Monday, Sep 23 2019 | Time 02:26 Hrs(IST)
  • ಇಂಡೋ-ಆಫ್ರಿಕಾ ಚುಟುಕು ಸರಣಿ ಸಮಬಲ
International Share

9/11 ದಾಳಿ ವಾರ್ಷಿಕೋತ್ಸವ, ಅಫ್ಘಾನಿಸ್ತಾನದ ಅಮೆರಿಕಾ ರಾಯಬಾರಿ ಕಚೇರಿ ಬಳಿ ಸ್ಪೋಟ

9/11 ದಾಳಿ ವಾರ್ಷಿಕೋತ್ಸವ,  ಅಫ್ಘಾನಿಸ್ತಾನದ  ಅಮೆರಿಕಾ ರಾಯಬಾರಿ ಕಚೇರಿ  ಬಳಿ ಸ್ಪೋಟ
9/11 ದಾಳಿ ವಾರ್ಷಿಕೋತ್ಸವ, ಅಫ್ಘಾನಿಸ್ತಾನದ ಅಮೆರಿಕಾ ರಾಯಬಾರಿ ಕಚೇರಿ ಬಳಿ ಸ್ಪೋಟ

ಕಾಬೂಲ್, ಸೆ 11(ಯುಎನ್ಐ) 9/11ರ ದಾಳಿಗಳ 18ನೇ ವಾರ್ಷಿಕೋತ್ಸವ ಆಚರಣೆಗೆ ಕೆಲವೇ ನಿಮಿಷಗಳಿಗೆ ಮುನ್ನ ಬುಧವಾರ ಮುಂಜಾನೆ ಅಫ್ಘಾನಿಸ್ತಾನದಲ್ಲಿನ ಅಮೆರಿಕಾ ರಾಯಬಾರಿ ಕಚೇರಿಯ ಸಮೀಪ ರಾಕೆಟ್ ದಾಳಿ ನಡೆಸಲಾಗಿದೆ.

ರಕ್ಷಣಾ ಸಚಿವಾಲಯದ ಕಟ್ಟಡದ ಗೋಡೆಗೆ ರಾಕೆಟ್ ಅಪ್ಪಳಿಸಿದೆ, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಒಳಾಡಳಿತ ಸಚಿವಾಲಯದ ವಕ್ತಾರ ನಸರತ್ ರಹಿಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತನ್ನ ಕಟ್ಟಡದ ಸಮೀಪ ರಾಕೆಟ್ ಅಪ್ಪಳಿಸಿ ಸ್ಪೋಟ ಸಂಭವಿಸಿದೆ ಎಂದು ರಾಯಬಾರಿ ಕಾರ್ಯಾಲಯ ಸಂದೇಶದಲ್ಲಿ ತಿಳಿಸಿದೆ.

ದಾಳಿಯ ಹೊಣೆಯನ್ನು ಈವರೆಗೆ ಯಾವುದೇ ಸಂಘಟನೆ ಘೋಷಿಸಿಕೊಂಡಿಲ್ಲ. ಅಮೆರಿಕಾ- ತಾಲಿಬಾನ್ ನಡುವಣ ಮಾತುಕತೆಯನ್ನು ವಾರಾಂತ್ಯದಲ್ಲಿ ಅಮೆರಿಕಾ ಅಧ್ಯಕ್ಷರು ಸ್ಥಗಿತಗೊಳಿಸಿದ್ದನಂತರ ಅಫ್ಘಾನಿಸ್ತಾನ ರಾಜಧಾನಿಯಲ್ಲಿ ನಡೆದ ಪ್ರಮುಖ ದಾಳಿ ಇದಾಗಿದೆ.

ನಾವು ಕಳೆದ 19 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಶಾಂತಿಪಾಲಕರಾಗಿ ಕಾರ್ಯನಿರ್ವಹಿಸುತ್ತೀದ್ದೇವೆ. ಇದು ಸುದೀರ್ಘವಾಯಿತು ಎಂದು ಒಂದು ಹಂತದಲ್ಲಿ ಹೇಳಲೇ ಬೇಕಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ತಿಳಿಸಿದ್ದರು.

ಕಳೆದ ವಾರ ತಾಲಿಬಾನ್ ನಡೆಸಿದ್ದ ಕಾರ್ ಬಾಂಬ್ ದಾಳಿಯಲ್ಲಿ ಇಬ್ಬರು ನ್ಯಾಟೋ ಸದಸ್ಯರು ಹಾಗೂ ಹಲವು ನಾಗರೀಕರು ಮೃತಪಟ್ಟಿದ್ದರು. ಅಮೆರಿಕಾ ಸೇನಾ ಸದಸ್ಯರೊಬ್ಬರು ದಾಳಿಯಲ್ಲಿ ಮೃತಪಟ್ಟಿದ್ದರು. ತನ್ನ ಸೇನಾಧಿಕಾರಿ ಸಾವಿನಿಂದಾಗಿಯೇ ತಾಲಿಬಾನ್ ಜೊತೆಗಿನ ಮಾತುಕತೆ ಸ್ಥಗಿತಗೊಳಿಸಲು ಕಾರಣ ಎಂದು ಅಮರಿಕಾ ಅಧ್ಯಕ್ಷರು ಹೇಳಿದ್ದರು.

ಯುಎನ್ಐ ಕೆವಿಆರ್ ವಿಎನ್ 1332