Monday, Sep 16 2019 | Time 20:15 Hrs(IST)
 • ಐಐಟಿ ದೆಹಲಿ ಜೆಇಇ ( ಅಡ್ವಾನ್ಸ್ಡ್ ) ಪರೀಕ್ಷೆ 2020ರ ಮೇ 17 ಕ್ಕೆ; ಅಮೆರಿಕದಲ್ಲೂ ಪರೀಕ್ಷಾ ಕೇಂದ್ರ
 • ಇಡಿ ಸಮನ್ಸ್ ಪ್ರಶ್ನಿಸಿ ಡಿ ಕೆ ಶಿವಕುಮಾರ್ ಮೇಲ್ಮನವಿ ತೀರ್ಪು ಕಾಯ್ದಿರಿಸಿ ಹೈಕೋರ್ಟ್ ; ನಾಳೆ ತೀರ್ಪು ಸಾಧ್ಯತೆ
 • ಸೇವೆಯಿಂದ ಮಾತ್ರ ಶ್ರೇಷ್ಠ ವೈದ್ಯರಾಗಲು ಸಾಧ್ಯ; ಡಾ ಹರ್ಷವರ್ಧನ್
 • ರಾಷ್ಟ್ರಪತಿ, ಸಾಮಾನ್ಯ ಪ್ರಜೆಗೂ ಒಂದೇ ಕಾನೂನು: ಡಿಸಿಎಂ ಲಕ್ಷ್ಮಣ ಸವದಿ
 • ಕೆಬಿಸಿ; ಕೋಟಿ ರೂಪಾಯಿ ಗೆದ್ದ ಮಧ್ಯಾಹ್ನ ಬಿಸಿಯೂಟ ತಯಾರಿಸುವ ಕಾರ್ಯಕರ್ತೆ
 • ಮತದಾರ ಪಟ್ಟಿ ಪರಿಷ್ಕರಣಾ ಆಂದೋಲನ; ಸೇರ್ಪಡೆ, ತಿದ್ದುಪಡಿಗೆ ಅವಕಾಶ- ಅನಿಲ್ ಕುಮಾರ್
 • ಭಾಷೆ, ಸಂಸ್ಕೃತಿ ಹೆಸರಲ್ಲಿ ಸಂಘರ್ಷ ಸೃಷ್ಟಿಸುವುದು ಬಿಜೆಪಿ ಕೆಲಸ : ದಿನೇಶ್ ಗುಂಡೂರಾವ್
 • ಕಾಂಗ್ರೆಸ್ ಪಕ್ಷ ಮುಳಗುತ್ತಿರುವ ಹಡಗು: ಎಂ ಪಿ ರೇಣುಕಾಚಾರ್ಯ ಲೇವಡಿ
 • ಆಪ್‍ನಿಂದ ವಾರ್ಡ್ ನಿರ್ವಹಣಾ ಕೈಪಿಡಿ ಬಿಡುಗಡೆ
 • ಬಿಬಿಎಂಪಿ ಆಯುಕ್ತರ ಅಧಿಕಾರ ಮೊಟಕು; ವಿಶೇಷ, ಹೆಚ್ಚುವರಿ ಆಯುಕ್ತರಿಗೆ ಹೆಚ್ಚಿನ ಹೊಣೆ- ನಗರಾಭಿವೃದ್ಧಿ ಇಲಾಖೆ ಆದೇಶ
 • ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು
 • ಸರ್ಕಾರದ ಕಿರುಕುಳದಿಂದ ಕೊಡೆಲಾ ಆತ್ಮಹತ್ಯೆ: ಚಂದ್ರಬಾಬು ನಾಯ್ಡು ಆರೋಪ
 • ಕಳುವಾದ ಮೊಬೈಲ್ ಫೊನ್ ಪತ್ತೆಗೆ ಹೊಸ ತಂತ್ರ !
 • ಮೋಟಾರು ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ 19ರಂದು ಬೆಂಗಳೂರು ವಕೀಲರ ಸಂಘದ ಪ್ರತಿಭಟನೆ
 • ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಬೆಂಗಳೂರು ನಗರ ಉಳಿಸಿಕೊಂಡ ಮುಖ್ಯಮಂತ್ರಿ
Entertainment Share

‘ಹಫ್ತಾ’ ಜೂನ್ 21ರಿಂದ ವಸೂಲಿ ಶುರು

ಬೆಂಗಳೂರು, ಜೂನ್ 11 (ಯುಎನ್ಐ) ಪ್ರಕಾಶ್ ಹೆಬ್ಬಾಳ್ ನಿರ್ದೇಶನದಲ್ಲಿ ನಟ ವರ್ಧನ್ ತೀರ್ಥಹಳ್ಳಿ ಮೊದಲ ಬಾರಿ ನಾಯಕನಾಗಿ ನಟಿಸಿರುವ ‘ಹಫ್ತಾ’ ಚಿತ್ರ ಇದೇ ತಿಂಗಳ 21ರಂದು ಬಿಡುಗಡೆಯಾಗಲಿದೆ. ಮಂಗಳವಾರ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು, ಇದೇ ಸಂದರ್ಭದಲ್ಲಿ ಚಿತ್ರ ಬಿಡುಗಡೆಯ ದಿನಾಂಕ ಪ್ರಕಟಿಸಲಾಯಿತು.

ಸೆಂಟಿಮೆಂಟ್ ನಾಟ್ ಅಲೋಡ್ ಎಂಬ ಅಡಿಬರಹ ಹೊಂದಿರುವ ಚಿತ್ರ ಮಾಮೂಲಿ ಭೂಗತ ಲೋಕದ ಕಥೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ ಹಾಗಿಲ್ಲ. ಬಡ ಮಂಗಳಮುಖಿಯರ ಬದುಕಿನ ಹೋರಾಟ, ಬವಣೆಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಹಾಗೂ ಅವರ ಬಗ್ಗೆ ಹಲವು ಜನರಲ್ಲಿರುವ ಕೀಳು ಭಾವನೆ ಹೋಗಲಾಡಿಸುವ ಉದ್ದೇಶವಿದೆ. ಭೂಗತ ಲೋಕದ ಸುಪಾರಿ ಕಥೆಯನ್ನು ವಿಭಿನ್ನ ರೀತಿಯಲ್ಲಿ ಬಿಂಬಿಸಲಾಗಿದೆ” ಎಂದು ನಿರ್ದೇಶಕ ಪ್ರಕಾಶ್ ಹೆಬ್ಬಾಳ್ ತಿಳಿಸಿದ್ದಾರೆ.

ನಾಯಕ ನಟ ವರ್ಧನ್ ಶಾರ್ಪ್ ಶೂಟರ್ ಆಗಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್ ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆಯಂತೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಭಾ ಮಾ ಹರೀಶ್, ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪನವರ ಪುತ್ರಿ ಅನಿತಾ ಬಂಗಾರಪ್ಪ ಮೊದಲಾದವರು ‘ಹಫ್ತಾ’ ಟ್ರೇಲರ್ ವೀಕ್ಷಿಸಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಜೂನ್ 21ರಂದು ಬಿಡುಗಡೆಯಾಗಲಿರುವ ಚಿತ್ರ, ಪ್ರೇಕ್ಷಕರ ಪ್ರೀತಿಯನ್ನು ಎಷ್ಟರಮಟ್ಟಿಗೆ ವಸೂಲಿ ಮಾಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಯುಎನ್ಐ ಎಸ್ಎ ಎಸ್ಎಚ್ 1656