Saturday, Feb 29 2020 | Time 15:03 Hrs(IST)
 • ಭಾರತದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಟೆನಿಸ್ ಸ್ಟಾರ್ ನೊವಾಕ್ ಜೊಕೊವಿಚ್
 • ದೇಶದ ಜನರಿಗಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ; ಪ್ರಧಾನಿ ಮೋದಿ
 • ಕಾಂಗ್ರೆಸ್ ಜತೆ ಜೆಡಿಎಸ್ ವಿಲೀನಗೊಳ್ಳಲು ಸಲಹೆ ನೀಡಿದ್ರಾ ಪ್ರಶಾಂತ್ ಕಿಶೋರ್ ?
 • ಅಕಾಲಿಕವಾಗಿ ಸಾವನ್ನಪ್ಪಿದ ನಾಲ್ವರು ಪತ್ರಕರ್ತರಿಗೆ ಮುಖ್ಯಮಂತ್ರಿಗಳಿಂದ ತಲಾ ೫ ಲಕ್ಷ ಪರಿಹಾರ ಘೋಷಣೆ
 • ದುಬೈ ಟೆನಿಸ್‌ ಚಾಂಪಿಯನ್‌ಶಿಪ್ : ಪ್ರಶಸ್ತಿಗಾಗಿ ಜೊಕೊವಿಚ್, ಸಿಟ್ಸಿಪಸ್ ಕಾದಾಟ
 • ಅಪಾರ್ಟ್‌ಮೆಂಟ್ ಗಳಲ್ಲಿ ಶೌರಶಕ್ತಿ‌ ಫಲಕ ಅಳವಡಿಕೆ ಉತ್ತಮ ಪ್ರಯತ್ನ; ಡಾ ಅಶ್ವತ್ಥನಾರಾಯಣ
 • 10ನೇ ಬಾರಿ ವಿರಾಟ್ ಕೊಹ್ಲಿಯನ್ನು ಕೆಡವಿದ ಟಿಮ್ ಸೌಥಿ
 • ಕೊರೊನಾವೈರಸ್ ಆತಂಕ: ಅಮೆರಿಕದಿಂದ ಆಸಿಯಾನ್ ಶೃಂಗಸಭೆ ಮುಂದೂಡಿಕೆ
 • ಕಾಶ್ಮೀರ ಕಣಿವೆಯಲ್ಲಿ ಕರ್ತವ್ಯಕ್ಕೆ ಗೈರುಹಾಜರಾದ 40 ಜನರ ಅಮಾನತ್ತು
 • ರಜನೀಕಾಂತ್ ಜೊತೆ ಭಾರತೀಯ ಹಜ್ ಅಸೋಸಿಯೇಷನ್ ಅಧ್ಯಕ್ಷ ಮಾತುಕತೆ
 • ಪುಲ್ವಾಮಾ ಪ್ರಕರಣ: ಕಾಶ್ಮೀರದಲ್ಲಿ ಎನ್‌ಐಎ ದಾಳಿ ಮುಂದುವರಿಕೆ
 • ಮಹಿಳಾ ಟಿ20 ವಿಶ್ವಕಪ್: ಕೊನೆಯ ಪಂದ್ಯದಲ್ಲೂ ಭಾರತ ವನಿತೆಯರಿಗೆ ಭರ್ಜರಿ ಜಯ
 • ಮೈಸೂರಿನಲ್ಲಿ ಇಬ್ಬರು ಬಾಂಗ್ಲಾ ದೇಶ ಅಕ್ರಮ ವಲಸಿಗರ ಬಂಧನ
 • ಎರಡನೇ ಟೆಸ್ಟ್: ಭಾರತ 242ಕ್ಕೆ ಆಲೌಟ್ ; ನ್ಯೂಜಿಲೆಂಡ್‌ಗೆ ಮೊದಲ ದಿನದ ಗೌರವ
 • ಪ್ರಧಾನಿ ಆಗಮನಕ್ಕೂ ಮುನ್ನ ಪ್ರಯಾಗ್ ರಾಜ್ ನಲ್ಲಿ ಮೂರು ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣ
business economy Share

