Saturday, Jan 16 2021 | Time 08:15 Hrs(IST)
business economy Share

444 ರೂ ಗೆ ನಿತ್ಯ 2 ಜಿ.ಬಿ. ಡೇಟಾ: ಗ್ರಾಹಕರಿಗೆ ಜಿಯೋ ಹೊಸ ಪ್ಲಾನ್

ನವದೆಹಲಿ, ಜ 13 (ಯುಎನ್ಐ) ರಿಲಯನ್ಸ್ ಜಿಯೋ ಹೊಸ ವರ್ಷದಲ್ಲಿ ಗ್ರಾಹಕರನ್ನು ಸೆಳೆಯಲು ಹಲವು ಹೊಸ ಬಗೆಯ ರಿಚಾರ್ಜ್ ಪ್ಲ್ಯಾನ್ ಗಳ ಕೊಡುಗೆ ಪ್ರಕಟಿಸಿದೆ.
ಇದರಲ್ಲಿ 444 ರೂಪಾಯಿ ಪ್ಲ್ಯಾನ್ ನಲ್ಲಿ ದಿನಂಪ್ರತಿ 2ಜಿಡಾಟಾ ಉಪಯೋಗಿ ಸಬಹುದಾಗಿದೆ ಎಂದು ಜಿಯೋ ತಿಳಿಸಿದ್ದು, ಇದು ಇತರ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಬಹಳ ಕಡಿಮೆ ಬೆಲೆಯದ್ದಾಗಿದೆ ಎಂದೂ ತಿಳಿಸಿದೆ.
ರಿಲಯನ್ಸ್ 444 ರೂಪಾಯಿ ಪ್ಲ್ಯಾನ್: 56 ದಿನಗಳ ವ್ಯಾಲಿಡಿಟಿಯಿರಲಿದೆ. ಜೊತೆಗೆ ಪ್ರತಿ ದಿನ 2 ಜಿಬಿ ದಿನಂಪ್ರತಿಗ್ರಾಹಕರು 56 ದಿನಗಳಲ್ಲಿ ಒಟ್ಟು 112 ಜಿಬಿ ಡಾಟಾ ಬಳಸಬಹುದಾಗಿದೆ. 444 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಗ್ರಾಹಕರು ಅನಿಯಮಿತ ವಾಯ್ಸ್ ಕರೆಗಳನ್ನು ಜಿಯೋ ನೆಟ್ ವರ್ಕ್ ಹೊರತುಪಡಿಸಿಯೂ ಮಾಡಬಹುದಾಗಿದೆ.
ಗ್ರಾಹಕರು 100 ಎಸ್ ಎಂಎಸ್ ಸೌಲಭ್ಯ ಪಡೆಯಬಹುದು 444 ರೂಪಾಯಿ ಪ್ಲ್ಯಾನ್ ನಂತೆ, ಇತರ ರಿಚಾರ್ಜ್ ಪ್ಲ್ಯಾನ್ ಗಳ ವಿವರ: 598 ರೂಪಾಯಿ, 2,599 ರೂಪಾಯಿ, 599 ರೂಪಾಯಿ ಹಾಗೂ 249 ರೂಪಾಯಿ ದರ ನಿಗದಿಪಡಿಸಲಾಗಿದೆ. ಇವೆಲ್ಲದರಲ್ಲಿಯೂ ದಿನಂಪ್ರತಿ 2 ಜಿಬಿ ಡಾಟಾ ಬಳಸಬಹುದಾಗಿದೆ.2,399 ರೂಪಾಯಿ ರಿಚಾರ್ಜ್ ಮಾತ್ರ ಒಂದು ವರ್ಷದ ವ್ಯಾಲಿಡಿಟಿ ಹೊಂದಿದ್ದು, ಎಲ್ಲಾ ನೆಟ್ ವರ್ಕ್ ಗಳಿಂದಲೂ ಅನಿಯಮಿತ ಕರೆ ಮಾಡಬಹುದಾಗಿದೆ ಎಂದೂ ಕಂಪನಿ ಹೇಳಿದೆ.
ಯುಎನ್ಐ ಕೆಎಸ್ಆರ್ 2125