Wednesday, Feb 26 2020 | Time 12:21 Hrs(IST)
 • ಗಲಭೆ ಕೋರರನ್ನು ಮಟ್ಟ ಹಾಕಿ ಪೊಲೀಸರಿಗೆ ದೆಹಲಿ ಹೈಕೋರ್ಟ್ ಖಡಕ್ ಎಚ್ಚರಿಕೆ
 • ದೆಹಲಿ ಹಿಂಸಾಚಾರ: ಸಾವಿನ ಸಂಖ್ಯೆ 20ಕ್ಕೆ ಏರಿದೆ
 • ಕಾಶ್ಮೀರದ ಬುದ್ಗಾಮ್‌ನಲ್ಲಿ ಎನ್‌ಐಎ ದಾಳಿ
 • ದೆಹಲಿ ಹಿಂಸಾಚಾರ: ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
 • ಕಾರ್ಮಿಕನ ಬರ್ಬರ ಹತ್ಯೆ
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
Health -Lifestyle Share

'ಗುಟ್ಟಿನಿಂದ ಬಟ್ಟಲಿನೆಡೆಗೆ' : ಇಂದು ಸಂತ್ರಸ್ತ ಸಹೋದರಿಯರಿಗಾಗಿ

(ವಿಶೇಷ ವರದಿ: ಸಂಧ್ಯಾ ಸೊರಬ)

ಬೆಂಗಳೂರು, ಸೆ 7 (ಯುಎನ್‍ಐ) ಸುತ್ತೆಲ್ಲಾ ನೆರೆ, ಕಾಲು ಚಾಚಲು ಜಾಗವಿರದ ನಿರಾಶ್ರಿತಕೇಂದ್ರದಲ್ಲಿ ಮಹಿಳೆಯರು ಮುಟ್ಟಿನ ಸಂದರ್ಭಗಳಲ್ಲಿ ಎದುರಿಸುವ ಯಾತನೆ ಅನುಭವಿಸಿದವರಿಗಷ್ಟೆ ಗೊತ್ತು ಅಂತಹ ದಿನಗಳಲ್ಲಿ ಎದುರಿಸುವ ಮುಜುಗರದ ಪರಿಸ್ಥಿತಿಯನ್ನು ಬಹಿರಂಗವಾಗಿ ಹೇಳಿಕೊಳ್ಳಲು ಆಗದಂತಹ ಅನುಭವಿಸಲು ಸಾಧ್ಯವಿಲ್ಲದಂತಹ ಸನ್ನಿವೇಶ ಇರುತ್ತದೆ ಆದರೆ ಇಂತಹ ನಿರಾಶ್ರಿತ ಕೇಂದ್ರಗಳಲ್ಲಿ ಮಹಿಳೆಯರ ನೆರವಿಗೆ ಬಂದಿದ್ದು ‘ಗುಟ್ಟಿನಿಂದ ಬಟ್ಟಲಿನೆಡೆಗೆ’ ಅಭಿಯಾನ
ಪ್ರವಾಹ ಸಂತ್ರಸ್ತ ಪ್ರದೇಶದ ಮಹಿಳೆಯೊಬ್ಬಳು ತಾನು ಬಹಿಷ್ಠೆಯಾದ ಸಂದರ್ಭದಲ್ಲಿ ತನ್ನ ವೈಯಕ್ತಿಕ ಸ್ವಚ್ಛತೆಗೆ ಈ ಅಭಿಯಾನ ನೆರವಿಗೆ ಬಂದಿದ್ದನ್ನು ತನ್ನದೇ ಆದ ಉತ್ತರ ಕರ್ನಾಟಕ ಶೈಲಿಯಲ್ಲಿ ಹೇಳಿಕೊಂಡಿದ್ದು ಹೀಗೆ,

“ನೀವು ಈ ಕಪ್ ಕೊಟ್ಟಿ ಹೋಗಿದ್ದು ಭಾಳ ಚೊಲೋ ಆತ್ರಿ, ನನಗ ಇವತ್ತ ಹೆಂಗ ಕಳೀತು ಅನ್ನೋದ ಗೊತ್ತಾಗ್ಲಿಲ್ಲ. ಇಂಥ ಒಂದು ವಸ್ತು ಭೂಮಿ ಮ್ಯಾಗ ಹೆಣ್ಮಕ್ಕಳಿಗ್ ಐತಿ, ನೀರಾಗ್ ಎಲ್ಲವೂ ಕೊಚ್ಚೋದಾಗ ಹೆಣ್ಮಕ್ಕಳಿಗೆ ಇದು ಆಧಾರಾಕೇತಿ ಅಂತ ಗೊತ್ತಿರ್ಲಿಲ್ಲರಿ. ಥ್ಯಾಂಕ್ಸ್ ರೀ..” ಎಂದು ಉದ್ಘಾರ ತೆಗೆದಳು.

