Saturday, Dec 5 2020 | Time 01:08 Hrs(IST)
Sports Share

100 ವರ್ಷ ಪೂರೈಸಿದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ರಘುನಾಥ್ ಚಂದೋರ್ ಕರ್

ನವದೆಹಲಿ, ನ.21 (ಯುಎನ್ಐ)- ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ರಘುನಾಥ್ ಚಂದೋರ್ ಕರ್ ಅವರು ಶನಿವಾರ 100 ವಸಂತ ದಿನಗಳನ್ನು ಪೂರೈಸಿದರು. ಅವರು ನೂರು ವರ್ಷದ ಪೂರೈಸಿದ ಮೂರನೇ ಕ್ರಿಕೆಟಿಗ.

100 ವರ್ಷಗಳ ಜೀವನವನ್ನು ಪೂರೈಸಿದ ಇತರ ಇಬ್ಬರು ಭಾರತ ಕ್ರಿಕೆಟಿಗರೆಂದರೆ ಡಿ.ಬಿ.ಯೋಧರ್ ಮತ್ತು ವಸಂತ್ ರೈಜಿ. ಚಂದೋರ್ ಕರ್ ಅವರ ಪ್ರಥಮ ದರ್ಜೆ ಕ್ರಿಕೆಟ್ ನ್ನು 1943/44 ರಿಂದ 1950/51 ರವರೆಗೆ ಆಡಿದರು, ಇದರಲ್ಲಿ ಅವರು ಮಹಾರಾಷ್ಟ್ರ ಮತ್ತು ಮುಂಬೈ ಪರ ಆಡಿದ್ದರು. ಚಂದೋರ್ ಕರ್ ತಮ್ಮ ವೃತ್ತಿಜೀವನದಲ್ಲಿ ಏಳು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಅವರು ಮಹಾರಾಷ್ಟ್ರದ ಪರ ಬಾಂಬೆ ವಿರುದ್ಧ ಪಾದಾರ್ಪಣೆ ಮಾಡಿದರು ಮತ್ತು ಅವರ ಕೊನೆಯ ಪಂದ್ಯ ಬಾಂಬೆ ಪರ ಮಹಾರಾಷ್ಟ್ರದ ವಿರುದ್ಧವಾಗಿತ್ತು. ಚಂದೋರ್ ಕರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದು, ಅವರ ಅದ್ಭುತ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದರು.

ಅವರು ತಮ್ಮ ಏಳು ಪಂದ್ಯಗಳಲ್ಲಿ 155 ರನ್ ಗಳಿಸಿದರು ಮತ್ತು ವಿಕೆಟ್ ಕೀಪಿಂಗ್ ನಲ್ಲಿ ಮೂರು ಕ್ಯಾಚ್ ಮತ್ತು ಎರಡು ಸ್ಟಂಪ್ ಮಾಡಿದ್ದರು. ಪ್ರೊ.ಡಿ.ಬಿ.ಧಿಯೋಧರ್ (1892–1993) ಮತ್ತು ವಸಂತ್ ರೈಜಿ (1920–2020) ಇಬ್ಬರು ಭಾರತೀಯ ಕ್ರಿಕೆಟಿಗರು ತಮ್ಮ 100 ನೇ ಹುಟ್ಟುಹಬ್ಬವನ್ನು ಚಂದೋರ್ ಕರ್ ಮೊದಲು ಆಚರಿಸಿಕೊಂಡಿದ್ದಾರೆ.

ಯುಎನ್ಐ ವಿಎನ್ಎಲ್ 2040