‘ಪಹಲ್’ ಯೋಜನೆಯಡಿ ಅಡುಗೆ ಅನಿಲಕ್ಕೆ ಕೇಂದ್ರದಿಂದ ಸಬ್ಸಿಡಿ

ನವದೆಹಲಿ, ಫೆಬ್ರವರಿ 13 (ಯುಎನ್‌ಐ) – ಅಡುಗೆ ಅನಿಲ ದರವನ್ನು ತೀವ್ರ ಹೆಚ್ಚಳ ಮಾಡಿದ ಒಂದು ದಿನದ ನಂತರ, ಪಹಲ್ (ಡಿಬಿಟಿಎಲ್) ಯೋಜನೆಯಡಿ ಗ್ರಾಹಕರಿಗೆ ವಿತರಿಸಲಾಗುವ ಅಡುಗೆ ಅನಿಲಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ಮಾಡುತ್ತಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಗುರುವಾರ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದಿನ ತಿಂಗಳಿನ ಅಂತಾರಾಷ್ಟ್ರೀಯ ಮಾರುಕಟ್ಟೆ ದರವನ್ನು ಆಧರಿಸಿ, ಅಡುಗೆ ಅನಿಲ ದರವನ್ನು ಪರಿಷ್ಕರಿಸಲಾಗಿದೆ ಎಂದು ಸಚಿವಾಯ ಹೇಳಿದೆ.

‘ಪಹಲ್ (ಡಿಬಿಟಿಎಲ್) ಯೋಜನೆಯಡಿ ಗ್ರಾಹಕರಿಗೆ ವಿತರಿಸಲಾಗುವ ಅಡುಗೆ ಅನಿಲಕ್ಕೆ ಭಾರತ ಸರ್ಕಾರವು ಸಬ್ಸಿಡಿ ಸಬ್ಸಿಡಿ ಒದಗಿಸುತ್ತಿದೆ. ಪಹಲ್ ಗ್ರಾಹಕರಿಗೆ ನೀಡುವ ಸಬ್ಸಿಡಿಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದ್ದು, ಇದು ಮಾರುಕಟ್ಟೆ ನಿರ್ಧರಿಸಿದ ದರ ಮತ್ತು ಸಬ್ಸಿಡಿ ದರದ ನಡುವಿನ ವ್ಯತ್ಯಾಸವಾಗಿದೆ.’ ಎಂದು ಸಚಿವಾಲಯ ಹೇಳಿದೆ.
ಸದ್ಯ ದೇಶದ ಸುಮಾರು ಶೇ97ರಷ್ಟು ಪ್ರದೇಶದಲ್ಲಿ ಅಡುಗೆ ಅನಿಲ ಜಾಲವಿದ್ದು, 27.76 ಕೋಟಿಗೂ ಹೆಚ್ಚು ಸಂಪರ್ಕಗಳನ್ನು ಒದಗಿಸಲಾಗಿದೆ. ಸುಮಾರು 27.76 ಕೋಟಿ ಗ್ರಾಹಕರ ಪೈಕಿ ಸುಮಾರು 26.12 ಕೋಟಿ ಗ್ರಾಹಕರಿಗೆ ಸಬ್ಸಿಡಿ ಹೆಚ್ಚಿಸುವ ಮೂಲಕ ಸರ್ಕಾರ ದರ ಹೆಚ್ಚಳವನ್ನು ಭರಿಸುತ್ತಿದೆ.

2020 ರ ಜನವರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ಅನಿಲದ ದರ ಒಂದು ಮೆಟ್ರಿಕ್ ಟನ್ ಗೆ 448 ಡಾಲರ್ ನಿಂದ 567 ಡಾಲರ್ ಗೆ ತೀವ್ರ ಏರಿಕೆಯಾಗಿದ್ದು, ಇದರಿಂದ ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ದರ 144.50 ರೂ.ನಷ್ಟು ಏರಿಕೆಯಾಗಿದೆ.