ಇದು ಗದಗ ಜಿಲ್ಲೆ ರೋಣಾ ತಾಲೂಕಿನ ಕುರುವಿನಕೊಪ್ಪ ಗ್ರಾಮದ 40 ವರ್ಷದ ಶೋಭಾ ಮೆಣಸಗಿಯ ಹೃದಯದಾಳದ ಮಾತು. ಅಷ್ಟಕ್ಕೂ ಇದು ಈ ಹೆಣ್ಣುಮಗಳ ಮಾತಷ್ಟೇ ಅಲ್ಲ. ಇಂತಹ ನೂರಾರು ಧ‍್ವನಿಗಳು ಪ್ರತಿಧ‍್ವನಿಸುತ್ತಿವೆ.ಸಂತ್ರಸ್ತರಿಗೆ ಹಣ, ಬಟ್ಟೆ, ದವಸಧಾನ್ಯ ಕೊಡುವುದು ಒಂದು ಕಡೆಯಾದರೆ, ಸಂತ್ರಸ್ತ ಸಹೋದರಿಯರ ದೈಹಿಕ ಸ್ವಾಸ್ಥ್ಯದ ಕಾಳಜಿಗೆ ಪ್ರಗತಿಪರ ಮಹಿಳೆಯರು ಮುಟ್ಟಿನ ಬಟ್ಟಲು ನೀಡುವ ಮೂಲಕ ಅವರ ನೆರವಿಗೆ ವಿಶೇಷವಾಗಿ ಸ್ಪಂದಿಸಿದ್ದಾರೆ.ಮುಟ್ಟು (ಹೊರಗಾಗುವುದು) ಹೆಣ್ಣು ಜೀವಕ್ಕೆ ಪ್ರತಿ ತಿಂಗಳ ನೈಸರ್ಗಿಕ ಕ್ರಿಯೆ ಆದರೂ, ಆ 4 ದಿನಗಳು ಆಕೆ ಅನುಭವಿಸುವ ತಳಮಳ, ನೋವು ಆಕೆಗೆ ಮಾತ್ರ ಗೊತ್ತು. ಅದನ್ನು ಮತ್ತೊಂದು ಹೆಣ್ಣು ಅರಿಯಬಲ್ಲಳು ಅನುಭವಿಸಬಲ್ಲಳು. ಸಾಮಾನ್ಯ ಪರಿಸ್ಥಿತಿಯಲ್ಲಿಯೇ ಮುಟ್ಟು ಮತ್ತು ಅದನ್ನು ನಿರ್ವಹಿಸುವುದು ಕಷ್ಟ.ಅಂತಹದರಲ್ಲಿ ಪ್ರವಾಹ ಸಂದರ್ಭದಲ್ಲಿ ಅದು ಇನ್ನೂ ಕಷ್ಟ. ಸಂತ್ರ‍ಸ್ತ ಸಹೋದರಿಯರಿಗೆ ಈ ದಿನಗಳಲ್ಲಿ ಉಪಕಾರಿಯಾದ ‘ಮುಟ್ಟಿನ ಬಟ್ಟಲು’ ನ್ನು ಮುಟ್ಟಿಸುವ ಕೆಲಸವನ್ನು ಈ ಪ್ರಗತಿಪರ ತಂಡ ಮಾಡುತ್ತಿದೆ.
