Thursday, Nov 21 2019 | Time 22:31 Hrs(IST)
 • ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್‌ ಗೆ ಗಾಯ
 • ತೃತೀಯ ಲಿಂಗಿ ಹಕ್ಕು ಮಸೂದೆ: ಆಯ್ಕೆ ಸಮಿತಿಗೆ ಕಳುಹಿಸಲು ಸದಸ್ಯರ ಬಿಗಿಪಟ್ಟು
 • ರಾಹುಲ್, ಪಾಂಡೆ ಅಬ್ಬರ: ಕರ್ನಾಟಕಕ್ಕೆ ಭರ್ಜರಿ ಜಯ
 • ವಿಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ
 • ಕರ್ನಾಟಕಕ್ಕೆೆ 159 ರನ್ ಗುರಿ ನೀಡಿದ ತಮಿಳುನಾಡು
 • ಉಪ ಚುನಾವಣೆಗೆ ಅಖಾಡ ಸಜ್ಜು: 53 ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್, 165 ಅಭ್ಯರ್ಥಿಗಳು ಕಣದಲ್ಲಿ: ಸಂಜೀವ್ ಕುಮಾರ್
 • ಟಿ-20 ಮಹಿಳಾ ಶ್ರೇಯಾಂಕ: ರೊಡ್ರಿಗಸ್, ರಾಧ ಯಾದವ್‌ಗೆ ಬಂಪರ್
 • ದಾದಾ ದಾಖಲೆ ಸನಿಹದಲ್ಲಿ ವಿರಾಟ್ ಕೊಹ್ಲಿ
 • ಬಿಜೆಪಿ ಒತ್ತಡದಿಂದ ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ:ಹೆಚ್ ಡಿ ದೇವೇಗೌಡ
 • ಎಲ್ಲ ಬ್ಯಾಟ್ಸ್‌‌ಮನ್‌ಗಳು ಶೂನ್ಯಕ್ಕೆೆ ಔಟ್ ! : ಶಾಲಾ ಟೂರ್ನಿಯಲ್ಲಿ ಅನಗತ್ಯ ದಾಖಲೆ
 • ನಗರಗಳ ಕಾಡುಗಳೇ ನಗರಗಳ ಶ್ವಾಸಕೋಶ: ಜಾವಡೇಕರ್
 • ಮೀನುಗಾರಿಕೆ ನಿಯಂತ್ರಣ ನೀತಿ ತಿದ್ದುಪಡಿಗೆ ಪ್ರಸ್ತಾವನೆ ; ಸಚಿವ ಶ್ರೀನಿವಾಸ ಪೂಜಾರಿ
 • ಕೊರಿಯಾ ಓಪನ್: ಎರಡನೇ ಸುತ್ತಿನಲ್ಲಿ ಶ್ರೀಕಾಂತ್, ಸಮೀರ್‌ಗೆ ಸೋಲು
 • ರೋಗಿ, ಬಸುರಿ, ಬಾಣಂತಿಯರಿಗಿಲ್ಲಿ ಜೋಲಿಯೇ ಜೀವ, ಸೌರ ವಿದ್ಯುತ್ ಜೀವ ರಕ್ಷಕ: ಮಲೆಮಹದೇಶ್ವರ ಬೆಟ್ಟದ ಗ್ರಾಮಗಳ ಬದುಕು ಬೆಳಗಿಸಿದ ಸೆಲ್ಕೋ
 • ಅರಣ್ಯ ಕಾಯ್ದೆ ಕುರಿತು ಜಾವಡೇಕರ್ ಹೇಳಿಕೆ ಚುನಾವಣಾ ಆಯೋಗದಿಂದ ಪರಿಶೀಲನೆ
National Share

‘ಬುಲ್‍ಬುಲ್‍’ ಚಂಡಮಾರುತ: ಸಂಪುಟ ಕಾರ್ಯದರ್ಶಿಯಿಂದ ಸನ್ನದ್ಧತೆಗಳ ಪರಿಶೀಲನೆ

ನವದೆಹಲಿ, ನ 8(ಯುಎನ್‍ಐ)-ಬಂಗಾಳಕೊಲ್ಲಿಯಲ್ಲಿ ಎದ್ದಿರುವ ‘ಬುಲ್‍ಬುಲ್‍’ ಚಂಡಮಾರುತದಿಂದ ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಶುಕ್ರವಾರ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಭೀಕರ ಚಂಡಮಾರುತ ಎದುರಿಸಲು ಸನ್ನದ್ಧತೆಗಳ ಬಗ್ಗೆ ಪರಿಶೀಲಿಸಿದರು.

ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತ, ಸದ್ಯ ತೀವ್ರಗೊಂಡಿದ್ದು, ನವೆಂಬರ್ 10 ರ ಮುಂಜಾನೆ ಪಶ್ಚಿಮ ಬಂಗಾಳ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

110-120 ಕಿ.ಮೀ ವೇಗದ ಗಾಳಿಯೊಂದಿಗೆ ಕೂಡಿದ ಭಾರಿ ಮಳೆಯಿಂದ 1.5 ಮೀಟರ್ ಎತ್ತರಕ್ಕೆ ಸಮುದ್ರ ಅಲೆಗಳ ಉಬ್ಬರ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಎಸ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ಸೇವಾ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಮತ್ತು ಒಡಿಶಾ ಸರ್ಕಾರಗಳ ಅಧಿಕಾರಿಗಳು ತಿಳಿಸಿದ್ದಾರೆ.

ಚಂಡಮಾರುತದ ಹಿನ್ನೆಲೆಯಲ್ಲಿ ಮೀನುಗಾರಿಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.ತಗ್ಗು ಪ್ರದೇಶದ ಜನರನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಎನ್‌ಡಿಆರ್‌ಎಫ್‌ನ 14 ತಂಡಗಳನ್ನು ನಿಯೋಜಿಸಲಾಗಿದ್ದು, ರಾಜ್ಯಗಳ ಕೋರಿಕೆಯ ಮೇರೆಗೆ ಹೆಚ್ಚುವರಿ ತಂಡಗಳನ್ನು ನಿಯೋಜಿಸಲಾಗುತ್ತಿದೆ. ಕರಾವಳಿ ಭದ್ರತಾ ಪಡೆ, ಭಾರತೀಯ ನೌಕಾಪಡೆಯ ತಂಡಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಸೇನೆ ಮತ್ತು ವಾಯುಪಡೆಗಳು ಸನ್ನದ್ಧವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಪುಟ ಕಾರ್ಯದರ್ಶಿಯವರು, ಸದ್ಯದ ಪರಿಸ್ಥಿತಿ ಹಾಗೂ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಸನ್ನದ್ಧತೆಯನ್ನು ಸಹ ಪರಿಶೀಲಿಸಿದರು. ಅಗತ್ಯವಿರುವ ಕಡೆ ತಕ್ಷಣ ಸಹಾಯವನ್ನು ಒದಗಿಸುವಂತೆ ಸೂಚಿಸಿದರು.

ಸದ್ಯ, ಸಮುದ್ರದಲ್ಲಿರುವ ಎಲ್ಲ ಮೀನುಗಾರರನ್ನು ಮತ್ತೆ ದಡಕ್ಕೆ ಕರೆತರಲು ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸಂಪುಟ ಕಾರ್ಯದರ್ಶಿ ಸೂಚಿಸಿದ್ದಾರೆ.
ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್ 1949
More News
ದೇಶಾದ್ಯಂತ ೨೧ಯುಐಡಿಎಐ ಆಧಾರ್ ಸೇವಾ ಕೇಂದ್ರಗಳ ಕಾರ್ಯನಿರ್ವಹಣೆ

ದೇಶಾದ್ಯಂತ ೨೧ಯುಐಡಿಎಐ ಆಧಾರ್ ಸೇವಾ ಕೇಂದ್ರಗಳ ಕಾರ್ಯನಿರ್ವಹಣೆ

21 Nov 2019 | 9:00 PM

ನವದೆಹಲಿ, ನ ೨೧ (ಯುಎನ್‌ಐ) ದೇಶಾದ್ಯಂತ ೧೧೪ ಸ್ಟ್ಯಾಂಡ್ ಅಲೋನ್ ಆಧಾರ್ ದಾಖಲಾತಿ ಮತ್ತು ನವೀಕರಣ ಕೇಂದ್ರಗಳನ್ನು ತೆರೆಯುವ ಯೋಜನೆಯ ಭಾಗವಾಗಿ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ೨೧ ಆಧಾರ್ ಸೇವಾ ಕೇಂದ್ರಗಳನ್ನು (ಎಎಸ್‌ಕೆ) ಕಾರ್ಯರೂಪಕ್ಕೆ ತಂದಿದೆ.

