Saturday, Aug 15 2020 | Time 11:29 Hrs(IST)
  • ಆಗಸ್ಟ್ 15 ಎಂದರೆ ನವ ಭಾರತದ ಉದಯದ ದಿನ : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ
  • ಭಾರತೀಯತೆ, ದೇಶಪ್ರೇಮ, ದೇಶಭಕ್ತಿ ಉಕ್ಕಿ ಹರಿಯಲಿ: ಆರ್ ಅಶೋಕ
  • ಅಖಂಡ ಶ್ರೀನಿವಾಸಮೂರ್ತಿ ಮೇಲೆ ಬಿಜೆಪಿಯಿಂದ ಒತ್ತಡ: ಡಿ ಕೆ ಶಿವಕುಮಾರ್
  • ಭಾರತ - ಜರ್ಮನಿ ನಡುವೆ ಒಪ್ಪಂದ; ಬೆಂಗಳೂರಿಗೆ ವಿಮಾನ ಸೇವೆ ಪ್ರಾರಂಭಿಸಿದ ಲುಫ್ತಾನ್ಸಾ
  • ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸಪರ್ವವೇ ಆರಂಭ; ಸ್ವಾತಂತ್ರ್ಯ ದಿನದ ಸಂದೇಶದಲ್ಲಿ ಕೆ ಎಸ್ ಈಶ್ವರಪ್ಪ
  • ಭಾನುವಾರದಿಂದ ಮಾತಾ ವೈಷ್ಣೋ ದೇವಿ ಯಾತ್ರೆ ಆರಂಭ
  • ಭಾರತೀಯರು ಸ್ಥಳೀಯರ ಧ್ವನಿಯಾಗಬೇಕು- ಪ್ರಧಾನಿ ಪ್ರತಿಪಾದನೆ
  • ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಕೋರಿದ ಮುಖ್ಯಮಂತ್ರಿ
  • ಆತ್ಮನಿರ್ಭರ ಭಾರತ, ಪ್ರತಿ ಭಾರತೀಯರ ದಿವ್ಯ ಮಂತ್ರ: ಪ್ರಧಾನಿ
  • ಅಧಿಕೃತ ನಿವಾಸದಲ್ಲೇ ಧ್ವಜಾರೋಹಣ ನೆರವೇರಿಸಿದ ರಾಜನಾಥ್ ಸಿಂಗ್
  • ಕರೋನ ಸಮರದಲ್ಲಿ ಗೆಲ್ಲುವುದೆ ನಮ್ಮ ಮುಖ್ಯ ಗುರಿ: ಮೋದಿ
  • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
Entertainment Share

‘ಹೆಸರೂ ಇಲ್ಲ, ಹಣವೂ ಇಲ್ಲ’ ಕಮಲಿ ಧಾರಾವಾಹಿ ನಿರ್ಮಾಪಕನ ಗೋಳು : ನಿರ್ದೇಶಕರ ವಿರುದ್ಧ ದೂರು

ಬೆಂಗಳೂರು, ಜ 14 (ಯುಎನ್‍ಐ) ಪ್ರತಿದಿನ ಸಂಜೆಯಾಯಿತೆಂದರೆ, ಹೆಂಗಸರು ಟಿವಿ ಮುಂದೆ ಕುಳಿತು ವೀಕ್ಷಿಸುವ ಜನಪ್ರಿಯ ಧಾರಾವಾಹಿಗಳಲ್ಲಿ ‘ಕಮಲಿ’ಯೂ ಒಂದು

ಇದೀಗ ಈ ಧಾರಾವಾಹಿಗೆ ಬಂಡವಾಳ ಹೂಡಿದ್ದ ನಿರ್ಮಾಪಕ ರೋಹಿತ್ ಎಸ್‍, ‘ನ್ಯಾಯ ಕೊಡಿಸಿ’ ಎಂದು ಪೊಲೀಸರ ಮೊರೆ ಹೋಗಿದ್ದು, ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ಧ ದೂರು ನೀಡಿದ್ದಾರೆ.

'ಕಮಲಿ' ನಿರ್ದೇಶಕ ಅರವಿಂದ್ ಕೌಶಿಕ್ ರಿಂದ ನನಗೆ ಮೋಸ ಆಗಿದೆ. ಸ್ಪಷ್ಟನೆ ಬಯಸಿದರೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಉಡಾಫೆ ಉತ್ತರ ಕೊಡುತ್ತಾರೆ'' ಎಂದು ಆರೋಪಿಸಿ ನಿರ್ಮಾಪಕ ರೋಹಿತ್.ಎಸ್ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಗೆ ದೂರು ಕೊಟ್ಟಿದ್ದಾರೆ.