ದೇಶೀಯ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‌ ದರ ಪ್ರತಿ ಸಿಲಿಂಡರ್ ಗೆ 714 ರೂ.ನಿಂದ 858.50 ರೂ.ಗೆ ಏರಿಕೆಯಾಗಿದೆ. ಸಬ್ಸಿಡಿ ನೀಡುವ ಗ್ರಾಹಕರಿಗೆ ಸಬ್ಸಿಡಿ ಮೊತ್ತ ರೂ. 153.86 ರಿಂದ 291.48 ರೂ.ಗೆ ಏರಿಕೆಯಾಗಿದೆ.

ಪ್ರಧಾನ ಮಂತ್ರಿ ಉಜ್ವಾಲಾ ಯೋಜನೆ (ಪಿಎಂಯುವೈ) ಗ್ರಾಹಕರಿಗೆ, ಸರ್ಕಾರ ನೀಡುವ ಸಬ್ಸಿಡಿ ಪ್ರತಿ ಸಿಲಿಂಡರ್ ಗೆ ರೂ. 174.86 ರಿಂದ 312.48 ರೂ. ಗೆ ಏರಿಕೆಯಾಗಿದೆ. ಆದ್ದರಿಂದ, ದರ ಏರಿಕೆ ಪರಿಣಾಮವನ್ನು ಸರ್ಕಾರ ಸಬ್ಸಿಡಿ ಮೊತ್ತ ಹೆಚ್ಚಿಸುವುದರೊಂದಿಗೆ ಭರಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಯುಎನ್ಐ ಎಸ್ಎಲ್ಎಸ್ 1844
More News
ಶೇ 100ರಷ್ಟು ಭೂಸ್ವಾಧೀನದ ಯೋಜನೆಗಳಲ್ಲಿ ಹೂಡಿಕೆಗೆ ಆದ್ಯತೆ ನೀಡಲು ರೈಲ್ವೆ ಇಲಾಖೆಗೆ ಗೋಯಲ್ ಸೂಚನೆ

ಶೇ 100ರಷ್ಟು ಭೂಸ್ವಾಧೀನದ ಯೋಜನೆಗಳಲ್ಲಿ ಹೂಡಿಕೆಗೆ ಆದ್ಯತೆ ನೀಡಲು ರೈಲ್ವೆ ಇಲಾಖೆಗೆ ಗೋಯಲ್ ಸೂಚನೆ

28 Feb 2020 | 7:23 PM

ನವದೆಹಲಿ, ಫೆ 28(ಯುಎನ್ಐ)- ರಾಜ್ಯಗಳು ಶೇ100 ರಷ್ಟು ಭೂಸ್ವಾಧೀನ ಒದಗಿಸುವ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆದ್ಯತೆ ನೀಡುವಂತೆ ರೈಲ್ವೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ರೈಲ್ವೆ ಇಲಾಖೆಗೆ ಸೂಚಿಸಿದ್ದಾರೆ.

 Sharesee more..
ಸೆನ್ಸೆಕ್ಸ್ 1,101 ಅಂಕ ಪತನ: 11,300 ರ ಮಟ್ಟಕ್ಕಿಂತ ಕೆಳಗಿಳಿದ ನಿಫ್ಟಿ

ಸೆನ್ಸೆಕ್ಸ್ 1,101 ಅಂಕ ಪತನ: 11,300 ರ ಮಟ್ಟಕ್ಕಿಂತ ಕೆಳಗಿಳಿದ ನಿಫ್ಟಿ

28 Feb 2020 | 6:44 PM

ಮುಂಬೈ, ಫೆ 28 (ಯುಎನ್‌ಐ) ಕೋರೊನವೈರಸ್ ಭೀತಿಯ ನಡುವೆ ಜಾಗತಿಕ ಷೇರುಗಳ ಕುಸಿತದ ನಂತರ ಮುಂಬೈ ಷೇರು ಪೇಟೆ ಸೂಚ್ಯಂಕ, ಸೆನ್ಸೆಕ್ಸ್ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ 1,101 ಅಂಕ ಪತನಗೊಂಡು 38,600 ಕ್ಕೆ ಇಳಿದಿದೆ.

 Sharesee more..