Wednesday, Feb 26 2020 | Time 11:47 Hrs(IST)
 • ಕಾಶ್ಮೀರದ ಬುದ್ಗಾಮ್‌ನಲ್ಲಿ ಎನ್‌ಐಎ ದಾಳಿ
 • ದೆಹಲಿ ಹಿಂಸಾಚಾರ: ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
 • ಕಾರ್ಮಿಕನ ಬರ್ಬರ ಹತ್ಯೆ
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
business economy Share

10 ಸಾವಿರ ವ್ಯಾಪಾರ ಮಳಿಗೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡ ಫ್ಲಿಪ್ ಕಾರ್ಟ್

ಕೋಲ್ಕತಾ, ಸೆ 10 (ಯುಎನ್ಐ) ಭಾರತದ ಇ-ಮಾರುಕಟ್ಟೆಯ ಮುಂಚೂಣಿಯ ಸಂಸ್ಥೆ ಫ್ಲಿಪ್ ಕಾರ್ಟ್, ಪ್ರಮುಖ ನಗರಗಳು, ಎರಡು ಹಾಗೂ ಮೂರನೇ ಹಂತದ ಪಟ್ಟಣಗಳ ಗ್ರಾಹಕರಿಗೆ ಅನುಕೂಲ ಕಲ್ಪಿಸಲು 'ಫ್ಲಿಪ್ ಕಾರ್ಟ್ ಆಥರೈಸ್ಡ್ ಖರೀದಿ ವಲಯ' ಎಂಬ ಯೋಜನೆಯನ್ನು ಆರಂಭಿಸಿದೆ.
ಈ ಯೋಜನೆಯ ಅಂಗವಾಗಿ ಫ್ಲಿಪ್ ಕಾರ್ಟ್ ದೇಶದ 20 ರಾಜ್ಯಗಳ 700 ನಗರಗಳ ಸುಮಾರು 10 ಸಾವಿರ ವ್ಯಾಪಾರ ಅಂಗಡಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಇದರಿಂದ ಗ್ರಾಹಕರು ಈ ಹಬ್ಬದ ಋತುವಿನಲ್ಲಿ ಮೊಬೈಲ್ ಫೋನ್ ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಅತ್ಯುತ್ತಮ ಅನುಭವ ಪಡೆಯಬಹುದಾಗಿದೆ.
ಈ ಅಂಗಡಿ ಮಾಲೀಕರಿಗೆ , ಗ್ರಾಹಕರಿಗೆ ಫ್ಲಿಪ್ ಕಾರ್ಟ್ ಖಾತೆ ತೆರೆಯಲು ಹಾಗೂ ಅದರಲ್ಲಿ ಬೇಕಾದ ವಸ್ತುಗಳನ್ನು ತಮ್ಮ ದರಕ್ಕೆ ಅನುಗುಣವಾಗಿ ಆಯ್ಕೆ ಮಾಡಲು ನೆರವಾಗುವಂತೆ ತರಬೇತಿ ನೀಡಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಹಿರಿಯ ನಿರ್ದೇಶಕ ಆದಿತ್ಯ ಸೋನಿ, ಭಾರತದಲ್ಲಿ ಸದೃಢ ಪಾಲುದಾರಿಕೆ ಹಾಗೂ ಉತ್ತಮ ಕೊಡುಗೆಗಳನ್ನು ನೀಡುವ ಮೂಲಕ ಸ್ಮಾರ್ಟ್ ಫೋನ್ ಗಳನ್ನು ಅಳವಡಿಸಿಕೊಳ್ಳುವಲ್ಲಿ ಫ್ಲಿಪ್ ಕಾರ್ಟ್ ಪ್ರಮುಖ ಪಾತ್ರ ವಹಿಸಿದೆ. ಫ್ಲಿಪ್ ಕಾರ್ಟ್ ಆಥರೈಸ್ಡ್ ಖರೀದಿ ವಲಯ ಯೋಜನೆ ನಮ್ಮ ಗ್ರಾಹಕರನ್ನು ಇನ್ನಷ್ಟು ಹತ್ತಿರಕ್ಕೆ ಕರೆತರಲಿದ್ದು, ಹೊಸ ಮಾರುಕಟ್ಟೆಯಲ್ಲಿ ನಂಬಿಕೆ, ವಿಶ್ವಾಸಾರ್ಹತೆ ಗಳಿಸಲು ಫ್ಲಿಪ್ ಕಾರ್ಟ್ ಗೆ ನೆರವಾಗಲಿದೆ ಎಂದರು.
ಯುಎನ್ಐ ಎಸ್ಎಚ್ ಕೆಎಸ್ ವಿ 1800
More News

ಕೌಶಲ ತರಬೇತಿ ಜೊತೆಗೆ ಇಂಜಿನಿಯರ್ ಗಳಿಗೆ ಕೆಲಸ

25 Feb 2020 | 11:55 AM

 Sharesee more..

ಹೆಚ್ಚಿದ ಚಿನ್ನದ ದರ

23 Feb 2020 | 10:13 PM

 Sharesee more..
ಪೆಟ್ರೋಲ್ ದರ ಏರಿಕೆ

ಪೆಟ್ರೋಲ್ ದರ ಏರಿಕೆ

23 Feb 2020 | 8:29 PM

ನವದೆಹಲಿ, ಫೆ 23 (ಯುಎನ್ಐ) ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲ ದರ 3,860 ರೂ ಇದ್ದು ದೇಶದಲ್ಲಿ ಹಲವು ದಿನಗಳಿಂದ ಇಳಿಕೆ ಕಂಡಿದ್ದ ಪೆಟ್ರೋಲ್‌ ದರ ಭಾನುವಾರ ಕೊಂಚ ಏರಿಕೆಯಾಗಿದೆ.

 Sharesee more..