್ಥೆಗೆ ಹೇಳಿದರು.

ಅಷ್ಟಕ್ಕೂ ಈ ಮುಟ್ಟಿನ ಬಟ್ಟಲು ಬಳಕೆ 1930 ರಲ್ಲಿಯೇ ಬೆಳಕಿಗೆ ಬಂದಿದ್ದರೂ ನಮ್ಮ ರಾಜ್ಯದಲ್ಲಿ ಮಾತ್ರ ಇದು ಎಲ್ಲೋ ಬೆರಳೇಣಿಕೆಯಷ್ಟು ಸಹೋದರಿಯರು ಮಾತ್ರ ಬಳಸುತ್ತಿದ್ದಾರೆ. ಅದಿರಲಿ, ಈ ತಂಡ ಮೆಡಿಕೇಟೆಡ್ ಒಳ್ಳೆಯ ಸರ್ಟಿಫಿಕೇಷನ್ ಆಗಿರುವ 1 ಸಾವಿರ ಕಪ್ ಗಳನ್ನು ವಿತರಿಸುವ ಉದ್ದೇಶ ಹೊಂದಿದ್ದು, ಇಲ್ಲಿಯವರೆಗೂ 700 ಕ್ಕೂ ಹೆಚ್ಚು ಕಪ್ ಗಳನ್ನು ನೆರೆ ಸಂತ್ರಸ್ತ ಭಾಗಗಳಾದ ರೋಣಾ ಗದಗ ರಬಕವಿ ಮೂಡಿಗೆರೆ ಹೆಚ್.ಡಿ.ಕೋಟೆ,ಪೊನ್ನಂಪೇಟೆ ಹಾಡಿಗಳಲ್ಲಿ ತೀರ್ಥಹಳ್ಳಿ ಶಿವಮೊಗ್ಗ ಮಂಗಳೂರಿನ ಕೆಲವು ಭಾಗಗಳ ಮಹಿಳೆಯರಿಗೆ ವಿತರಿಸಿದ್ದಾರೆ.

ವೈದ್ಯರು ಸಹ ಈ ತಂಡದ ಜೊತೆ ಕೈ ಜೋಡಿಸಿದ್ದು, ಆಯಾ ಭಾಗಗಳ ಮಹಿಳೆಯರಿಂದಲೇ ಕಪ್ ಗಳ ಬಳಕೆ, ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಪ್ರವಾಹದಲ್ಲಿ ಗುಟ್ಟಾಗಿದ್ದ ನೋವನ್ನು ಬಟ್ಟಲಿಗೆ ತಂದು ಸಂತ್ರಸ್ತ ಸಹೋದರಿಯರಿಗೆ ನೆರವಾಗುತ್ತಿರುವ ಈ ಅಭಿಯಾನ ಆರೋಗ್ಯ ರಕ್ಷಣೆಯ ಜೊತೆಗೆ ಮೌಢ್ಯ ನಿವಾರಣೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸಂತ್ರಸ್ತ ಮಹಿಳೆಯರ ವೈಯಕ್ತಿಕ ಆರೋಗ್ಯ ರಕ್ಷಣೆಗೆ ಈ ತಂಡ ಟೊಂಕ ಕಟ್ಟಿರುವುದು ವಿಶೇಷ.

ಯುಎನ್‍ಐ ಯುಎಲ್ ವಿಎನ್ 1852

More News

ಮಧುಮೇಹಿಗಳಿಗೆ ಕುಟುಂಬದ ಸಹಕಾರ ಅಗತ್ಯ

13 Nov 2019 | 12:22 PM

 Sharesee more..
ಮಧುಮೇಹ ನಿಯಂತ್ರಣಕ್ಕೆ ಯೋಗ ಮದ್ದು: ಎಸ್-ವ್ಯಾಸ ನಡೆಸಿದ ಸಂಶೋಧನೆಗಳಿಂದ ಸಾಬೀತು

ಮಧುಮೇಹ ನಿಯಂತ್ರಣಕ್ಕೆ ಯೋಗ ಮದ್ದು: ಎಸ್-ವ್ಯಾಸ ನಡೆಸಿದ ಸಂಶೋಧನೆಗಳಿಂದ ಸಾಬೀತು

12 Nov 2019 | 7:19 PM

ಬೆಂಗಳೂರು, ನ 12 [ಯುಎನ್ಐ] ನಿಯಮಿತ ಮತ್ತು ವೃತ್ತಿಪರವಾಗಿ ಯೋಗ ಮಾಡಿದರೆ ಡಯಾಬಿಟಿಸ್ ಅಥವಾ ಮಧುಮೇಹವನ್ನು ಸುಲಭವಾಗಿ ನಿಯಂತ್ರಣ ಮಾಡಬಹುದು.

 Sharesee more..
ಕರ್ಲಾನ್‌ನಿಂದ ಮೊದಲ ವಿವಾಹ ಮ್ಯಾಟ್ರೆಸ್ ಬಿಡುಗಡೆ: ಪ್ರೀಮಿಯಂ, ಲಕ್ಷುರಿ ವಿಭಾಗದಲ್ಲಿ ಮೊದಲ ಮ್ಯಾಟ್ರೆಸ್ ಇದು

ಕರ್ಲಾನ್‌ನಿಂದ ಮೊದಲ ವಿವಾಹ ಮ್ಯಾಟ್ರೆಸ್ ಬಿಡುಗಡೆ: ಪ್ರೀಮಿಯಂ, ಲಕ್ಷುರಿ ವಿಭಾಗದಲ್ಲಿ ಮೊದಲ ಮ್ಯಾಟ್ರೆಸ್ ಇದು

07 Nov 2019 | 5:18 PM

ಬೆಂಗಳೂರು, ನ 7 [ಯುಎನ್ಐ] ಭಾರತದಲ್ಲಿ ಮುಂಚೂಣಿಯಲ್ಲಿರುವ ಮತ್ತು ಅತಿದೊಡ್ಡ ಮ್ಯಾಟ್ರೆಸ್ ಬ್ರ್ಯಾಂಡ್ ಕರ್ಲಾನ್ ಇದೇ ಮೊದಲ ಬಾರಿಗೆ ವಿವಾಹ ಮ್ಯಾಟ್ರೆಸ್ ಬಿಡುಗಡೆ ಮಾಡಿದ್ದು, ತನ್ನ ಜಾಲವನ್ನು ಮತ್ತಷ್ಟು ವಿಸ್ತರಣೆ ಮಾಡಿಕೊಂಡಿದೆ.

 Sharesee more..