Wednesday, Jul 17 2019 | Time 12:30 Hrs(IST)
  • ಇಂಡೋನೇಷ್ಯಾ ಓಪನ್‌: ಸಿಂಧು, ಶ್ರೀಕಾಂತ್‌ ಶುಭಾರಂಭ
  • ಬಂಡಾಯ ಶಾಸಕರು ವಿಶ್ವಾಸ ಮತಯಾಚನೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ: ಸುಪ್ರೀಂ ತೀರ್ಪು
  • ನರೇಂದರ್‌ : ಅಂತಾರಾಷ್ಟ್ರೀಯ ಗೋಲು ಗಳಿಸಿದ ಭಾರತದ ಎರಡನೇ ಅತಿ ಕಿರಿಯ ಆಟಗಾರ
  • ನಾಲ್ಕೈದು ದಿನಗಳಲ್ಲಿ ಬಿಜೆಪಿ ಸರ್ಕಾರಅಸ್ಥಿತ್ವಕ್ಕೆ : ಬಿಎಸ್ ಯಡಿಯೂರಪ್ಪ ವಿಶ್ವಾಸ
Sports Share

'ಮೇರಿ ಕೋಮ್ ನನಗೆ ಸ್ಪೂರ್ತಿ': ಛೆಟ್ರಿ

ನವದೆಹಲಿ, ಜು 11 (ಯುಎನ್ಐ)- ಒಲಿಂಪಿಕ್ಸ್ ನಲ್ಲಿ ಪದಕ ವಿಜೇತೆ ಮೇರಿ ಕೋಮ್ ಅವರು ನನಗೆ ಸ್ಪೂರ್ತಿ ಎಂದು ಭಾರತ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಸುನಿಲ್ ಛೆಟ್ರಿ ತಿಳಿಸಿದ್ದಾರೆ.
ಎಐಎಫ್‌ಎಫ್ ಫುಟ್ಬಾಲ್ ಆಟಗಾರ ಪ್ರಶಸ್ತಿಗೆ ಆಯ್ಕೆಯಾದ ಛೆಟ್ರಿ, ಪ್ರಶಸ್ತಿ ಆಟದ ಗುಣಮಟ್ಟ ಹೆಚ್ಚಿಸಲು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದ್ದಾರೆ.
ಛೆಟ್ರಿ ಅವರು 2007, 2011, 2013, 2014 ಹಾಗೂ 2017ರಲ್ಲಿ ಎಐಎಫ್‌ಎಫ್ ಫುಟ್ಬಾಲ್ ಪ್ರಶಸ್ತಿ ಪಡೆದಿದ್ದರು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗೋಲು ಬಾರಿಸಿದ ಲೆಕ್ಕಾಚಾರದಲ್ಲಿ ಛೆಟ್ರಿ ಅವರು, ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರಿಗಿಂತಲೂ ಮುಂಚೂಣಿಯಲಿದ್ದಾರೆ.
' ದೇಶದ ಪರ ಆಟ ಆಡುತ್ತಿರುವುದ ಖುಷಿ ನೀಡಿದೆ. ನಾನು ದೇಶದ ಪರ 100 ಪಂದ್ಯಗಳನ್ನು ಆಡುವ ಬಗ್ಗೆ, ಆರನೇ ಪ್ರಶಸ್ತಿಯ ಪಡೆಯುವ ಬಗ್ಗೆ ಯೋಚಿಸಿಲ್ಲ. ಯಾವಾಗ ನಿವೃತ್ತಿ ಹೊಂದುತ್ತೇನೊ ಆಗಾ ೀ ಬಗ್ಗೆ ವಿಚಾರಿಸುವೆ' ಎಂದಿದ್ದಾರೆ.
ಯುಎನ್ಐ ವಿಎನ್ಎಲ್ ಕೆಎಸ್ವಿ 2239