 Sharesee more..
ಐಎನ್ ಎಕ್ಸ್ ಮೀಡಿಯಾ; ಜೈಲಿನಲ್ಲಿ ಚಿದಂಬರಂ ವಿಚಾರಣೆಗೆ ಸುಪ್ರೀಂ ಅನುಮತಿ

ಐಎನ್ ಎಕ್ಸ್ ಮೀಡಿಯಾ; ಜೈಲಿನಲ್ಲಿ ಚಿದಂಬರಂ ವಿಚಾರಣೆಗೆ ಸುಪ್ರೀಂ ಅನುಮತಿ

21 Nov 2019 | 8:18 PM

ನವದೆಹಲಿ, ನ 21 (ಯುಎನ್ಐ) ಐಎಸ್ ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರ ವಿಚಾರಣೆ ನಡೆಸಲು ಸಿಬಿಐ ವಿಶೇಷ ನ್ಯಾಯಾಧೀಶರಾದ ಅಜಯ್ ಕುಮಾರ್ ಕುಹಾರ್ ಅನುಮತಿ ನೀಡಿದ್ದಾರೆ.

 Sharesee more..
ನಗರಗಳ ಕಾಡುಗಳೇ ನಗರಗಳ ಶ್ವಾಸಕೋಶ: ಜಾವಡೇಕರ್

ನಗರಗಳ ಕಾಡುಗಳೇ ನಗರಗಳ ಶ್ವಾಸಕೋಶ: ಜಾವಡೇಕರ್

21 Nov 2019 | 8:08 PM

ನವದೆಹಲಿ, ನವೆಂಬರ್ 21( ಯುಎನ್‌ಐ) ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಹಾವಳಿ ತಡೆಯಲು ಜನರ ಸಹಕಾರ ಬಹಳ ಅಗತ್ಯ, ನಗರಗಳಲ್ಲಿ ಹೆಚ್ಚು ಗಿಡ ಮರ ಬೆಳಸಿದರೆ ಅವುಗಳೇ ನಗರಗಳ ಶ್ವಾಸಕೋಶವಾಗಿ ಉತ್ತಮ ಬದುಕಿಗೆ ಮುನ್ನಡಿ ಬರೆಯಲಿವೆ ಎಂದು ಪರಿಸರ, ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

 Sharesee more..
ರೋಹಿಂಗ್ಯಾ, ಬಾಂಗ್ಲಾ ವಲಸಿಗರ ಗಡೀಪಾರು ಕೋರಿ ಅರ್ಜಿ: 4 ವಾರವರೆಗೆ ಮುಂದೂಡಿದ ಸುಪ್ರೀಂಕೋರ್ಟ್‌

ರೋಹಿಂಗ್ಯಾ, ಬಾಂಗ್ಲಾ ವಲಸಿಗರ ಗಡೀಪಾರು ಕೋರಿ ಅರ್ಜಿ: 4 ವಾರವರೆಗೆ ಮುಂದೂಡಿದ ಸುಪ್ರೀಂಕೋರ್ಟ್‌

21 Nov 2019 | 6:01 PM

ನವದೆಹಲಿ, ನ.21 (ಯುಎನ್ಐ) ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳು ಸೇರಿದಂತೆ ಎಲ್ಲಾ ಅಕ್ರಮ ವಲಸಿಗರು ಮತ್ತು ಒಳನುಸುಳುಕೋರರನ್ನು ಗುರುತಿಸಿ ಅವರನ್ನು ಗಡೀಪಾರು ಮಾಡುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಲ್ಕು ವಾರಗಳವರೆಗೆ ಮುಂದೂಡಿದೆ.

 Sharesee more..