Saturday, Nov 23 2019 | Time 04:17 Hrs(IST)
  • ಜಾರ್ಖಂಡ್: ಲತೇಹಾರ್‌ನಲ್ಲಿ ನಕ್ಸಲರೊಂದಿಗೆ ನಡೆದ ಘರ್ಷಣೆಯಲ್ಲಿ ಪೊಲೀಸ್ ಸಬ್‍ ಇನ್ಸ್ ಪೆಕ್ಟರ್‌ ಹುತಾತ್ಮ
  • ಆಸ್ಟ್ರೇಲಿಯಾದ ಇಬ್ಬರು ಸಚಿವರೊಂದಿಗೆ ಪೋಖ್ರಿಯಾಲ್‍ ದ್ವಿಪಕ್ಷೀಯ ಮಾತುಕತೆ
Entertainment Share

'ಭರ್ಜರಿ’ಯಾಗಿ ಸದ್ದು ಮಾಡುತ್ತಿದೆ 'ಬಹದ್ದೂರ್’ ಮದುವೆಯ ಕರೆಯೋಲೆ! ಆಮಂತ್ರಣ ಪತ್ರಿಕೆಯೊಂದಿಗೆ ಇರೋದು ಏನು?

ಬೆಂಗಳೂರು, ನ ೦೮ (ಯುಎನ್‌ಐ) ಚಂದನವನದ ಖ್ಯಾತ ನಟ ಅರ್ಜುನ ಸರ್ಜಾ ಅವರ ಮುದ್ದಿನ ಸೋದರಳಿಯ, ಭರ್ಜರಿ ಹುಡುಗ ಧೃವ ಸರ್ಜಾ ಹಸೆಮಣೆ ಏರಲು ಸಜ್ಜಾಗಿದ್ದಾರೆ
ಇತ್ತೀಚೆಗೆ ಹಿಂದೂ ಸಂಪ್ರದಾಯದಂತೆ ಗೋಪೂಜೆ ನೆರವೇರಿಸುವ ಮೂಲಕ ಬಾಲ್ಯದ ಗೆಳತಿ ಪ್ರೇರಣಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಬಹದೂರ್ ಇದೇ ೨೪ರಂದು ಭಾನುವಾರ ಹಸೆಮಣೆ ಏರಲಿದ್ದಾರೆ.
ಮದುವೆಯ ಆಮಂತ್ರಣ ಪತ್ರಿಕೆ ಹಂಚುವ ಕೆಲಸ ಶುರುವಾಗಿದ್ದು, ಹಲವು ವಿಶೇಷತೆಗಳಿರುವ ಕರೆಯೋಲೆ ವೈರಲ್ ಆಗಿದೆ.
ಆಮಂತ್ರಣ ಪತ್ರಿಕೆಯ ಬಾಕ್ಸ್ ನಲ್ಲಿ ಅರಿಶಿಣ ಕುಂಕುಮದ ಭರಣಿ, ಅರಿಶಿಣದ ಕೊಂಬು, ಬಳೆಗಳನ್ನು ಇಡಲಾಗಿದೆ. ಪತ್ರಿಕೆಯ ಮೊದಲ ಪುಟದಲ್ಲಿ ಭಜರಂಗ್ ಬಲಿ ಹನುಮಾನ್ ಚಿತ್ರವಿದ್ದರೆ, ಎರಡನೇ ಪುಟದಲ್ಲಿ ಧೃವ ಹಾಗೂ ಪ್ರೇರಣಾ ಅವರ ಭಾವವಿತ್ರವಿದ್ದು, ನಂತರ ಮದುವೆಯ ಟಿಪ್ಪಣಿ ಮುದ್ರಿತವಾಗಿದೆ.
ಇದೇ ತಿಂಗಳ ೨೪ರಂದು ಬೆಂಗಳೂರಿನ ಜೆಪಿ ನಗರದಲ್ಲಿರುವ ಪ್ರತಿಷ್ಠಿತ ಬ್ರಿಗೇಡ್ ಮಿಲೇನಿಯಮ್ ಆವರಣದಲ್ಲಿರುವ ಬೃಂದಾವನ ಸಂಸ್ಕೃತಿ ಸೆಂಟರ್ ನಲ್ಲಿ ಧೃವ ಸರ್ಜಾ ಹಾಗೂ ಪ್ರೇರಣಾ ಮದುವೆ ನಡೆಯಲಿದೆ.
ಯುಎನ್‌ಐ ಎಸ್‌ಎ ವಿಎನ್ ೧೮೧೨