Monday, Aug 2 2021 | Time 14:06 Hrs(IST)
  • ಸಂಪುಟ : ಮೊದಲ ಹಂತದಲ್ಲಿ 15 ಸಚಿವರ ಪ್ರಮಾಣ ವಚನ ಸಂಭವ
  • ಕೊರೋನ ಅನಾಹುತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ : ಸಿದ್ದರಾಮಯ್ಯ
  • ಮೇಲ್ಮನೆ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪರ ಮಠಾಧೀಶರು ವಕಾಲತ್ತು
  • ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು
  • ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು
  • ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
Entertainment Share

"ಸಲ್ಮಾನ್‌ ಗೆ ದುಬೈನಲ್ಲಿ ಪತ್ನಿ, 17 ವರ್ಷದ ಮಗಳಿದ್ದಾಳೆ" ನಟನ ಕಾಮೆಂಟ್‌

ಮುಂಬೈ, ಜುಲೈ 21(ಯುಎನ್‌ ಐ) ಅರ್ಬಾಜ್ ಖಾನ್ ತಮ್ಮ ಟಾಕ್ ಶೋ 'ಪಿಂಚ್' ಹೊಸ ಆವೃತ್ತಿಯ ಮೂಲಕ ಮನರಂಜನೆ ನೀಡಲು ಸಜ್ಜಾಗಿದ್ದಾರೆ. ಪ್ರಸ್ತುತ ಈ ಶೋ ಎರಡನೇ ಆವೃತ್ತಿ ನಡೆಯುತ್ತಿದೆ. ಇದರ ಮೊದಲ ಕಂತು ಜುಲೈ 21 ರಂದು ಪ್ರಸಾರಗೊಂಡಿತು. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ದ ಬಂದಿರುವಂತಹ ಟ್ರೋಲಿಂಗ್‌ಗಳಿಗೆ ಸೆಲೆಬ್ರಿಟಿಗಳು ಉತ್ತರ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮದ ಮೊದಲ ಅತಿಥಿಯಾಗಿ ಬಾಲಿವುಡ್ ಸೂಪರ್‌ ಸ್ಟಾರ್‌ ಅರ್ಬಾಜ್ ಖಾನ್ ಅವರ ಸಹೋದರ ಸಲ್ಮಾನ್ ಖಾನ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಲ್ಲು ಭಾಯ್ ತಮ್ಮ ವಯಸ್ಸು, ಸಿನಿಮಾಗಳು. ಜೀವನದ ಬಗ್ಗೆ ಬಂದಿರುವ ಗಾಸಿಪ್‌ಗಳಿಗೆ ಉತ್ತರಿಸಿದರು.
ಈ ಕ್ರಮವಾಗಿ, ಹಿಂದೆ ಟ್ವಿಟ್ಟರ್ ಬಳಕೆದಾರರೊಬ್ಬರು ಸಲ್ಮಾನ್ ಅವರಿಗೆ ದುಬಾಯ್‌ ನಲ್ಲಿ ನೂರ್‌ ಎಂಬ ಪತ್ನಿ, 17 ವರ್ಷ ಮಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿ ಪೋಸ್ಟ್‌ ಮಾಡಿದ್ದ ಟ್ವೀಟ್‌ ಪ್ರಸ್ತಾಪಿಸಿ ಇದು ಇದು ನಿಜವೇ ಎಂದು ಪ್ರಶ್ನಿಸಿದರು. ಇದಕ್ಕೆ ಸಲ್ಮಾನ್‌ ಉತ್ತರಿಸಿ.. ‘ಈ ಜನರಿಗೆ ಮಾಹಿತಿ ಚೆನ್ನಾಗಿ ಲಭ್ಯವಾಗುತ್ತಿದೆ. ಆದರೆ, ನಿಜಕ್ಕೂ ಇವು ನನಗೆ ಸಂಬಂಧಿಸದ ವಿಷಯಗಳು, ಅವರು ಯಾರ ಬಗ್ಗೆ ಮಾತನಾಡಿದ್ದಾರೆಂದು ನನಗೆ ತಿಳಿದಿಲ್ಲ. ನಾನು ಇದಕ್ಕೆ ಉತ್ತರಿಸಬೇಕೆಂದು ಅವರು ಬಯಸುತ್ತಿದ್ದಾರೆಯೇ.. ನನಗೆ ಪತ್ನಿ ಇಲ್ಲ, ನಾನು ಹಿಂದೂಸ್ತಾನ್, ಗ್ಯಾಲಕ್ಸಿ ಅಪಾರ್ಟ್ಮೆಂಟ್‌ ನಲ್ಲಿ ವಾಸಿಸುತ್ತಿದ್ದೇನೆ. ನನ್ನ ತಂದೆ ಕೂಡ ನನ್ನ ಮನೆಯ ಮೇಲೆ ವಾಸಿಸುತ್ತಿದ್ದಾರೆ. ಇದು ದೇಶದಲ್ಲಿರುವ ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಉತ್ತರಿಸಿದ್ದಾರೆ.
ಆದೇ ರೀತಿ ಮತ್ತೊಂದು ಟ್ವೀಟ್‌ ಅನ್ನು ಅರ್ಬಾಜ್ ಓದಿ ಹೇಳಿದರು. ಅದರಲ್ಲಿ .. ಸಲ್ಮಾನ್ ನಕಲಿ ವ್ಯಕ್ತಿ. ಆತ ಒಳ್ಳೆಯವನಂತೆ ನಟಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಲ್ಮಾನ್ ಪ್ರತಿಕ್ರಿಯಿಸಿ, ಅತನಿಗೆ ಎಲ್ಲೋ ಕೆಟ್ಟ ಅನುಭವ ಎದುರಾಗಿದೆ. ಒಂದು ವೇಳೆ ಆತನ ಹೆಂಡತಿ ನನ್ನನ್ನು ಹೊಗಳಿರಬೇಕು. ಇಲ್ಲವೇ ಆತನ ಮಗಳು ನನ್ನ ಸಿನಿಮಾ ತೋರಿಸುವಂತೆ ಒತ್ತಾಯಿಸರಬೇಕು ಎಂದು ಉತ್ತರಿಸಿದರು. ಮತ್ತೊಂದೆಡೆ, ಹಿಂದಿ ಬಿಗ್ ಬಾಸ್ ನ 15 ನೇ ಆವೃತ್ತಿಗೆ ಸಲ್ಮಾನ್‌ ನಿರೂಪಕರಾಗಿದ್ದಾರೆ, ತಮ್ಮದೇ ಆದ ನಿರೂಪಣಾ ಶೈಲಿಯ ಮೂಲಕ ಭಾಯಜಾನ್‌ ಈ ಆವೃತ್ತಿಯನ್ನು ಆಸಕ್ತಿದಾಯಕವಾಗಿಸಲು ಸಜ್ಜಾಗಿದ್ದಾರೆ.
ಯುಎನ್‌ ಐ ಕೆ ವಿಆರ್‌ 2123
There is no row at position 0.