Wednesday, Feb 26 2020 | Time 11:58 Hrs(IST)
 • ದೆಹಲಿ ಹಿಂಸಾಚಾರ: ಸಾವಿನ ಸಂಖ್ಯೆ 20ಕ್ಕೆ ಏರಿದೆ
 • ಕಾಶ್ಮೀರದ ಬುದ್ಗಾಮ್‌ನಲ್ಲಿ ಎನ್‌ಐಎ ದಾಳಿ
 • ದೆಹಲಿ ಹಿಂಸಾಚಾರ: ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
 • ಕಾರ್ಮಿಕನ ಬರ್ಬರ ಹತ್ಯೆ
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
International Share

9/11 ದಾಳಿ; ವಿಷಾದದ ನೆನಪಿಗೆ 18 ವರ್ಷ

ವಾಷಿಂಗ್ಟನ್, ಸೆ 11( ಯುಎನ್ಐ) ಗಗನಚುಂಬಿ ನಗರಿ ನ್ಯೂಯಾರ್ಕ್‍ ವಿಶ್ವ ವಾಣಿಜ್ಯ ಕೇಂದ್ರ(ಡಬ್ಲ್ಯುಟಿಸಿ) ಮೇಲೆ ನಡೆದ ಭೀಕರ ಭಯೋತ್ಪಾದನೆ ದಾಳಿಗೆ ಇಂದು 18 ವರ್ಷ.
ಅಲ್ ಖೈದಾ ಉಗ್ರರು ನಡೆಸಿದ ಈ ದಾಳಿಯಲ್ಲಿ 3,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು.
ಅಮರಿಕಾದ ಮೇಲೆ ಅಲ್ ಖೈದಾ ನಡೆಸಿದ ದಾಳಿಗಳ ಪೈಕಿ, 9/11 ದಾಳಿಗಳು ಇನ್ನೂ ವಿಶ್ವ ಇತಿಹಾಸದ ದುಃಖದ ಸಂಕೇತವಾಗಿದೆ ಉಳಿದಿದೆ.
ಸೌದಿ ಅರೇಬಿಯಾ ಮತ್ತು ಇತರ ಅರಬ್ ದೇಶಗಳಿಗೆ ಸೇರಿದವರು ಈ ದಾಳಿಯಲ್ಲಿ ಪಾಲ್ಗೊಂಡಿದ್ದು ನಂತರ ಬಹಿರಂಗಗೊಂಡಿತ್ತು. ಈ ಗುಂಪಿನ ನೇತೃತ್ವವನ್ನು ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ವಹಿಸಿದ್ದ. 18ನೇ ವರ್ಷಾಚರಣೆಯ ಅಂಗವಾಗಿ ಅಮೇರಿಕಾದಲ್ಲಿ 9/11 ಮೃತರಿಗೆ ನಮನ ಸಲ್ಲಿಸಲಾಗುತ್ತದೆ.
ಈ ಭಯಾನಕ ದಾಳಿ ನಡೆದು ಸುಮಾರು ಎರಡು ದಶಕ ಕಳೆದಿದ್ದರೂ, ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರ ಅಮೆರಿಕ ಇನ್ನೂ ಕೂಡ ಈ ವಿಧ್ವಂಸಕ ದಾಳಿಯ ಭೀಕರತೆಯಿಂದ ಇನ್ನೂ ಹೊರಬರಲು ಹೆಣಗುತ್ತಿದೆ.
ಇಂದಿಗೆ ಸರಿಯಾಗಿ 18 ವರ್ಷಗಳ ಹಿಂದೆ ಸೆಪ್ಟೆಂಬರ್ 11, 2001ರಂದು ಅಲ್ ಖೈದಾ ಉಗ್ರರು ಎರಡು ವಿಮಾನಗಳನ್ನು ಅಪಹರಿಸಿ ಗಗನ ಚುಂಬಿ ಅವಳಿ ಗೋಪುರಗಳ ಮೇಲೆ ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿದ್ದರು. ಇಡೀ ಜಗತ್ತಿನ ವಾಣಿಜ್ಯ-ವ್ಯವಹಾರದ ಕೇಂದ್ರ ಬಿಂದುವಿನಂತಿದ್ದ ಡಬ್ಲ್ಯುಟಿಸಿ ಕಟ್ಟಡಗಳು ತರಗೆಲೆಯಂತೆ ನೆಲಕ್ಕುರುಳಿದವು. ವಿಶ್ವದ ಅತ್ಯಂತ ಶಕ್ತಿಶಾಲಿ ದೇಶ ಅಮೆರಿಕದ ಮೇಲೆ ನಡೆದ ಉಗ್ರರ ಘೋರ ಕೃತ್ಯದಿಂದಾಗಿ ಇಡೀ ಜಗತ್ತೇ ದಿಗ್ಭ್ರಮೆಗೊಂಡಿತ್ತು. ಮತ್ತೊಂದು ಉಗ್ರಗಾಮಿಗಳ ತಂಡ ವಾಷಿಂಗ್ಟನ್‍ನಲ್ಲಿರುವ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಮೇಲೆ ದಾಳಿ ನಡೆಸಿತ್ತು.
9/11ರ 18ನೇ ವರ್ಷದ ಸಂದರ್ಭದಲ್ಲಿ ಡಬ್ಲ್ಯುಟಿಸಿ ಬಳಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೇಣದ ಬತ್ತಿಗಳನ್ನು ಬೆಳಗಿಸಿ ಸಾರ್ವಜನಿಕರು ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಆತ್ಮಶಾಂತಿ ಕೋರಿದರು. ದಾಳಿಯಲ್ಲಿ ಮಡಿದವರಿಗೆ ನಾವು ಪ್ರತಿವರ್ಷ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಇಂಥ ಭೀಕರ ಘಟನೆ ಇಂದಿಗೂ ಅಮೆರಿಕನ್ನರನ್ನು ಕಾಡುತ್ತಿದೆ ಎಂದು ಶ್ರದ್ಧಾಂಜಲಿ ಸಮರ್ಪಿಸಿದವರು ಹೇಳಿದರು.
ಇಂದು ನ್ಯೂಯಾರ್ಕ್, ವಾಷಿಂಗ್ಟನ್ ಸೇರಿದಂತೆ ಅಮೆರಿಕದಾದ್ಯಂತ ಈ ಕರಾಳ ನೆನೆಪಿನ ದಿನ ಆಚರಿಸಲಾಗುತ್ತಿದೆ. ದಾಳಿಯಲ್ಲಿ ಮೃತಪಟ್ಟವರ ಗೌರವಾರ್ಥ ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆಯುತ್ತಿವೆ. ನ್ಯಾಷನಲ್ ಮೆಮೊರಿಯಲ್ ಮ್ಯೂಸಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.
ಯುಎನ್ಐ ಕೆವಿಆರ್ ವಿಎನ್ 1302