ಕಮಲಿ' ಧಾರಾವಾಹಿಗೆ ಬಂಡವಾಳ ಹಾಕಿದ್ದ ರೋಹಿತ್ 28 ಮೇ 2018 ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾದ ಸೀರಿಯಲ್ 'ಕಮಲಿ'. ಚಿಕೆಗಳ ಟೈಟಲ್ ಕಾರ್ಡ್ ನಲ್ಲಿ 'ನಿರ್ಮಾಪಕ: ರೋಹಿತ್.ಎಸ್' ಎಂದೇ ತೋರಿಸಲಾಗಿದೆ. 286 ಕಂತುಗಳ ಬಳಿಕ ರೋಹಿತ್ ಹೆಸರನ್ನ ತೆಗೆದು ಹಾಕಲಾಗಿದೆ.
'ಕಮಲಿ' ಧಾರಾವಾಹಿಗಾಗಿ ನಿರ್ದೇಶಕ ಅರವಿಂದ್ ಕೌಶಿಕ್ ರವರ ಸತ್ವ ಮೀಡಿಯಾಗೆ ರೋಹಿತ್ ಒಟ್ಟು 73 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಮನೆಯವರ ಒಡವೆಗಳನ್ನು ಅಡವಿಟ್ಟು, ಸಂಬಂಧಿಕರು ಮತ್ತು ಲೇವಾದೇವಿಯವರಿಂದ ಸಾಲ ಪಡೆದು 73 ಲಕ್ಷ ರೂಪಾಯಿಗಳನ್ನು ರೋಹಿತ್ ಹೊಂದಿಸಿದ್ದರು.

ಕಮಲಿ' ಧಾರಾವಾಹಿಗಾಗಿ ಲಕ್ಷಾಂತರ ರೂಪಾಯಿ ನೀಡಿದ್ದರೂ, 287ನೇ ಸಂಚಿಕೆಯಿಂದ 'ಕಮಲಿ' ಧಾರಾವಾಹಿಯ ಟೈಟಲ್ ಕಾರ್ಡ್ ನಲ್ಲಿ ನಿರ್ಮಾಪಕ ರೋಹಿತ್ ಹೆಸರನ್ನು ಪ್ರಸ್ತಾಪಿಸಿಲ್ಲ. ಸಾಲದಕ್ಕೆ, ಧಾರಾವಾಹಿಯಿಂದ ಬಂದ ಲಾಭಾಂಶವನ್ನೂ ನೀಡಿಲ್ಲ ಎಂದು ಆರೋಪಿಸಿ ರೋಹಿತ್ ಇದೀಗ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

'ಕಮಲಿ' ಧಾರಾವಾಹಿಯನ್ನು ಬೇರೆ ನಿರ್ಮಾಪಕರಿಗೆ ವರ್ಗಾಯಿಸಲು ಒಳ ಸಂಚು ರೂಪಿಸಲಾಗಿದೆ. ನಿರ್ದೇಶಕ ಅರವಿಂದ್ ಕೌಶಿಕ್ ಮತ್ತು ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಬಳಿ ಮಾತನಾಡಿದರೆ ಉಡಾಫೆ ಉತ್ತರ ಬರುತ್ತದೆ. ನನಗೆ ಸಾಲ ಕೊಟ್ಟಿರುವವರಿಂದ ಮಾನಸಿಕ ಕಿರುಕುಳ ಆಗುತ್ತಿದೆ. ನನಗೆ ಬರಬೇಕಾದ ಬಂಡವಾಳ, ಲಾಭಾಂಶವನ್ನು ಕೊಡಿಸಿ. ನ್ಯಾಯ ದೊರಕಿಸಿ'' ಎಂದು ಪೊಲೀಸ್ ಆಯುಕ್ತರಲ್ಲಿ ನಿರ್ಮಾಪಕ ರೋಹಿತ್ ಮನವಿ ಮಾಡಿದ್ದಾರೆ
73 ಲಕ್ಷ ಹೂಡಿಕೆ ಹಣ ಮತ್ತು ಲಾಭದ ವಿಚಾರವಾಗಿ 'ಕಮಲಿ' ನಿರ್ದೇಶಕ ಅರವಿಂದ್ ಕೌಶಿಕ್, ಪತ್ನಿ ಶಿಲ್ಪಾ, ನವೀನ್ ಸಾಗರ್ ಮತ್ತು ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ವಿರುದ್ಧ ನಿರ್ಮಾಪಕ ರೋಹಿತ್ ಪೊಲೀಸ್ ಆಯುಕ್ತರಿಗೆ ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ.

ಯುಎನ್‍ಐ ಎಸ್‍ಎ ವಿಎನ್ 1408
More News
ಗೌರಿ-ಗಣೇಶ ಹಬ್ಬಕ್ಕೆ 'ಆಡಿಸಿದಾತ' ಟೀಸರ್

ಗೌರಿ-ಗಣೇಶ ಹಬ್ಬಕ್ಕೆ 'ಆಡಿಸಿದಾತ' ಟೀಸರ್

14 Aug 2020 | 8:57 PM

ಬೆಂಗಳೂರು, ಆ 14 (ಯುಎನ್ಐ) ರಾಘವೇಂದ್ರ ರಾಜಕುಮಾರ್ ಅಭಿನಯದ 'ಆಡಿಸಿದಾತ' ಚಿತ್ರದ ಟೀಸರ್ ಗೌರಿ - ಗಣೇಶ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಲಿದೆ. ಇದು ರಾಘವೇಂದ್ರ ರಾಜಕುಮಾರ್ ಅವರ ಅಭಿನಯದ 25ನೇ ಚಿತ್ರ.

 Sharesee more..

ಎಸ್ ಪಿ ಬಾಲಸುಬ್ರಮಣ್ಯಂ ಆರೋಗ್ಯ ಸ್ಥಿತಿ ಗಂಭೀರ

14 Aug 2020 | 7:35 PM

 Sharesee more..