Sunday, Aug 25 2019 | Time 02:10 Hrs(IST)
Entertainment Share

"ಗ್ಯಾಂಗ್‍ಸ್ಟರ್" ಚಿತ್ರೀಕರಣ ಮುಕ್ತಾಯ

ಬೆಂಗಳೂರು, ಆ 13 (ಯುಎನ್ಐ) ನಕ್ಸಲರ ಬಗೆಗಿನ ನೈಜ ಕಥಾ ಹಂದರ ಹೊಂದಿರುವ “ಗ್ಯಾಂಗ್‍ಸ್ಟರ್´ ಚಿತ್ರೀಕರಣ ಪೂರ್ಣಗೊಳಿಸಿದೆ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಬಾಲಾಜಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ

ಶ್ರೀ ಲಕ್ಷ್ಮೀನರಸಿಂಹ ಎಂಟರ್ ಪ್ರೈಸಸ್ ಲಾಂಛನದಲ್ಲಿ ಸಿ ಎ ವರದರಾಜ್ ನಿರ್ಮಿಸಿರುವ ಚಿತ್ರದಲ್ಲಿ ವಸಿಷ್ಠ ಸಿಂಹ ನಾಯಕರಾಗಿದ್ದು, ಯಲ್ಲಾಪುರ, ತೆಲಂಗಾಣದಲ್ಲಿ ಸುಮಾರು 70 ದಿನಗಳ ಚಿತ್ರೀಕರಣ ನಡೆದಿದೆ

ವರುಣ್ ಕುಮಾರ್ ಸಂಗೀತ, ಸುರೇಶ್ ಭಾರ್ಗವ್ ಛಾಯಾಗ್ರಹಣ, ಕಿಶೋರ್ ಸಂಕಲನ ಹಾಗೂ ನಂದು, ರಾಮು, ಬಾಲಾಜಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ ವಸಿಷ್ಠಸಿಂಹ, ಯಜ್ಞಾ ಶೆಟ್ಟಿ, ಸಂಯುಕ್ತ ಹೊರನಾಡು, ಅರವಿಂದರಾವ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಯುಎನ್ಐ ಎಸ್ಎ ಎಸ್ಎಚ್ 1809

`
More News
ವಿಜ್ಞಾನಿಯಾಗಿದ್ದ ವಿದ್ಯಾ ಈಗ ಗಣಿತಶಾಸ್ತ್ರಜ್ಞೆ !

ವಿಜ್ಞಾನಿಯಾಗಿದ್ದ ವಿದ್ಯಾ ಈಗ ಗಣಿತಶಾಸ್ತ್ರಜ್ಞೆ !

24 Aug 2019 | 2:11 PM

ಮುಂಬೈ 24 ಆಗಸ್ಟ್ (ಯುಎನ್ಐ) ವಿಭಿನ್ನ ಕಥೆಗಳುಳ್ಳ ಮಹಿಳಾ ಪ್ರದಾನ ಚಿತ್ರಗಳಲ್ಲಿ ನಟಿಸಿ ತಮ್ಮದೇ ಛಾಪನ್ನು ಮೂಡಿಸಿದ ಬಾಲಿವುಡ್ ನಟಿ ವಿದ್ಯಾ ಬಾಲನ್ ಈಗ ಮಾನವ ಕಂಪ್ಯೂಟರ್ ಎಂಬ ಖ್ಯಾತಿಯ ಗಣಿತಶಾಸ್ತ್ರಜ್ಞೆ ಶಕುಂತಲಾ ದೇವಿ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ.

 Sharesee more..

ದಕ್ಷಿಣ ಕೊರಿಯಾದಲ್ಲಿ 'ಅಂದಾಧುನ್'

24 Aug 2019 | 1:28 PM

 Sharesee more..