ಸಮಾನ ಮನಸ್ಕ ಪ್ರಗತಿಪರ 6 ಮಹಿಳೆಯ ತಂಡ “ಗುಟ್ಟಿನಿಂದ ಬಟ್ಟಲಿನೆಡೆಗೆ” ಎನ್ನುವ ಅಭಿಯಾನವನ್ನು ಕಳೆದೊಂದು ತಿಂಗಳಿನಿಂದ ಆರಂಭಿಸಿದೆ.
ಕಿರುಚಿತ್ರಗಳ ನಿರ್ದೇಶಕಿ, ಪ್ರಗತಿಪರ ಚಿಂತಕಿ ಸಂಜ್ಯೋತಿ ಮತ್ತು ಆಕೆಯ ಒಂದಿಷ್ಟು ಬಳಗದ ಸ್ನೇಹಿತರು ಸಂತ್ರಸ್ತ ಸಹೋದರಿಯರಿಗೆ ಮುಟ್ಟಿನ ಬಟ್ಟಲಿನ ಮೂಲಕ ನೆರವಾಗುತ್ತಿದ್ದಾರೆ.
ಅಂದಹಾಗೆ ಈ ತಂಡಕ್ಕೆ ಸ್ಫೂರ್ತಿಯಾಗಿದ್ದು ಕೇರಳ ಸರ್ಕಾರ. ಹೌದು, ಕಳೆದ ಬಾರಿ ಕೇರಳದಲ್ಲಿ ಪ್ರವಾಹ ನಿಂತ ಬಳಿಕ ನಡೆದ ವೀಕ್ಷಣೆಯಲ್ಲಿ ಆ ಸರ್ಕಾರಕ್ಕೆ ಪೀರಿಯಡ್ ಪ್ಯಾಡ್ ಗಳ ಗುಡ್ಡವೇ ಕಣ್ಣಿಗೆ ಬಿದ್ದಿತ್ತು. ಅದರಿಂದ ಸುತ್ತಮುತ್ತ ಸಾಂಕ್ರಾಮಿಕ ರೋಗ ಹರಡುವ ಭಯ ಕಾಡಿತ್ತು. ಪ್ಲಾಸ್ಟಿಕ್ ಬಳಕೆಯ ಪ್ಯಾಡ್ ಗಳ ನಾಶ ಮಾಡುವುದು ಸವಾಲಾಗಿತ್ತು. ಅಂತಹ ಸಂದರ್ಭದಲ್ಲಿ ಕೇರಳ ಸರ್ಕಾರ ಅಲ್ಲಿನ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ 5 ಸಾವಿರ menstrual cup (ಮುಟ್ಟಿನ ಬಟ್ಟಲು) ಗಳನ್ನು ವಿತರಿಸಿತ್ತು.
ಇದನ್ನು ಸ್ಪೂರ್ತಿಯಾಗಿಸಿಕೊಂಡ ಈ ತಂಡ, ನೆರೆ ಸಂತ್ರಸ್ತ ಮಹಿಳೆಯರಿಗೆ ಇದನ್ನು ಉಚಿತವಾಗಿ ವಿತರಿಸುವ ಯೋಚನೆ ಮಾಡಿತು. ಕೆಲವು ದಾನಿಗಳು ಮುಂದೆ ಬಂದರೂ, ಇನ್ನೂ ಕೆಲವರು ಸಹಾಯ ಹಸ್ತ ನೀಡಿದರು. ಆರಂಭದಲ್ಲಿ ಸಾಮಾನ್ಯ ಪ್ಯಾಡ್ ಗಳನ್ನೇ ವಿತರಿಸುವ ಬಗ್ಗೆ ಯೋಚನೆ ಬಂದಿತ್ತಾದರೂ ಪ್ಯಾಡ್ ಗಳಿಂದ ಪರಿಸರ ಹಾನಿ ಹಾಗೂ ಸಾಂಕ್ರಾಮಿಕ ರೋಗಗಳು ಅದರಲ್ಲಿಯೂ ಈ ನೆರೆ ಸಂದರ್ಭದಲ್ಲಿ ಹೆಚ್ಚು. ಹೀಗಾಗಿ ಅಕ್ಕತಂಗಿ, ಅವ್ವಂದಿರ ಆರೋಗ್ಯದ ದೃಷ್ಟಿಯಿಂದ ಪರಿಸರಕ್ಕೆ ಹಾನಿಯಾಗದಂತೆ ಈ ಬಟ್ಟಲುಗಳನ್ನೇ ನೀಡುವ ಯೋಚನೆ ಹೊಳೆಯಿತು ಎಂದು ಸಂಜ್ಯೋತಿ ಯುಎನ್‍ಐ ಕನ್ನಡ ಸುದ್ದಿ ಸಂಸ್ಥೆಗೆ ಹೇಳಿದರು.
