Tuesday, Sep 29 2020 | Time 12:02 Hrs(IST)
  • ಸುಶಾಂತ್ ಸಾವಿನ ಕುರಿತು ಏಮ್ಸ್ ಮಹತ್ವದ ವರದಿ
  • ಮಿತ್ರಪಕ್ಷಗಳ ಬಗ್ಗೆ ಬಿಜೆಪಿ ಮಲತಾಯಿ ಧೋರಣೆ: ಸುಖಬೀರ್
  • ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ದಲಿತ ಯುವತಿ ಸಾವು
  • ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ; ಸುರೇಶ್ ಕುಮಾರ್
  • ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ- ಕುಮಾರಸ್ವಾಮಿ
  • ವಿಶ್ವ ಹೃದಯ ದಿನ: ಹೃದಯ ರಕ್ಷಣೆಗೆ ಆರೋಗ್ಯ ಇಲಾಖೆಯಿಂದ ಸಲಹೆ
  • ಜಾಗತಿಕ ಕೋವಿಡ್ ಸಾವಿನ ಸಂಖ್ಯೆ 10 ಲಕ್ಷ ತಲುಪಿರುವುದು 'ಸಂಕಟ ಮೈಲಿಗಲ್ಲು'- ವಿಶ್ವಸಂಸ್ಥೆ ಮುಖ್ಯಸ್ಥ ಗುಟೇರಸ್
  • ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಉಮಾ ಭಾರತಿ
  • ನಮಾಮಿ ಗಂಗೆ : 6 ಬೃಹತ್ ಯೋಜನೆಗಳಿಗೆ ಮೋದಿ ಚಾಲನೆ
National Share

2014 ರ ಖಗ್ರಾಗಡ್ ಸ್ಫೋಟ ಪ್ರಕರಣ: ಇನ್ನೂ ಇಬ್ಬರು ಆರೋಪಿಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ

ಕೋಲ್ಕತಾ, ಸೆ 16 (ಯುಎನ್‌ಐ) ನಗರದ ವಿಶೇಷ ಎನ್‌ಐಎ ನ್ಯಾಯಾಲಯ 2014 ರ ಖಗ್ರಾಗಡ್ ಸ್ಫೋಟ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
2018 ರ ಡಿ 26 ರಂದು ಬಂಧನಕ್ಕೊಳಗಾದ ಮುಸ್ತಾಫಿಜುರ್‍ ರೆಹಮಾನ್ (ಅಕಾ ಸಾಕಿಬ್ ಮತ್ತು ತುಹಿನ್) ಮತ್ತು 2019 ರ ಜ 28 ರಂದು ಬಂಧಿಸಲ್ಪಟ್ಟ ಕದರ್ ಕಾಜಿ (ಅಕಾ ಕಡೋರ್ ಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ಇಬ್ಬರಿಗೂ ತಲಾ 5,000 ರೂ ದಂಡವನ್ನು ನ್ಯಾಯಾಲಯ ವಿಧಿಸಿದೆ.
2014 ರ ಅಕ್ಟೋಬರ್‌ನಲ್ಲಿ ಬುರ್ದ್ವಾನ್‌ನ ಖಗ್ರಾಗಢ್‍ನಲ್ಲಿ ನಡೆದ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ ನಂತರ ತಕ್ಷಣವೇ ತನಿಖೆ ಆರಂಭಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ನ್ಯಾಯಾಲಯ ಈವರೆಗೆ 30 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ, ಶಿಕ್ಷೆ ವಿಧಿಸಿದೆ.
ಇವರೆಲ್ಲರೂ ಭಾರತದಲ್ಲಿ ಜೆಎಂಬಿ ಉಗ್ರ ಸಂಘಟನೆಯ ಜಾಲಕ್ಕೆ ನೇಮಕಾತಿ ಮತ್ತು ತರಬೇತಿಯಲ್ಲಿ ತೊಡಗಿಸಿಕೊಂಡಿದ್ದರು. ಬಾಂಗ್ಲಾದೇಶದಲ್ಲಿ ಸರ್ಕಾರದ ವಿರುದ್ಧವೂ ಹೋರಾಟಕ್ಕಿಳಿಯುವ ಯೋಜನೆಯನ್ನು ಹೊಂದಿದ್ದರು ಎಂದು ಎನ್‍ಐಎ ಹೇಳಿದೆ.
ಖಗ್ರಾಗಢದ ಮನೆಯೊಂದರಲ್ಲಿ ಆಕಸ್ಮಿಕ ಸ್ಫೋಟ ಸಂಭವಿಸಿ, ಇಬ್ಬರು ಶಂಕಿತ ಭಯೋತ್ಪಾದಕರು ಸಾವನ್ನಪ್ಪಿದ್ದರು. ಬಾಂಬ್‍ ಗಳನ್ನು ತಯಾರಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಮತ್ತೊಬ್ಬ ಉಗ್ರ ಗಾಯಗೊಂಡಿದ್ದ. ಈ ಉಗ್ರರು ಜೆಎಂಬಿ ಸಂಘಟನೆಯೊಂದಿಗೆ ನಂಟು ಹೊಂದಿದ್ದರು.
ಯುಎನ್‍ಐ ಎಸ್ಎಲ್ಎಸ್ 1025
More News
ಬಿಜೆಪಿ ಅನ್ಯಾಯದಿಂದ ರೈತರನ್ನು ಬಚಾವ್ ಮಾಡಿ: ಸೋನಿಯಾ

ಬಿಜೆಪಿ ಅನ್ಯಾಯದಿಂದ ರೈತರನ್ನು ಬಚಾವ್ ಮಾಡಿ: ಸೋನಿಯಾ

28 Sep 2020 | 9:00 PM

ನವದೆಹಲಿ, ಸೆ 28(ಯುಎನ್ಐ) ದೇಶದಾದ್ಯಂತ ರೈತರ ಆಕ್ರೋಶಕ್ಕೆ ಗುರಿಯಾಗಿರುವ ಕೃಷಿ ಕಾಯಿದೆಗಳನ್ನು ನಿರ್ಬಂಧಿಸಲು ಪರ್ಯಾಯ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ.

 Sharesee more..