ಅಷ್ಟಕ್ಕೂ ಈ ಮುಟ್ಟಿನ ಬಟ್ಟಲು ಬಳಕೆ 1930 ರಲ್ಲಿಯೇ ಬೆಳಕಿಗೆ ಬಂದಿದ್ದರೂ ನಮ್ಮ ರಾಜ್ಯದಲ್ಲಿ ಮಾತ್ರ ಇದು ಎಲ್ಲೋ ಬೆರಳೇಣಿಕೆಯಷ್ಟು ಸಹೋದರಿಯರು ಮಾತ್ರ ಬಳಸುತ್ತಿದ್ದಾರೆ. ಅದಿರಲಿ, ಈ ತಂಡ ಮೆಡಿಕೇಟೆಡ್ ಒಳ್ಳೆಯ ಸರ್ಟಿಫಿಕೇಷನ್ ಆಗಿರುವ 1 ಸಾವಿರ ಕಪ್ ಗಳನ್ನು ವಿತರಿಸುವ ಉದ್ದೇಶ ಹೊಂದಿದ್ದು, ಇಲ್ಲಿಯವರೆಗೂ 700 ಕ್ಕೂ ಹೆಚ್ಚು ಕಪ್ ಗಳನ್ನು ನೆರೆ ಸಂತ್ರಸ್ತ ಭಾಗಗಳಾದ ರೋಣಾ ಗದಗ ರಬಕವಿ ಮೂಡಿಗೆರೆ ಹೆಚ್.ಡಿ.ಕೋಟೆ,ಪೊನ್ನಂಪೇಟೆ ಹಾಡಿಗಳಲ್ಲಿ ತೀರ್ಥಹಳ್ಳಿ ಶಿವಮೊಗ್ಗ ಮಂಗಳೂರಿನ ಕೆಲವು ಭಾಗಗಳ ಮಹಿಳೆಯರಿಗೆ ವಿತರಿಸಿದ್ದಾರೆ.
ವೈದ್ಯರು ಸಹ ಈ ತಂಡದ ಜೊತೆ ಕೈ ಜೋಡಿಸಿದ್ದು, ಆಯಾ ಭಾಗಗಳ ಮಹಿಳೆಯರಿಂದಲೇ ಕಪ್ ಗಳ ಬಳಕೆ, ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಪ್ರವಾಹದಲ್ಲಿ ಗುಟ್ಟಾಗಿದ್ದ ನೋವನ್ನು ಬಟ್ಟಲಿಗೆ ತಂದು ಸಂತ್ರಸ್ತ ಸಹೋದರಿಯರಿಗೆ ನೆರವಾಗುತ್ತಿರುವ ಈ ಅಭಿಯಾನ ಆರೋಗ್ಯ ರಕ್ಷಣೆಯ ಜೊತೆಗೆ ಮೌಢ್ಯ ನಿವಾರಣೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸಂತ್ರಸ್ತ ಮಹಿಳೆಯರ ವೈಯಕ್ತಿಕ ಆರೋಗ್ಯ ರಕ್ಷಣೆಗೆ ಈ ತಂಡ ಟೊಂಕ ಕಟ್ಟಿರುವುದು ವಿಶೇಷ.
ಯುಎನ್‍ಐ ಯುಎಲ್ ವಿಎನ್ 1852